ಕಲಬುರಗಿ: ರಾಜ್ಯಾದ್ಯಂತ ಗಾಂಜಾ ವಿರುದ್ಧ ಪೊಲೀಸರು ಸಮರ ಸಾರಿದ್ದು, ಕಲಬುರಗಿಯಲ್ಲಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ 4 ಕ್ವಿಂಟಾಲ್ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರ್ ಗ್ರಾಮದ ಹೊಲದಲ್ಲಿ ಬೆಳೆದಿದ್ದ ಒಟ್ಟು 410 ಕೆಜಿಯ 4 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮರಾಯ ಮತ್ತು ಹಣಮಂತ ಕಟ್ಟಿ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಜಿಬಿಎ ದಂಡದ ಬಿಸಿ- ಆ.22ರ ಡೆಡ್ಲೈನ್ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರಿಗೆ ಜಿಬಿಎ ನೀಡಿದ ಒಂದು ಖಡಕ್ ಎಚ್ಚರಿಕೆ ಇಡೀ ನಗರದಲ್ಲಿ ಭಾರೀ...







