yogaraj bhatt
ವಿಭಿನ್ನ ಶೈಲಿಯ ಅವರ ಬರಹ ನಿಜಕ್ಕೂ ಅವರ್ಣನೀಯ. ಹೀಗಾಗಿಯೇ ಅವರನ್ನ ವಿಕಟಕವಿ ಎಂದೇ ಕರೆಯಲಾಗುತ್ತೆ.
ಇನ್ನೂ ಯೋಗರಾಜ್ ಭಟ್ ಅವರ ಮಗಳೂ ಸಹ ತಂದೆಯಂತೆಯೇ. ತಂದೆಗೆ ತಕ್ಕ ಮಗಳು.
ಯೋಗರಾಜ ಭಟ್ಟರ ಮಗಳೂ ಸಹ ಅಪ್ಪನ ಹಾದಿಯನ್ನೇ ಹಿಡಿದಿದ್ದಾಳೆ.
ಇನ್ನೂ ಶಾಲೆ ಕಲಿಯುತ್ತಿರುವ ಭಟ್ಟರ ಮುದ್ದಿನ ಮಗಳು ಅಪ್ಪನಿಂದ ಸ್ಪೂರ್ಥಿ ಪಡೆದು ಅಮ್ಮನ ಬಗ್ಗೆ ಮುದ್ದಾದ ಕವಿತೆ ಬರೆದಿದ್ದಾರೆ.
ಅದನ್ನು ಭಟ್ಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಐದನೇ ತರಗತಿ ಓದುತ್ತಿರುವ ಯೋಗರಾಜ ಭಟ್ಟರ ಮಗಳು ಪುನರ್ವಸು ವೈ ಭಟ್ ‘ಅಮ್ಮ’ ಮತ್ತು ‘ಮಾತು’ ಎಂಬ ಎರಡು ಕವನ ಬರೆದಿದ್ದು, ‘ಜ್ಞಾನಮಂಥನ 2019-2020’ ದಲ್ಲಿ ಎರಡೂ ಕವನಗಳು ಪ್ರಕಟಗೊಂಡಿವೆ.
ಮಮ್ಮಿ’ ನಿರ್ದೇಶಕ ಲೋಹಿತ್ ಜೊತೆ ‘ದಿಯಾ’ ಪೃಥ್ವಿ ಅಂಬಾರ್ ಸಿನಿಮಾ
‘ಗುರು ನೀನು, ಮಾತೃ ನೀನು, ಹಾಲಿನಲ್ಲಿ ಸಕ್ಕರೆ ನೀನು ಗೆಜ್ಜೆಯಲ್ಲಿ ನಾದ ನೀನು ಮಾತಿನಲ್ಲಿ ಅಕ್ಕರೆ ನೀನು ನನ್ನೊಳಗಿನ ಶಕ್ತಿಯಾಗಿ ಸರ್ವಕಾಲಕ್ಕೂ ನನ್ನೊಂದಿಗೆ ಇರು, ಅಮ್ಮ ನನ್ನ ಅಮ್ಮ’ ಇದು ಪುನರ್ವಸು ಬರೆದಿರುವ ‘ಅಮ್ಮ’ ಕವಿತೆ.
‘ಬಾಯಿ ಬಿಟ್ಟರೆ ಮಾತು ಇಲ್ಲದಿದ್ದರೆ ಮನಸ್ಸಿನ ಮಾತು ಇಲ್ಲದಿದ್ದರೆ ಹೃದಯದ ಮಾತು ಇಲ್ಲದಿದ್ದರೆ ಮೃಗಗಳ ಮಾತು ಮಾತಿನೊಳಗೊಂದು ಕವನ ಆ ಕವನವೇ ಮೌನ’ ಇದು ಪುನರ್ವಸು ಬರೆದಿರುವ ‘ಮಾತು’ ಕವನ.
ಯೋಗರಾಜ್ ಭಟ್ ಅವರು ಮಗಳ ಕವನಗಳ ಚಿತ್ರ ಹಂಚಿಕೊಂಡು ‘ಮಕ್ಳು ಮಾಡ್ಬೇಡಿ , ದೊಡ್ಡೋರ್ ಆಗ್ತರೆ, ದೊಡ್ಡೋರ್ ಆಗ್ಬೇಡಿ , ಮಕ್ಳು ಬೈತರೆ’ ಎಂದು ತಮ್ಮದೇ ಹಾಡಿನ ಸಾಲನ್ನು ಬರೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
yogaraj bhatt








