ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಗೆ ಜನ್ಮದಿನದ ಸಂಭ್ರಮ

admin by admin
September 2, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಇಂದು ಸ್ಯಾಂಡಲ್ ವುಡ್ ನ ಬಾದ್ ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರ ಜನ್ಮದಿನ. 46ನೇ ವಸಂತಕ್ಕೆ ಕಾಲಿಟ್ಟ ಮಾಣಿಕ್ಯನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ರನ್ನನ ಅಭಿಮಾನಿಗಳು ಕಾಮನ್ ಡಿಪಿ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.

ಚಂದನವನದಲ್ಲಿ ‘ಕಿಚ್ಚ’ ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹು ಮುಖ ಹಾಗೂ ಬಹು ಭಾಷಾ ಪ್ರತಿಭೆ. ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳ ಮಗನಾಗಿ 2 ಸೆಪ್ಟೆಂಬರ್ 1973 ರಲ್ಲಿ ಜನಿಸಿದ ನಮ್ಮೆಲ್ಲರ ‘ದೀಪು’. ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.

Related posts

cwg-2026-javelin-rumesh-gold-neeraj-chopra-silver-yashvir-bronze

ಕಾಮನ್‍ವೆಲ್ತ್ ಗೇಮ್ಸ್ 2026 – ರುಮೇಶ್‍ಗೆ ಚಿನ್ನ, ನೀರಜ್‍ಗೆ ಬೆಳ್ಳಿ.. ಯಶ್ವೀರ್‍ಗೆ ಕಂಚು, ನದೀಮ್‍ಗೆ ನಿರಾಸೆ..!

August 1, 2026
india-judo-two-gold-one-silver-commonwealth-games-2026-history

cwg-2026- ನೀಗಿದ 35 ವರ್ಷಗಳ ಬರ.. ಎರಡು ಚಿನ್ನ. ಒಂದು ಬೆಳ್ಳಿ.. ಜುಡೋ ಅಖಾಡದಲ್ಲಿ ಮೊಳಗಿದ ಭಾರತದ ರಾಷ್ಟ್ರಗಿತೆ.

August 1, 2026

ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ ಸುದೀಪ್ ಅಂಡರ್ 17 ಹಾಗೂ ಅಂಡರ್ 19 ಕ್ರಿಕೆಟ್ ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದಾರೆ. ಸುದೀಪ್ ಗೆ ನಟನೆ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಮುಂಬೈನ ರೋಶನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಗೆ ಸೇರಿಕೊಂಡು ತರಬೇತಿ ಪಡೆದರು.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆಗೆ ಸುದೀಪ್ ಪದಾರ್ಪಣೆ ಮಾಡಿದರು. ‘ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುದೀಪ್ ಎಂಟ್ರಿಕೊಟ್ಟರು. ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ ಚಿತ್ರಕ್ಕಾಗಿ ಬಣ್ಣ ಹಚ್ಚಿ ಭರವಸೆ ನಟ ಎನಿಸಿಕೊಂಡರು. ಆದ್ರೆ 2001 ರಲ್ಲಿ ತೆರೆಗೆ ಬಂದ ‘ಹುಚ್ಚ’ ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು. ಈ ಸಿನಿಮಾ ಸುದೀಪ್ ಅವರನ್ನು ಸ್ಟಾರ್ ಪಟ್ಟದಲ್ಲಿ ಕೂರಿಸಿತು. ಹಾಗೇ ಆಂಗ್ರಿ ಯಂಗ್ ಮ್ಯಾನ್ ಆಗಿ ಸುದೀಪ್ ಎಲ್ಲರ ಮನ ಗೆದ್ದು ಕರುನಾಡ ಮನೆಮಗನಾದರು.

ಅಂದಹಾಗೆ ಸುದೀಪ್ ಕೇವಲ ನಟ ಮಾತ್ರ ಅಲ್ಲ. ಪ್ರತಿಭಾವಂತ ನಿರ್ದೇಶಕ ಕೂಡ. ಇವರು ನಿರ್ದೇಶಿಸಿದ ‘ಮೈ ಆಟೋಗ್ರಾಫ್’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’ ಚಿತ್ರಗಳು ಭರ್ಜರಿ ಪ್ರದರ್ಶನಗೊಂಡಿವೆ.

ಸುದೀಪ್ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲಿಯೂ ಮಿಂಚಿದ್ದಾರೆ. ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಫೂಂಕ್’, ತೆಲುಗಿನ ‘ಈಗ’, ‘ಬಾಹುಬಲಿ’ ಸೈರಾ ನರಸಿಂಹ ರೆಡ್ಡಿ ಹಾಗೂ ತಮಿಳಿನ ‘ಪುಲಿ’ ಚಿತ್ರಗಳಲ್ಲಿ ನಟಿಸಿ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸುದೀಪ್ ಕನ್ನಡದ ಪತಾಕೆ ಹಾರಿಸುತ್ತಿದ್ದಾರೆ.

