ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು.
84 ವರ್ಷದ ಪ್ರಣವ್ ಮುಖರ್ಜಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಅದನ್ನು ತೆಗೆಯಲು ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಗೂ ಮುನ್ನ ಮಾಡಲಾಗಿದ್ದ ವೈದ್ಯಕೀಯ ತಪಾಸಣೆ ವೇಳೆ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯ ಗಂಭೀರವಾಗಿಯೇ ಮುಂದುವರಿದಿತ್ತು ಮತ್ತು ವೆಂಟಿಲೇಟರ್ ನೆರವಿನಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸೇನಾ ಆಸ್ಪತ್ರೆಯ ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಅವರು ಅಗಸ್ಟ್ 31 ರಂದು ವಿಧಿವಶರಾದರು.
ಬದುಕಿನುದ್ದಕ್ಕೂ ಮೇಧಾವಿತನವನ್ನೇ ಮೆರೆದ ಪ್ರಣಬ್ ಮುಖರ್ಜಿ, ತಮ್ಮ ಜೀವಿತದಲ್ಲಿ ದೇಶದ ಪರಮೋಚ್ಚ ಪದವಿಯಾದ ರಾಷ್ಟ್ರಪತಿ ಹುದ್ದೆಯನ್ನು 2012 ರಿಂದ 2017 ರವರೆಗೆ ಗೌರವದಿಂದ ನಿರ್ವಹಿಸಿದರು. ಪ್ರಣಬ್ ಮುಖರ್ಜಿ ಪ್ರಧಾನಿ ಪದವಿಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಮುಖ ಸ್ಥಾನಗಳನ್ನು ನಿಭಾಯಿಸಿದ ಶ್ರೇಷ್ಠ ಮುತ್ಸದ್ಧಿ
ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ
- ವಿಜ್ಞಾನ-ವೇದಾಂತದ ಸಂಗಮಕ್ಕೆ ಸಾಕ್ಷಿಯಾದ ಅರಮನೆ ಮೈದಾನ - ದಕ್ಷಿಣಾಸ್ಯ ದರ್ಶಿನಿ: ಕಣ್ಮನ ಸೆಳೆದ ದ್ವಾರಕಾ ದರ್ಶನ - ಪ್ರಾಚೀನ ಜ್ಞಾನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ -...








