ಮುಂಬೈ : ದೇಶದಲ್ಲಿ ಡ್ರಗ್ ಮಾಫಿಯಾ ವಿಚಾರ ಭಾರಿ ಸದ್ದು ಮಾಡುತ್ತಿದೆ. ನ್ಯಾಷನಲ್ ಚಾನಲ್ ಗಳಲ್ಲಿ ರಿಯಾ, ನಮ್ಮ ರಾಜ್ಯದಲ್ಲಿ ರಾಗಿಣಿ, ಸಂಜನಾ. ಹೀಗೆ ಡ್ರಗ್ ವಿಚಾರವನ್ನೇ ಸುದ್ದಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ದೇಶದಲ್ಲಿ ಡ್ರಗ್ಸ್ ವಿಚಾರ ಸದ್ಯದ ಟಾಕ್ ಆಪ್ ದಿ ಟೌನ್. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಬಾಲಿವುಡ್ ನಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಪ್ರಕರಣದಲ್ಲಿ ಎನ್ ಸಿಬಿ ವಶದಲ್ಲಿರುವ ನಟಿ ರಿಯಾ ಚಕ್ರವರ್ತಿ ಇದೀಗ ಸ್ಫೋಟಕ ಸುದ್ದಿವೊಂದನ್ನು ಹೇಳಿದ್ದಾರಂತೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಎನ್ ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ” ನನ್ನ ಜೊತೆ ನಟಿಯರಾದ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು” ಎಂದು ಒಪ್ಪಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.
ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್, ಡಿಸೈನರ್ ಸಿಮೋನೆ ಖಂಬಟ್ಟಾ, ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಭ್ರಾ ಎಲ್ಲರೂ ಡ್ರಗ್ ತೆಗೆದುಕೊಂಡಿದ್ದಾರೆ ಎಂದು ರಿಯಾ ಬಾಯ್ಬಿಟ್ಟಿದ್ದಾಳೆ ಎಂದು ಟೈಮ್ಸ್ ನೌ ವರದಿ ವರದಿ ಮಾಡಿದೆ.
https://youtu.be/lwfLpyPrcX0








