crime
ಶಿವಮೊಗ್ಗ : ಸಾಗರ ಸಮೀಪದ ಹಳೆ ಇಕ್ಕೆರಿ ಬಳಿ ಜೋಡಿ ಕೊಲೆ ನಡೆದಿದ್ದ ಜೋಡಿ ಕೊಲೆ ಪ್ರಕರಣ ಆರೋಪಿ ಕಾಲಿಗೆ ಪೊಲೀಸು ಗುಂಡು ಹಾರಿಸಿದ್ದಾರೆ. ಬಂಧನದ ವೇಳೆ ಆರೋಪಿ ಭರತ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ಕಳೆದ ವಾರ ಜೋಡಿ ಕೊಲೆ ನಡೆಸಲಾಗಿತ್ತು. ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿದ್ದಂತ ತಾಯಿ ಮಗ ಬೆಳಗಾಗುವುದರೊಳಗೆ ರಕ್ತದ ಮಡುವಿನಲ್ಲಿ ಕೊಲೆಯಾಗಿದ್ದರು. ಪ್ರಕರಣದಿಂದಾಗಿ ಇಡೀ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಇಂದು ಖಚಿತ ಮಾಹಿತಿ ಮೇರೆಗೆ ಆರೋಪಿ ಭರತ್ ಗೌಡನನ್ನು ಬಂಧಿಸಿದ್ದಾರೆ.
‘ಭಾರತ್ ತೇರೆ ತುಕ್ ಡೇ ಹೋಂಗೆʼ ಅಂದ್ರೆ ಹುಷಾರ್..! : ಯೋಗಿ ವಾರ್ನಿಂಗ್
ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಮೂತ್ರ ವಿಸರ್ಜನೆಗೆ ಹೋದ ಆರೋಪಿ ಎಸ್ಕೇಪ್ ಆಗೋಕೆ ಯತ್ನಿಸಿದ್ದಾನೆ. ಈ ವೇ¼ ಚಂದ್ರನಾಯ್ಕ್ ಎಂಬ ಪೊಲೀಸ್ ಮೇಲೂ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಆತನ ಮೇಲೆ ಫೈರಿಂಗ್ ನಡೆಸಿರೋದಾಗಿ ತಿಳಿದುಬಂದಿದೆ. ಇದೀಗ ಆರೋಪಿ ಭರತ್ ಗೌಡನನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
crime
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








