ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿರುವ ಧ್ವಜ ಸ್ತಂಭದ ಮರುನಿರ್ಮಾಣದ ಕಥೆ ಕೇಳಿದ್ದೀರಾ?

admin by admin
August 31, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

1982 ರಲ್ಲಿ ದೇವಸ್ಥಾನದ ಪುನರ್ನವೀಕರಣದ ಕಾರ್ಯವನ್ನು ಕೈಗೆತ್ತಿಕೊಂಡು, ಅಲ್ಲಿ ಸುಮಾರು 190 ವರ್ಷಗಳಿಂದ ನಿಂತಿದ್ದ ಧ್ವಜಸ್ತಂಭದ ಬಂಗಾರದ ಹೊರಕವಚವನ್ನೂ ಪಾಲಿಶ್ ಮಾಡಿಸಬೇಕೆಂದು ನಿರ್ಧರಿಸಿ ಅದರ ಕೆಳಭಾಗದ ಪ್ಲೇಟ್ ಗಳನ್ನು ತೆಗೆದಾಗ ಒಳಗಿನ ಟೀಕ್ ಮರ ಜೀರ್ಣ ಶೀರ್ಣವಾಗಿದ್ದು ಕಂಡುಬಂತು. ನೆಲದಲ್ಲಿ ಹುದುಗಿದ್ದ ಸ್ತಂಭದ ಭಾಗ ವಸ್ತುತಃ ಇರಲೇ ಇಲ್ಲ. ಬಂಗಾರದ ಕವಚದ ಆಧಾರದ ಮೇಲೆಯೇ ಆ ಸ್ತಂಭ ಇಷ್ಟು ಕಾಲ ನಿಂತಿದ್ದು ನೋಡಿ ಆಡಳಿತವರ್ಗದವರಿಗೆ ಆಘಾತ ವಾಯಿತು. ಈಗ ಪೂರ್ತಿ ಹೊಸ ಸ್ತಂಭ ವನ್ನೇ ಹಾಕುವುದು ಅನಿವಾರ್ಯ ವಾಯಿತು.

ಅಲ್ಲಿನ ಆಗಮಶಾಸ್ತ್ರದ ಪ್ರಕಾರ ಧ್ವಜಸ್ತಂಭಕ್ಕೆ ಕಟ್ಟುನಿಟ್ಟಾದ ನಿಯಮಗಳಿವೆ. ಆ ತರಹದ ಮರದ ಕಂಬಕ್ಕಾಗಿ ಶೋಧನೆ ಶುರುವಾಯಿತು. ಅದರ ವಿವರಗಳನ್ನು ರೇಡಿಯೋದಲ್ಲೂ, ಪತ್ರಿಕೆ ಗಳಲ್ಲೂ ಪ್ರಚಾರ ಮಾಡಿದರು. ಕೊನೆಗೆ ಬೆಂಗಳೂರಿನ ಭಕ್ತರೊಬ್ಬರು ಕರ್ನಾಟಕದ ದಾಂಡೇಲಿಯ ಅರಣ್ಯದಲ್ಲಿ ಅಂತಹ ಹಳೆಯ ತೇಗದ ಮರಗಳಿರುವುದಾಗಿಯೂ, ಅಪ್ಪಣೆ ಕೊಟ್ಟರೆ ಸ್ವಾಮಿ ಸೇವೆಯೆಂದು ಅದನ್ನು ಕೊಡಿಸುವ ವ್ಯವಸ್ಥೆ ಮಾಡುವುದಾಗಿಯೂ ಹೇಳಿ ಮುಂದೆ ಬಂದರು. ಅದಕ್ಕೆ ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದಿ.ಗುಂಡೂರಾವ್ ಅವರೂ ಬೇಕಾದ ಸಹಾಯ ಮಾಡಲು ಮುಂದೆ ಬಂದರು.

