ನವದೆಹಲಿ : 11 ರಾಜ್ಯಸಭಾ ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಚುನಾವಣಾ (Elections) ದಿನಾಂಕವನ್ನು ಪ್ರಕಟಿಸಿದೆ.
ಉತ್ತರ ಪ್ರದೇಶದ 10 ಸ್ಥಾನಗಳಿಗೆ ಮತ್ತು ಉತ್ತರಾಖಂಡದ ಒಂದು ಸ್ಥಾನಕ್ಕೆ ನವೆಂಬರ್ 9 ರಂದು ಚುನಾವಣೆ (Elections) ನಡೆಯಲಿದೆ.
ಕೇಂದ್ರ ಸಚಿವ ಹರ್‍ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ಮುಖಂಡ ರಾಮಗೋಪಾಲ್ ಯಾದವ್ ಸೇರಿದಂತೆ 10 ಸದಸ್ಯರು ನ. 25ರಂದು ನಿವೃತ್ತಿಯಾಗಲಿದ್ದಾರೆ.
ಅದೇ ರೀತಿ ಉತ್ತರಾಖಂಡ್‍ನಿಂದ ಆಯ್ಕೆಯಾಗಿರುವ ನಟ ರಾಜ್‍ಬಬ್ಬರ್ ಅವರು ನಿವೃತ್ತರಾಗಲಿದ್ದಾರೆ.
ಇದನ್ನೂ ಓದಿ : ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ನೀಡಿದೆ : ಮುನಿರತ್ನ
ತೆರವಾಗಲಿರುವ ಈ ಸ್ಥಾನಗಳಿಗೆ ನವೆಂಬರ್ 9 ರಂದು ಚುನಾವಣೆ ಘೋಷಿಸಲಾಗಿದೆ.

ಮತ ಎಣಿಕೆಯೂ ಅದೇ ದಿನ ಸಂಜೆ ನಡೆಯಲಿದೆ. ಈ ಚುನಾವಣೆ ಕುರಿತ ಅಧಿಸೂಚನೆ ಇದೇ 20ರಂದು ಹೊರಬೀಳಲಿದೆ.
ಇದನ್ನೂ ಓದಿ : ಮುನಿರತ್ನಗೆ ಬಿಗ್ ರಿಲೀಫ್ ಕೊಟ್ಟ `ಸುಪ್ರೀಂ ತೀರ್ಪು’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








