ಕೆ. ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ
ಕಿಂಗ್ಸ್ ಇಲೆವೆನ್ ಪಂಜಾಬ್ … ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದ್ರೆ ಈ ಬಾರಿ ಸ್ವಲ್ಪ ಭರವಸೆ ಮೂಡಿಸುತ್ತಿದೆ. ಯುಎಇ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಅನ್ನೋ ನಿರೀಕ್ಷೆ ಇದೆ.
ಹಾಗೇ ನೋಡಿದ್ರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪಂಜಾಬ್‍ಗಿಂತಲೂ ಕನ್ನಡಿಗರಿಗೆ ಹೆಚ್ಚಿನ ಅಭಿಮಾನವಿದೆ. ನಾಲ್ಕೈದು ಮಂದಿ ಕರ್ನಾಟಕದ ಆಟಗಾರರು ಕಿಂಗ್ಸ್
ಇಲೆವೆನ್ ತಂಡದಲ್ಲಿ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ತಂಡದ ಕೋಚ್ ಕೂಡ ಕನ್ನಡಿಗರೇ. ಟೀಮ್ ಇಂಡಿಯಾದ ಮಾಜಿ ನಾಯಕ, ಕೆಎಸ್‍ಸಿಎ ಮಾಜಿ ಅಧ್ಯಕ್ಷ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿದ್ರೆ, ಕೆ.ಎಲ್. ರಾಹುಲ್ ತಂಡದ ಸಾರಥಿಯಾಗಿದ್ದಾರೆ. ಅದೇ ರೀತಿ ಮಯಾಂಕ್ ಅಗರ್‍ವಾಲ್, ಕೆ. ಗೌತಮ್ ಮತ್ತು ಕರುಣ್ ನಾಯರ್ ಕೂಡ ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿದ್ದಾರೆ. ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಅವಿನಾಶ್ ವೈದ್ಯ ತಂಡದ ಮ್ಯಾನೇಜರ್ ಆಗಿದ್ದಾರೆ.
ಕಿಂಗ್ಸ್ ಇಲೆವೆನ್ ತಂಡದ ಆಟಗಾರರ ಪಟ್ಟಿ ಹೀಗಿದೆ.
ಬ್ಯಾಟ್ಸ್ ಮೆನ್ ಗಳು
ಕ್ರಿಸ್ ಗೇಲ್, ಕರುಣ್ ನಾಯರ್, ಕೆ.ಎಲ್. ರಾಹುಲ್ (ನಾಯಕ), ಮನ್‍ದೀಪ್ ಸಿಂಗ್, ಮಯಾಂಕ್ ಅಗರ್‍ವಾಲ್, ಸಫ್ರಾಜ್ ಖಾನ್
ಬೌಲರ್ ಗಳು
ಆರ್ಶದೀಪ್ ಸಿಂಗ್, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಾಂಡೆ, ಹರ್ಡುಸ್ ವಿಲ್ ಜೊಯೆನ್, ಹರ್ ಪ್ರೀತ್ ಬ್ರಾರ್, ಇಶಾನ್ ಪೊರೇಲ್, ಜಗದೀಶ ಸುಚೀತ್, ಮಹಮ್ಮದ್ ಸಮಿ, ಮುಜೀಬ್ ಉರ್ ರಹಮಾನ್, ಮುರುಗನ್ ಅಶ್ವಿನ್, ರವಿ ಬಿಸ್ನೋಲ್, ಶೆಲ್ಡನ್ ಕಾಟ್ರೆಲ್,
ಆಲ್ ರೌಂಡರ್ ಗಳು
ದೀಪಕ್ ಹೂಡಾ, ಗ್ಲೇನ್ ಮ್ಯಾಕ್ಸ್ ವೆಲ್, ಜೇಮ್ಸ್ ನಿಶಾಮ್, ಕೆ. ಗೌತಮ್, ತೇಜಿಂದರ್ ಸಿಂಗ್.
ವಿಕೆಟ್ ಕೀಪರ್ ಗಳು
ನಿಕೊಲಾಸ್ ಪೂರನ್, ಪ್ರಬ್ ಸಿಮ್ರಾನ್,
ಕೋಚ್ – ಅನಿಲ್ ಕುಂಬ್ಳೆ
ಸಹಾಯಕ ಕೋಚ್ – ಆಂಡಿ ಪ್ಲವರ್
ಮ್ಯಾನೇಜರ್ – ಅವಿನಾಶ್ ವೈದ್ಯ
ಬ್ಯಾಟಿಂಗ್ ಕೋಚ್ – ವಾಸೀಮ್ ಜಾಫರ್
ಫೀಲ್ಡಿಂಗ್ ಕೋಚ್ – ಜಾಂಟಿ ರೋಡ್ಸ್
ಬೌಲಿಂಗ್ ಕೋಚ್ – ಚಾರ್ಲ್ ಲ್ಯಾಂಗ್ ವೆಲ್ಡೆಟ್
https://youtu.be/_st-YDZlTCE?t=7








