ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನನ್ಯ ಸೌಂದರ್ಯದ ಮುಕುಟಮಣಿ ಕ್ಯಾಲಿಫೋರ್ನಿಯಾ ಪ್ರವಾಸಿಗರ ಪಾಲಿನ ಸೂಜಿಗಲ್ಲು 

Mahesh M Dhandu by Mahesh M Dhandu
October 26, 2020
in Newsbeat, Saaksha Special, ಎಸ್ ಸ್ಪೆಷಲ್
Saakshatv yatrika episode 2
Share on FacebookShare on TwitterShare on WhatsappShare on Telegram

 Saakshatv yatrika episode 4 ಅನನ್ಯ ಸೌಂದರ್ಯದ ಮುಕುಟಮಣಿ ಕ್ಯಾಲಿಫೋರ್ನಿಯಾ ( California ) ಪ್ರವಾಸಿಗರ ಪಾಲಿನ ಸೂಜಿಗಲ್ಲು :

Saakshatv yatrika episode 4 ನಾನು ಅಮೇರಿಕಾಗೆ ಭೇಟಿ ಕೊಡುವ ಮುಂಚಿನಿಂದಲೂ ಕ್ಯಾಲಿಫೋರ್ನಿಯಾದ ( California ) ಸೌಂದರ್ಯದ ಬಗ್ಗೆ ಕೇಳ್ತಾ ಇದ್ದೆ. ಅಮೆರಿಕಾದ ಉಳಿದ ರಾಜ್ಯಗಳನ್ನ ತೆಗೆದುಕೊಂಡರೆ- ನ್ಯೂಯಾರ್ಕ್ ರಾಜ್ಯದಲ್ಲಿ ನಯಾಗರಾದಂತಹ ಪ್ರಾಕೃತಿಕ ವಿಸ್ಮಯಗಳು ಮತ್ತು ನ್ಯೂಯಾರ್ಕ್ ನಗರದ ಅದ್ಭುತ ರಚನೆಗಳು, ಫ್ಲೋರಿಡಾದಲ್ಲಿ ಸಮುದ್ರ ತೀರಗಳು, ಅರ್ಕನ್ಸಾ- ಟೆನ್ನಸ್ಸಿ- ವರ್ಮೌಂಟ್- ನ್ಯೂಹ್ಯಾಂಪ್‌ಶೈರಿನ ಕಾಡುಗಳು, ಆರಿಝೋನಾ ಯೂಟಾಗಳ ಮರುಭೂಮಿಯ ಪಾಕೃತಿಕ ರಚನೆಗಳು ಇತ್ಯಾದಿಗಳು ಬಹು ಪ್ರಸಿದ್ಧ. ಉಳಿದೆಡೆ ಹೀಗೆ ಒಂದೆರಡು ಅಂಶಗಳಷ್ಟೇ ಇದ್ದರೆ ಕ್ಯಾಲೊಫೋರ್ನಿಯಾದಲ್ಲಿ ಇವೆಲ್ಲವೂ ಇವೆ.

Related posts

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

October 5, 2026
.ನಾನು ಸೆಲ್ಫ್ ಮೇಡ್ ಮ್ಯಾನ್ ನಿಮ್ಮ ಜೊತೆ ಹೇಗೆ ಫೈಟ್ ಮಾಡಬೇಕೆಂದು ಗೊತ್ತು ಎಂದು ಡಾ ಎಂ ಸಿ ಸುಧಾಕರ್ ಬಣಕ್ಕೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

.ನಾನು ಸೆಲ್ಫ್ ಮೇಡ್ ಮ್ಯಾನ್ ನಿಮ್ಮ ಜೊತೆ ಹೇಗೆ ಫೈಟ್ ಮಾಡಬೇಕೆಂದು ಗೊತ್ತು ಎಂದು ಡಾ ಎಂ ಸಿ ಸುಧಾಕರ್ ಬಣಕ್ಕೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

October 5, 2026

Saakshatv yatrika episode 2

ಪ್ರಾಕೃತಿಕ ವಿಸ್ಮಯಗಳ ಪಟ್ಟಿಗೆ ಬಂದರೆ ಸ್ವಿಸ್ ನೆನಪಿಸುವ ಟಾಹೋ ಸರೋವರ, ಜೋಗದ ಎರಡರಷ್ಟು ಎತ್ತರದ ಯೂಸೆಮಿಟಿ ಜಲಪಾತ ಮತ್ತು ಅಲ್ಲಿನ ಬೆರಗು ಗೊಳಿಸುವ ರಾಷ್ಟ್ರೀಯ ಉದ್ಯಾನ, ನೂರಾರು ಅಡಿ ಎತ್ತರದ ಮರಗಳಿರುವ ಸಿಕೋಯಾ ಮತ್ತು ರೆಡ್‌ವುಡ್ ಕಾಡುಗಳು, ಜಗತ್ತಿನ ಭೀಕರ ಮರಳುಗಾಡು ಪ್ರದೇಶಗಳಲ್ಲಿ ಒಂದಾದ ಮೃತ್ಯುಕಣಿವೆ, ನಯನ ಮನೋಹರ ಕರಾವಳಿ ಪ್ರದೇಶ ಇತ್ಯಾದಿ ಇತ್ಯಾದಿ. ಹಾಗೇ ಕೃಷಿ ಮತ್ತು ಸಂಶೋಧನಾ ಪ್ರವಾಸ ಮಾಡುವವರಿಗೂ ಮಧ್ಯ ಕಣಿವೆ ಮತ್ತು ನಾಪಾ ಕಣಿವೆಗಳಂತ ಜಾಗಗಳಿವೆ. ಅದೇ ಮಾನವ ನಿರ್ಮಿತ ರಚನೆಗಳಲ್ಲಿ ಸ್ವರ್ಣಸೇತು, ಲಾಸ್ ಎಂಜಿಲಿಸಿನ ಡಿಸ್ನಿ ಲ್ಯಾಂಡ್, ಯೂನಿವರ್ಸಲ್ ಸ್ಟೂಡಿಯೋ, ಕೆಲ ಹಾಲಿವುಡ್ ಸಿನಿಮಾ ಪ್ರಪಂಚಗಳು ಸಿಗುತ್ತವೆ.

ನೀವು ಪ್ರತಿ ವಾರ ಒಂದೊಂದು ಕಡೆ ಹೋದರು ವರ್ಷಕ್ಕೆ ಮುಗಿಯದಷ್ಟು ಜಾಗಗಳಿವೆ. ಮತ್ತು ಅಲ್ಲಿನ ಸರಕಾರ ಅವುಗಳನ್ನು ಅಷ್ಟೇ ಚಂದಕ್ಕೆ ನಿರ್ವಹಿಸುತ್ತದೆ. ಈ ಉತ್ತಮ ನಿರ್ವಹಣೆ ಹೆಚ್ಚು ಪ್ರವಾಸಿಗರ ಆಕರ್ಷಿಸುತ್ತದೆ. ಇದರಿಂದ ರಾಜ್ಯಕ್ಕೆ ಆದಾಯ ಮತ್ತು ಜನರಿಗೆವುದ್ಯೋಗಳೆರಡೂ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತವೆ. ಈ ವಿಷಯದಲ್ಲಿ ಕೇರಳ, ಮೈಸೂರು, ಅಂತಹ ಕೆಲವೇ ಜಾಗಗಳ ಬಿಟ್ಟರೆ ನಮ್ಮಲ್ಲಿ ಪ್ರವಾಸೀ ಸ್ನೇಹಿ ಮನೋಭಾವ ಕಮ್ಮಿ. ಅದೂ ಅಲ್ಲದೇ ತಲೆಬುಡವಿಲ್ಲದ ಅಭಿವೃದ್ಧಿ ಯೋಜನೆಗಳು ಕೊಡಗುವಿನಂತ ಸ್ವರ್ಗವನ್ನು ಹಾಳುಮಾಡಿರುವುದನ್ನು ಕೂಡಾ ಕಣ್ಣಾರೆ ನೋಡಿದ್ದೇವೆ.

Saakshatv yatrika episode 2

ಇರಲಿ, ವಿಷಯಾಂತರ ಬೇಡ. ನಾವು ಲಾಸ್ ಎಂಜಲೀಸ್ ನಲ್ಲಿದ್ದಾಗ ಪ್ರತಿವಾರ ಎಲ್ಲಿ ಹೋಗೋಣ ಅನ್ನೋದೇ ದೊಡ್ಡ ಸಮಸ್ಯೆಯಾಗಿತ್ತು. ಅಷ್ಟು ಜಾಗಗಳಿದ್ದವು. ಆದರೂ ನಾವು ವಿಶ್ವವಿಖ್ಯಾತ ಡಿಸ್ನಿ ವರ್ಲ್ಡ್ ಮತ್ತು ಯೂನಿವರ್ಸಲ್ ಸ್ಟುಡಿಯೋಗೆ ಭೇಟಿ ನೀಡಲಿಲ್ಲ. ಮಗ ಸ್ವಲ್ಪ ದೊಡ್ಡವನಾದ ಮೇಲೆ ಹೋಗೋಣ ಅವನಿಗೆ ಈಗ ಏನೂ ಗೊತ್ತಾಗೊಲ್ಲ ಅನ್ನುವುದು ಒಂದು ಕಾರಣವಾದರೆ ಅಷ್ಟು ದುಡ್ಡಿರಲಿಲ್ಲ ಆವಾಗ ಅನ್ನುವುದೂ ನಿಜ.

ಇದನ್ನೂ ಓದಿ : ಅಮೇರಿಕನ್ ಯಾತ್ರೆ; ಲಾಸ್ ಏಂಜಲೀಸ್ ಜಿಡಿಪಿ ಭಾರತದ ಜಿಡಿಪಿಗಿಂತ ಹೆಚ್ಚು

ಅಲ್ಲಿದ್ದಾಗ ನಾನೆಷ್ಟೋ ಬಾರಿ ಅಂದುಕೊಂಡಿದ್ದೆ. ಕರ್ನಾಟಕದಲ್ಲೂ ವಿವಿಧ ರೀತಿಯ ನೈಸರ್ಗಿಕ ತಾಣಗಳಿವೆ, ಬೆಂಗಳೂರಂತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ ನಗರವಿದೆ, ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ನಾವು ನಮ್ಮ ಏಳಿಗೆಗೆ ಇನ್ನು ಸ್ವಲ್ಪವೇ ಶ್ರಮ ಹಾಕಿದರೆ ಅವರಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಏಳಿಗೆ ಹೊಂದಬಹುದು (ಪಕೃತಿಯನ್ನ ಹಾಳು ಮಾಡದೆ, ಪ್ರಕೃತಿಯನ್ನ ಹಾಳುಮಾಡಿ ಆಗುವ ಅಭಿವೃದ್ಧಿ ಅಭಿವೃದ್ಧಿಯೇ ಅಲ್ಲವೆಂದು ನನ್ನ ಅನಿಸಿಕೆ). ಹಾಗಂತ ಕ್ಯಾಲಿಫೋರ್ನಿಯಾ 100% ಪರಿಪೂರ್ಣ ಅಂತ ಅಲ್ಲ. ಇಲ್ಲೂ ಬಡತನ, ಅಸಮಾನತೆಯಂತ ಸಮಸ್ಯೆಗಳು ಇವೆ. ಆದರೆ ಅವರು ಸಾಧಿಸಿದ ಏಳಿಗೆಯ ಮುಂದೆ ಅವೆಲ್ಲಾ ಚಿಕ್ಕದಾಗಿಬಿಡುತ್ತವೆ. ಅದಕ್ಕೆ‌ ನಾನ್ಯಾವತ್ತೂ ಭವಿಷ್ಯದ ಕರ್ನಾಟಕ ವರ್ತಮಾನದ ಕ್ಯಾಲಿಫೋರ್ನಿಯಾದಂತಿರಲಿ ಎಂದು ಅಂದುಕೊಳ್ಳುತ್ತೇನೆ.

Saakshatv yatrika episode 2

ವಿ.ಸೂ:- ಪಟದಲ್ಲಿರುವುದು ಯೂಸಮಿಟಿ ಕಣಿವೆಯ ದೃಷ್ಯ. ಅಲ್ಲಿ ಕಾಣುವ ಆ ಜಲಪಾತ ಜೋಗ ಜಲಪಾತದ ಎರಡಷ್ಟಿದೆ ಅಂದರೆ ಅವುಗಳ ಎತ್ತರ ಮತ್ತು ವಿಸ್ತಾರವನ್ನ ಊಹಿಸಿಕೊಳ್ಳಿ.

-ಗಿರಿಧರ್ ಗುಂಜಗೋಡು
ಸಾಫ್ಟವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ದಾಪುರ

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Tags: Arizona UtahCaliforniaNew Hampshire
ShareTweetSendShare
Join us on:

Related Posts

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

ಎಷ್ಟಾದ್ರೂ ಮದ್ವೆಯಾಗ್ತೀನಿ ಏನಿವಾಗ? ಹಿಂದೂಗಳ ವಿರುದ್ಧ ನಾನು ಮಾತನಾಡೇ ಇಲ್ಲ, ನನ್ನ ಸಂಸಾರ ನನ್ನ ಇಷ್ಟ: ಮದುವೆಯ ಬಗ್ಗೆ ಟೀಕಿಸುವವರ ಬೆವರಿಳಿಸಿದ ನಟ ಪ್ರಕಾಶ್ ರಾಜ್

by Shwetha
October 5, 2026
0

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಎಂದರೆ ಸದಾ ವಿವಾದಗಳ ಕೇಂದ್ರಬಿಂದು. ತಮ್ಮ ಹರಿತವಾದ ಮಾತುಗಳ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಸತತವಾಗಿ ಟೀಕಿಸುವ ಪ್ರಕಾಶ್...

.ನಾನು ಸೆಲ್ಫ್ ಮೇಡ್ ಮ್ಯಾನ್ ನಿಮ್ಮ ಜೊತೆ ಹೇಗೆ ಫೈಟ್ ಮಾಡಬೇಕೆಂದು ಗೊತ್ತು ಎಂದು ಡಾ ಎಂ ಸಿ ಸುಧಾಕರ್ ಬಣಕ್ಕೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

.ನಾನು ಸೆಲ್ಫ್ ಮೇಡ್ ಮ್ಯಾನ್ ನಿಮ್ಮ ಜೊತೆ ಹೇಗೆ ಫೈಟ್ ಮಾಡಬೇಕೆಂದು ಗೊತ್ತು ಎಂದು ಡಾ ಎಂ ಸಿ ಸುಧಾಕರ್ ಬಣಕ್ಕೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

by Shwetha
October 5, 2026
0

ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಆಂತರಿಕ ಭಿನ್ನಮತ ಈಗ ಅಗ್ನಿಪರ್ವತವಾಗಿ ಸ್ಫೋಟಗೊಂಡಿದೆ. ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ...

ಸನಾತನ ಧರ್ಮದ ಅಸ್ಮಿತೆ ಉಳಿಸಲು ಹಿಂದೂ ಯುವಕರು ಐದು ಮಕ್ಕಳನ್ನು ಪಡೆಯಲೇಬೇಕು: ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್

ಸನಾತನ ಧರ್ಮದ ಅಸ್ಮಿತೆ ಉಳಿಸಲು ಹಿಂದೂ ಯುವಕರು ಐದು ಮಕ್ಕಳನ್ನು ಪಡೆಯಲೇಬೇಕು: ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್

by Shwetha
October 5, 2026
0

ಬಾರ್ವಾನಿ: ದೇಶದ ಜನಸಂಖ್ಯಾ ಸಮತೋಲನದಲ್ಲಿ ಉಂಟಾಗುತ್ತಿರುವ ಏರುಪೇರು ಮತ್ತು ಸನಾತನ ಧರ್ಮದ ಭವಿಷ್ಯದ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್ ಅವರು ಅತ್ಯಂತ ಕಳವಳಕಾರಿ...

ಸಿದ್ಧಾಂತಗಳ ಸಂಗಮವೋ ಅಥವಾ ಹೊಸ ಚಳವಳಿಯ ಆರಂಭವೋ?: ಮೋದಿ ಸರ್ಕಾರದ ವಿರುದ್ಧ ಜಂಟಿ ರಣತಂತ್ರ ರೂಪಿಸಿದ ಹರಿಪ್ರಸಾದ್ ಮತ್ತು ಪ್ರಕಾಶ್ ರಾಜ್

ಸಿದ್ಧಾಂತಗಳ ಸಂಗಮವೋ ಅಥವಾ ಹೊಸ ಚಳವಳಿಯ ಆರಂಭವೋ?: ಮೋದಿ ಸರ್ಕಾರದ ವಿರುದ್ಧ ಜಂಟಿ ರಣತಂತ್ರ ರೂಪಿಸಿದ ಹರಿಪ್ರಸಾದ್ ಮತ್ತು ಪ್ರಕಾಶ್ ರಾಜ್

by Shwetha
October 5, 2026
0

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಹೋರಾಡುತ್ತಿರುವ ಇಬ್ಬರು ಪ್ರಮುಖ ವ್ಯಕ್ತಿಗಳ ಭೇಟಿ ಈಗ ಭಾರಿ ಸಂಚಲನ ಮೂಡಿಸಿದೆ. ಹಿರಿಯ ಕಾಂಗ್ರೆಸ್ ನಾಯಕ...

ಮುಸ್ಲಿಮರಿಂದಲೇ ದೇಶದಲ್ಲಿ ಬೋಗಸ್ ವೋಟಿಂಗ್ ಹಾವಳಿ ಹಿಂದೂಗಳು ಯಾವತ್ತೂ ಕಾನೂನು ಮೀರುವುದಿಲ್ಲ : ರಾಜ್ಯ ಬಿಜೆಪಿಯಲ್ಲಿಲ್ಲ ಮತ ಸೆಳೆಯುವ ನಾಯಕರು,2028ಕ್ಕೆ ನಾನೇ ಕರ್ನಾಟಕದ ಮುಖ್ಯಮಂತ್ರಿ ಎಂದು ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್

ಮುಸ್ಲಿಮರಿಂದಲೇ ದೇಶದಲ್ಲಿ ಬೋಗಸ್ ವೋಟಿಂಗ್ ಹಾವಳಿ ಹಿಂದೂಗಳು ಯಾವತ್ತೂ ಕಾನೂನು ಮೀರುವುದಿಲ್ಲ : ರಾಜ್ಯ ಬಿಜೆಪಿಯಲ್ಲಿಲ್ಲ ಮತ ಸೆಳೆಯುವ ನಾಯಕರು,2028ಕ್ಕೆ ನಾನೇ ಕರ್ನಾಟಕದ ಮುಖ್ಯಮಂತ್ರಿ ಎಂದು ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್

by Shwetha
October 5, 2026
0

ದಾವಣಗೆರೆ: ವಿಜಯಪುರದ ಶಾಸಕ ಮತ್ತು ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram