Yogi Adityanath
ಬಿಹಾರ: ಇನ್ಮುಂದೆ ‘ಭಾರತ್ ತೇರೆ ತುಕ್ಡೇ ಹೋಂಗೆ’ ಸ್ಲೋಗನ್ ಗೆ ಜೆಎನ್ ಯುನಲ್ಲಿ ಇನ್ನು ಅವಕಾಶವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಖಡಕ್ ಸಂದೇಶವೊಂದನ್ನ ರವಾನಿಸಿದ್ದಾರೆ. ಬಿಹಾರದ ಕರಾಕಟ್ ವಿಧಾನಸಭಾ ಚುನಾವಣೆಯ ಸಾರ್ವಜನಿಕ ರ್ಯಾರಲಿಯಲ್ಲಿ ಭಾಗಿಯಾಗಿ ಮಾತನಾಡಿದ ಯೋಗಿ, ಜೆ ಎನ್ ಯುನಲ್ಲಿ ‘ಭಾರತ್ ತೇರೆ ತುಕ್ಡೇ ಹೋಂಗೆ’ ಸ್ಲೋಗನ್ ಹೇಳಲು ಅವಕಾಶವಿಲ್ಲ. ಇನ್ನೇನಿದ್ದರೂ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಅಂತಾ ಮಾತ್ರ ಹೇಳ್ಬೇಕು ಎಂದು ಗುಡುಗಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ ಯೋಗಿ ಆದಿತ್ಯನಾಥ್ ಅವರು ಪಾಕ್ ಬೆಂಬಲಿತ ಉಗ್ರರು ಇನ್ನು ಕಾಶ್ಮೀರಕ್ಕೆ ಪ್ರವೇಶಿಸುವಂತಿಲ್ಲ. ಒಂದು ವೇಳೆ ಅವರು ಭಾರತಕ್ಕೆ ಬಂದರೆ ನಮ್ಮ ಸೈನಿಕರು ಪಾಕಿಸ್ತಾನಕ್ಕೇ ನುಗ್ಗಿ ಉಗ್ರರನ್ನು ಸದೆಬಡಿಯುತ್ತಾರೆ ಎಂದು ಪಾಕ್ ಗೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಬದಲಾವಣೆಯ ಯತ್ನಾಳ್ ಹೇಳಿಕೆ ಹಿಂದೆ RSS ಷಡ್ಯಂತ್ರ : ಆರ್.ಬಿ.ತಿಮ್ಮಾಪುರ
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಯೋಗಿ, ಬಿಹಾರದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೇ ಮತ ಚಲಾಯಿಸಿ. ಇಲ್ಲಿ ನೀವು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದರೆ ಅವರು ಶಾಸಕರಾಗುತ್ತಾರೆ. ಬಳಿಕ ಅವರು ನಿಮ್ಮನ್ನು ಅಯೋಧ್ಯೆಯ ರಾಮಮಂದಿರಕ್ಕೆ ಕರೆದೊಯ್ದು ರಾಮನ ದರ್ಶನ ಮಾಡಿಸುತ್ತಾರೆ ಎಂದು ಭರವಸೆ ನೀಡುವ ಮೂಲಕ ಬಿರುಸಿನ ಪ್ರಚಾರ ನಡೆಸಿದ್ದಾರೆ.
Yogi Adityanath
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