ಇನ್ನು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ಕಾರ್ಯಕ್ರಮದ ನಿರೂಪಕರಾಗಿಯೂ ಸುದೀಪ್ ಸಕ್ರಿಯರಾಗಿದ್ದಾರೆ. 2001 ರಲ್ಲಿ ಪ್ರಿಯಾ ಅವರನ್ನ ಸುದೀಪ್ ಕೈಹಿಡಿದರು. ಈ ದಂಪತಿಗೆ ಓರ್ವ ಪುತ್ರಿ ಇದ್ದಾಳೆ.

ಬರೋಬ್ಬರಿ 25 ವರ್ಷಗಳಿಂದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುದೀಪ್ ಸೋಲು ಗೆಲುವುಗಳು ಕಂಡಿದ್ದಾರೆ. ಯಶಸ್ಸಿನ ಶಿಖರವನ್ನೇರಿದರೂ ಹಿರಿಯರಿಗೆ ತಲೆಬಾಗಿ ಕಿರಿಯರಿಗೆ ಮಾರ್ಗದರ್ಶಕನಾಗಿ ತಮ್ಮದೇ ಆದ ದಾರಿಯಲ್ಲಿ ಸಾಗುತ್ತಿದ್ದಾರೆ. ಇದು ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಮಾಣಿಕ್ಯ, ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕರ ಜೀನವಕ್ಕೆ ದೀಪವಾಗಿದ್ದಾರೆ.

ಅಭಿಮಾನಿಗಳ ಅಭಿಮಾನಿ ಕಿಚ್ಚ ಹೀಗೆ ನಗುನಗುತ್ತಾ ಮುಂದೆ ಸಾಗಲಿ.. ಕೇವಲ ನಟನೆಯ ಮೂಲಕ ದೇಶ ವಿದೇಶಗಳಲ್ಲೂ ಕನ್ನಡದ ಪತಾಕೆ ಹಾರಿಸುತ್ತಿರುವ ನಮ್ಮ ಕಿಚ್ಚ ಸುದೀಪ್ ಗೆ ನಮ್ಮ ಕಡೆಯಿಂದ ಜನ್ಮದಿನದ ಶುಭಾಶಯಗಳು.. ಹ್ಯಾಪಿ ಬರ್ತ್ ಡೇ ಸುದೀಪ್..

 

ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

 

Tags: #saakshatv.comKiccha SudeepaSandalwoodSandalwood BadShah Kichcha Sudeepಕಿಚ್ಚ ಸುದೀಪ್
ShareTweetSendShare
Join us on:

Related Posts

cwg-2026-javelin-rumesh-gold-neeraj-chopra-silver-yashvir-bronze

ಕಾಮನ್‍ವೆಲ್ತ್ ಗೇಮ್ಸ್ 2026 – ರುಮೇಶ್‍ಗೆ ಚಿನ್ನ, ನೀರಜ್‍ಗೆ ಬೆಳ್ಳಿ.. ಯಶ್ವೀರ್‍ಗೆ ಕಂಚು, ನದೀಮ್‍ಗೆ ನಿರಾಸೆ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್‍ನಲ್ಲಿ ಚಿನ್ನದ ಪದಕ ಗೆಲ್ಲುವ ನೀರಜ್ ಚೋಪ್ರಾ ಕನಸು ಭಗ್ನಗೊಂಡಿದೆ. ಆದ್ರೂ ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚೋಪ್ರಾ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾನೆ....

india-judo-two-gold-one-silver-commonwealth-games-2026-history

cwg-2026- ನೀಗಿದ 35 ವರ್ಷಗಳ ಬರ.. ಎರಡು ಚಿನ್ನ. ಒಂದು ಬೆಳ್ಳಿ.. ಜುಡೋ ಅಖಾಡದಲ್ಲಿ ಮೊಳಗಿದ ಭಾರತದ ರಾಷ್ಟ್ರಗಿತೆ.

by admin
August 1, 2026
0

ಜೂಡೋ ಸ್ಪರ್ಧೆಯಲ್ಲಿ ಇತಿಹಾಸ ಬರೆದ ಭಾರತದ ಸ್ಪರ್ಧಿಗಳು. ಎರಡು ಚಿನ್ನ, ಒಂದು ಬೆಳ್ಳಿ. 35 ವರ್ಷಗಳ ಬರ ನೀಗಿಸಿದ ಭಾರತೀಯ ಜೂಡೋ ಸ್ಪರ್ಧಿಗಳು. 1990ರ ಆಕ್ಲಂಡ್ ಕಾಮನ್‍ವೆಲ್ತ್...

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

by admin
August 1, 2026
0

ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ. ವೃತ್ತಿ ಜೀವನದಲ್ಲಿ...

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

by admin
August 1, 2026
0

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2...

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram