kangana ranouth
ಸದ್ಯ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಬಯೋಪಿಕ್ ” ತಲೈವಿ” ಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಕಂಗನಾ ಈ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು.

ಇದೀ ಮುಂದಿನ ಸಿನಿಮಾಗಾಗಿ ತೂಕ ಇಳಿಸಿಕೊಳ್ಳಲು ನಟಿ ಕಂಗನಾ ವರ್ಕ್ ಔಟ್ ಮಾಡ್ತಿದ್ದು, ಮುಂದಿನ ಸಿನಿಮಾಗೆ ತಯಾರಾಗ್ತಾಯಿದ್ದಾರೆ. ಆದ್ರೆ ಕಂಗನಾ ವರ್ಕ್ ಔಟ್ ವಿದಾನ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.
ಕಂಗನಾ ತಮ್ಮ ಟ್ರೈನಿಂಗ್ ವಿಡಿಯೋವನ್ನ ಸೇರ್ ಮಾಡಿಕೊಂಡು ” ನನ್ನ ಮುಂಬರುವ ಆಕ್ಷನ್ ಸಿನಿಮಾಗಳಾದ ತೇಜಸ್ ಮತ್ತು ದಾಕಡ್ ಗಾಗಿ ನಾನು ತರಬೇತಿ ಪಡೆಯುತ್ತಿದ್ದೇನೆ. ತೇಜಸ್ ಸಿನಿಮಾದಲ್ಲಿ ಸೈನಿಕಳಾಗಿ ಕಾಣಿಸಿಕೊಳ್ಳುತ್ತಿದ್ದೇನೆ, ಧಾಕಡ್ ಚಿತ್ರದಲ್ಲಿ ಸ್ಪೈ ಪಾತ್ರ ಮಾಡುತ್ತಿದ್ದೇನೆ. ಬಾಲಿವುಡ್ ನನಗೆ ಸಾಕಷ್ಟು ನೀಡಿದೆ. ಆದರೆ ಮಣಿಕರ್ಣಿಕಾ ಯಶಸ್ಸಿನ ನಂತರ ನಾನು ಬಾಲಿವುಡ್ ಗೆ ಆಕ್ಷನ್ ನಾಯಕಿ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
“ಚಾರ್ಲಿ” ಜೊತೆಗೆ ಕೊಡೈಕೆನಾಲ್ ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..!
kangana ranouth