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

July 1, 2026
ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

July 1, 2026

ತಜ್ಞರ ತಂಡ ಅಲ್ಲಿಗೆ ಹೋಗಿ ಮುನ್ನೂರು ವರ್ಷ ವಯಸ್ಸಿನ , 75 ಅಡಿ ಎತ್ತರದ 6 ಮರಗಳನ್ನು ಆಯ್ಕೆ ಮಾಡಿತು. ಅವುಗಳನ್ನು ಇಡೀದಿಮ್ಮಿಯಾಗಿ ಆ ದಟ್ಟ ಕಾಡಿನಿಂದ ಹೊರಗೆ ತರುವುದು ಭಾರೀ ಸಮಸ್ಯೆ ಆಯಿತು. ತಾತ್ಕಾಲಿಕ ರಸ್ತೆ ನಿರ್ಮಿಸುವ ಜವಾಬ್ದಾರಿಯನ್ನು ಆಗಿನ ಚೀಫ಼್ ಕನ್ಸರ್ವೇಟರ್ ಆಫ಼್ ಫಾ಼ರೆಸ್ಟ್ಸ್ ವಹಿಸಿಕೊಂಡು ನಿರ್ಮಿಸಿ ಕೊಟ್ಟರು. ಆ ದಿಮ್ಮಿಗಳನ್ನು ಕಾಡಿನ ಅಂಚಿನವರೆಗೆ ತರಲು ತಕ್ಕ ಕ್ರೇನ್ ವ್ಯವಸ್ಥೆ ಯನ್ನು ಅಲ್ಲಿನ ಸೋಮಾನಿ ಪೇಪರ್ ಮಿಲ್ಸ್ ನವರು ವ್ಯವಸ್ಥೆ ಮಾಡಿದರು.

ಕಾಡಿನ ಅಂಚಿಗೆ ಬಂದವು ಆರೂ ದಿಮ್ಮಿಗಳು. ಅಲ್ಲಿಂದ ತಿರುಪತಿ ಗೆ ಒಯ್ಯಲು 16 ಚಕ್ರಗಳ ಟ್ರೈಲರ್ ಲಾರಿ ಬಂದಿತ್ತು. 430 ಕಿಲೋಮೀಟರ್ ದೂರ ತಿರುಪತಿ ಬೆಟ್ಟದ ಬುಡಕ್ಕೆ. ಬಾಡಿಗೆ 70 ಸಾವಿರ ಎಂದು ನಿಗದಿ ಮಾಡಿತ್ತು. ಡ್ರೈವರ್ ಎಲ್ಲವನ್ನೂ ಒಂದುಸಲ ಪರಿಶೀಲಿಸಿ, ಆಕಾಶದ ಕಡೆಗೊಮ್ಮೆ ಕೈಮುಗಿದು ‘ಗೋವಿಂದಾ, ಗೋವಿಂದ’ ಎಂದು ಜೋರಾಗಿ ಕೂಗಿ ಲಾರಿ ಹತ್ತಿದ. ನೆರೆದವರೆಲ್ಲರ ‘ಗೋವಿಂದಾ, ಗೋವಿಂದ’ ಕೂಗುಗಳೊಂದಿಗೆ ಲಾರಿ ಹೊರಟಿತು.

