ಯುಎಸ್ ಓಪನ್ ಟೆನಿಸ್ – ಮಹಿಳಾ ಸಿಂಗಲ್ಸ್ – ಪ್ರಿ ಕ್ವಾರ್ಟರ್ ಪ್ರವೇಶಿಸಿದ ನೌಮಿ ಒಸಾಕ..!
2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಮಾಜಿ ಚಾಂಪಿಯನ್ ನೌಮಿ ಒಸಾಕ ಅವರು ಪ್ರಿ ಕ್ವಾರ್ಟರ್ ಗೆ ಪ್ರವೇಶಿಸಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಒಸಾಕ ಅವರು 6-3, 6-7, 6-2ರಿಂದ ಉಕ್ರೇನ್ ನ ಮಾರ್ಟಾ ಕೊಸ್ಟ್ಯೂಕ್ ಅವರನ್ನು ಸೋಲಿಸಿದ್ರು.
ಇನ್ನೊಂದು ಮಹಿಳಾ ಸಿಂಗಲ್ಸ್ ನಲ್ಲಿ ಜರ್ಮನಿಯ ಆಂಜೆಲಿಕ್ ಕೆರ್ಬಾರ್ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಆಂಜೆಲಿಕ್ 6-3, 6-4ರಿಂದ ಅಮೆರಿಕಾದ ಆನ್ ಆಲಿ ಅವರನ್ನು ಪರಾಭವಗೊಳಿಸಿದ್ರು. ಆಂಜೆಲಿಕ್ ಅವರು ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಹಾಗೇ ಕ್ರೋವೇಶಿಯಾದ ಎಂಟನೇ ಶ್ರೇಯಾಂಕಿತೆ ಪೆಟ್ರಾ ಮಾರ್ಟಿಕ್ ಅವರು 6-3, 6-3ರಿಂದ ವಾರ್ವರ ಗ್ರೇಚೇವ್ ಅವರನ್ನು ಸೋಲಿಸಿದ್ರು.








