ನವದೆಹಲಿ : ಕೊರೊನಾ ವೈರಸ್ ಸೋಂಕು, ಜಿಡಿಪಿ, ಚೀನಾದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿತ, ಕೊರೊನಾ ಸಾಂಕ್ರಾಮಿಕ ಕಾಯಿಲೆಯಲ್ಲಿ ಏರಿಕೆ, ಗಡಿಯಲ್ಲಿ ವಿದೇಶಗಳ ಆಕ್ರಮಣ ಇವುಗಳು ಮೋದಿ ನಿರ್ಮಿತ ದುರಂತವಾಗಿದ್ದು ಇದರಿಂದ ಭಾರತ ದೇಶ ತತ್ತರಿಸಿ ಹೋಗಿದೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ನಲ್ಲಿ..
“ಮೋದಿ ನಿರ್ಮಿತ ವಿಪತ್ತುಗಳಿಂದ ಭಾರತ ತತ್ತರಿಸುತ್ತಿದೆ
1. ಐತಿಹಾಸಿಕ ಜಿಡಿಪಿ ಕಡಿತ -23.9 ಶೇ.
2. 45 ವರ್ಷಗಳಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗ
3. 12 ಕೋಟಿ ಉದ್ಯೋಗ ನಷ್ಟ
4. ರಾಜ್ಯಗಳಿಗೆ ಜಿಎಸ್‍ಟಿ ಬಾಕಿ ಇಟ್ಟಿರುವ ಕೇಂದ್ರಸರಕಾರ
5. ಜಾಗತಿಕವಾಗಿ ಅತ್ಯಂತ ಹೆಚ್ಚು ಕೋವಿಡ್-19 ದೈನಂದಿನ ಪ್ರಕರಣಗಳು,ಸಾವುಗಳು
6. ನಮ್ಮ ಗಡಿಗಳಲ್ಲಿ ಬಾಹ್ಯ ಆಕ್ರಮಣ” ಎಂದು ಬರೆದುಕೊಂಡಿದ್ದಾರೆ.