ಮರುದಿನ ಸಂಜೆಯ ಹೊತ್ತಿಗೆ ಬೆಟ್ಟದ ಕೆಳಗಿನ ಅಲಿಪಿರಿ ತಲುಪಿತು. ಯಾವುದೇ ವಿಘ್ನಗಳು ಸಂಭವಿಸಲಿಲ್ಲ. ಲಾರಿಯನ್ನು ಕಂಡೊಡನೆ ಸ್ವಾಗತಕ್ಕೆ ಸಿದ್ಧವಾಗಿ ನೆರೆದಿದ್ದ ಜನಸ್ತೋಮ ಜೈಕಾರ ಮಾಡುತ್ತಾ ‘ಗೋವಿಂದಾ, ಗೋವಿಂದ’ ಕೂಗುತ್ತಾ ಸ್ವಾಗತಿಸಿದರು. ಈ ತನಕ ಸುಮುಖವಾಗಿತ್ತು. ಇನ್ನು ಮುಂದಿನ ಹದಿನೆಂಟು ಕಿಲೋಮೀಟರ್ ನ ಘಾಟ್ ರಸ್ತೆ ಯ ಪ್ರಯಾಣವೇ ಎಲ್ಲಕ್ಕಿಂತ ಕಠಿಣವಾದದ್ದು ಹಾಗೂ ಅಪಾಯಕರವಾದದ್ದು ಎನ್ನುವುದು ಡ್ರೈವರ್ ಗೂ, ಟಿ.ಟಿ. ಡಿ ಛೇರ್ಮನ್ ರಾಗಿದ್ದ ನಾಗಿರೆಡ್ಡಿ ಮತ್ತು ಸ್ಪೆಷಲ್ ಆಫೀ಼ಸರ್ ಆಗಿದ್ದ ಪಿ.ವಿ.ಎಸ್.ಆರ್. ಕೆ ಪ್ರಸಾದ್ ರವರಿಗೂ ಚೆನ್ನಾಗಿ ಮನವರಿಕೆಯಾಗಿತ್ತು ಅಲ್ಲದೆ ಆತಂಕವನ್ನೂ ಕೊಟ್ಟಿತ್ತು.

ಡ್ರೈವರ್ ಒಂದು ಸಲ ಉಸಿರು ತೆಗೆದುಕೊಂಡು ಬೆಟ್ಟದ ಮೇಲೆ ನೋಡಿ ಕೈಮುಗಿದ. ಛೇರ್ಮನ್ ರಿಗೆ ಹೇಳಿದ ” ಸಾರ್, ಕಷ್ಟದ ಕೆಲಸ ನಿಜ, ನನ್ನ ಸರ್ವೀಸ್ ನಲ್ಲೇ ಈ ತರಹದ ಲೋಡ್ ಸಾಗಿಸಿಲ್ಲ. ಆದರೆ ನಮ್ಮ ವೆಂಕಟೇಶ್ವರ ಸ್ವಾಮಿಯ ದಯೆಯಿಂದ ಖಂಡಿತ ದಿಮ್ಮಿಗಳನ್ನು ರಾತ್ರಿ ಒಳಗೆ ಮೇಲಕ್ಕೆ ಮುಟ್ಟಿಸುತ್ತೇನೆ. ಇದು ಸ್ವಾಮಿ ನನಗೆ ಒಪ್ಪಿಸಿರುವ ಮಹತ್ಕಾರ್ಯ. ಏಳು ತಿರುವುಗಳಿವೆ. ಕೆಲವು ಕಡೆ ಟ್ರೈಲರ್ ತಗಲಿ ಪೌಳಿ ಗೋಡೆ ಬೀಳಬಹುದು, ಕೆಲವು ಕಡೆ ಬಂಡೆಗಳಿಗೆ ತಾಕಿ ಬಂಡೆಗಳುರುಳಬಹುದು. ಏನೂ ಚಿಂತೆ ಇಲ್ಲ. ಒಂದೇ ಕೋರಿಕೆ ನನ್ನದು. ರಸ್ತೆಯಲ್ಲಿ ಯಾವುದೇ ಸಂಚಾರ ಇಲ್ಲದಂತೆ ವ್ಯವಸ್ಥೆ ಮಾಡಿ. ಇನ್ನೊಂದು ಗಂಟೆಯಲ್ಲಿ ಮೇಲೆ ತಲುಪಿಸುತ್ತೇನೆ” ಎಂದು ಆಶ್ವಾಸನೆ ಕೊಟ್ಟ. ಅದರಂತೆ ಅಷ್ಟು ಕಾಲ ಎಲ್ಲಾ ವಾಹನ ಸಂಚಾರವನ್ನೂ ಹಳೆಯ ರಸ್ತೆಗೆ ತಿರುಗಿಸಿದರು.

ಡ್ರೈವರ್ ಬೆಟ್ಟಕ್ಕೂ ಲಾರಿಗೂ ಮತ್ತೊಮ್ಮೆ ಕೈಮುಗಿದು ಇಂಜಿನ್ ಸ್ಟಾರ್ಟ್ ಮಾಡಿದ. ಅಷ್ಟೇ. 55ನಿಮಿಷಗಳಲ್ಲಿ ನಿರ್ವಿಘ್ನವಾಗಿ ದಿಮ್ಮಿಗಳು ದೇವಸ್ಥಾನದ ಪ್ರಾಂಗಣವನ್ನು ತಲುಪಿದವು. ಪ್ರತಿಯೊಬ್ಬರೂ ದೊಡ್ಡ ನಿಟ್ಟುಸಿರು ಬಿಟ್ಟು “ಗೋವಿಂದಾ ಗೋವಿಂದ” ಎಂದು ಕೂಗುತ್ತಾ ಕುಣಿದಾಡಿದರು, ಉದ್ದಂಡ ನಮಸ್ಕಾರ ಹಾಕಿದರು. ಛೇರ್ಮನ್ ರವರು ಬಹಳ ಸಂತೋಷದಿಂದ ಡ್ರೈವರ್ ಗೂ ಜೊತೆಯಲ್ಲಿದ್ದ ಲಾರಿ ಮಾಲಿಕನಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸಿ ಒಪ್ಪಿಕೊಂಡ 70 ಸಾವಿರಕ್ಕೆ ಚೆಕ್ ಬರೆದು ಕೊಡಲು ಹೋದರು. ಆದರೆ ಅವರಿಬ್ಬರೂ ಚೆಕ್ ಮುಟ್ಟಲಿಲ್ಲ.

“ಸಾರ್, ಇದು ಸ್ವಾಮಿ ನಮಗೆ ಒಪ್ಪಿಸಿದ ಸೇವೆಯ ಕಾರ್ಯ. ಅವನ ಕೆಲಸಕ್ಕೆ ನಾವು ಹಣ ತೆಗೆದುಕೊಳ್ಳುವುದೇ??. ಖಂಡಿತ ಸಾಧ್ಯವಿಲ್ಲ ಸಾರ್” ಎಂದು ಹೇಳಿ ನಮಸ್ಕಾರ ಮಾಡಿ ವಾಪಸ್ ಹೊರಟುಬಿಟ್ಟರು.

ಛೇರ್ಮನ್ ರ ಮುಂಚೂಣಿ ಯಲ್ಲಿ ಧ್ವಜ ಸ್ತಂಭದ ಕೆಲಸ ಅಷ್ಟೇ ಮುತುವರ್ಜಿ, ಉತ್ಸಾಹಗಳಿಂದ ಪೂರ್ಣ ಗೊಂಡು 1982 ರ ಜೂನ್ ತಿಂಗಳ 10ನೇ ತಾರೀಕಿನ ದಿನ ಹೊಸ ಧ್ವಜಸ್ತಂಭವನ್ನು ವಿಧ್ಯುಕ್ತವಾಗಿ ಸ್ಥಾಪಿಸಲಾಯಿತು.
ಇದು, ಕರ್ನಾಟಕದ ದಾಂಡೇಲಿಗೂ ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಕ್ಕೂ ಇರುವ ಅನುಬಂಧ!

(ತೆಲುಗು ಮೂಲ. ಸಂಗ್ರಹಾನುವಾದ: ಜೆ.ಬಿ.ಪಿ)

ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275

Tags: #saakshatv.comSri Venkateswara Temple in TirupatitirumalaTirupati
ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

by Shwetha
July 1, 2026
0

ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

by Shwetha
July 1, 2026
0

ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ...

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

by Shwetha
July 1, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣ ಈಗ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೀನಾಯ ಘಟನೆಯಿಂದ ಮನನೊಂದ ಪ್ರದೀಪ್...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

by Shwetha
July 1, 2026
0

ಚಂಪತ್ ರೈ ಅವರು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಟಿನ್ನು ಯಾದವ್ ಹೀಗೆ...

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

by Shwetha
July 1, 2026
0

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram