ಅಮೇರಿಕನ್ ಯಾತ್ರೆ; ಲಾಸ್ ಏಂಜಲೀಸ್ ಜಿಡಿಪಿ ಭಾರತದ ಜಿಡಿಪಿಗಿಂತ ಹೆಚ್ಚು-ಇಲ್ಲಿನ ಹಾಲಿವುಡ್ ನೋಡಿಕೊಂಡೇ ನಮ್ಮ ಸಿನಿಮಾರಂಗದಲ್ಲೂ ಉಡ್ ಗಳು ಶುರುವಾಗಿದ್ದು: Saakshatv yatrika episode 3
ಕಳೆದ ಬರಹದಲ್ಲಿ ಹೇಳಿದಂತೆ ಈ ಬರಹದಲ್ಲಿ ಲಾಸ್ ಎಂಜಲೀಸ್ ನಗರದ ಉದ್ಯಮ ಮತ್ತು ಅರ್ಥಿಕತೆಯ ಮೇಲೆ ಒಂದಷ್ಟು ಸಂಗತಿಗಳನ್ನು ಹೇಳಲು ಪ್ರಯತ್ನಿಸುತ್ತೇನೆ.
Saakshatv yatrika episode 3
ಈ ರಾಜ್ಯದ ಆರ್ಥಿಕತೆ ಎಷ್ಟು ಬಲಿಷ್ಟವಾಗಿದೆ ಅಂದರೆ ಇದರ ಜಿಡಿಪಿ ಹೆಚ್ಚು ಕಮ್ಮಿ ಭಾರತಕ್ಕಿಂತ ಜಾಸ್ತಿಯೇ ಇದೆ. ಒಂದು ವೇಳೆ ಇದು ಪ್ರತ್ಯೇಕ ದೇಶವಾಗಿದ್ದರೆ ಜಗತ್ತಿನ ೫ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರುತ್ತಿತ್ತು. ಹಾಗಾದರೆ ಇವರಿಗೆ ಆ ಪಾಟಿ ಹಣ ಬರುವುದಾದರೂ ಎಲ್ಲಿಂದ? ಹೆಚ್ಚಿನವರಿಗೆ ಇದು ಗೊತ್ತಿರುವ ವಿಚಾರವೇ. ಎಕಾನಮಿ ಆಫ್ ಕ್ಯಾಲಿಫೋರ್ನಿಯಾ ಅಂತ ಹುಡುಕಿದರೆ ವಿಕಿಪೀಡಿಯಾದಲ್ಲಿ ವಿವರವಾದ ಲೇಖನ ಸಿಗುತ್ತದೆ. ಅದಕ್ಕೆ ಮತ್ತೆ ಅದನ್ನ ವಿವರಿಸುತ್ತಾ ಹೋಗುವುದಿಲ್ಲ.
ಈ ಬಾಲಿವುಡ್, ಗೋಲಿವುಡ್, ಕಾಲಿವುಡ್ ಇನ್ಯಾವ್ದೋ ಕಿತ್ತೋದ ವುಡ್ ಅಂತಾರಲ್ಲಾ… ಅದಕ್ಕೆಲ್ಲಾ ಸ್ಪೂರ್ತಿ ಹಾಲಿವುಡ್. ಹಾಲಿವುಡ್ ಅಂದರೆ ಮತ್ತೇನಿಲ್ಲ. ಲಾಸ್ ಎಂಜಿಲಿಸ್ ನಗರದ ಒಂದು ಪ್ರದೇಶ ಅಷ್ಟೇ. ನಮ್ಮಲ್ಲಿ ಗಾಂಧಿನಗರವಿದ್ದಂತೆ ಚಲನಚಿತ್ರಕ್ಕೆ ಹೆಸರುವಾಸಿಯಾಗಿದ್ದು. ಅದಕ್ಕೆ ಇರ ಬರುವುದಕ್ಕೆಲ್ಲಾ ‘ವುಡ್’ ಅಂತ ನಮ್ಮವರು ಸೇರಿಸ್ಕೊಂಡಿರೋದು. ಸುಮ್ಮನೇ ಇವರ ಕಾಪಿ ಮಾಡೋದಕ್ಕಿಂತ ನಮ್ಮ ನಮ್ಮ ಭಾಷೆಯ ಹೆಸರನ್ನೇ ನಮ್ಮ ಚಿತ್ರರಂಗಕ್ಕೆ ಕರೆದರೆ ಸಾಕೆನ್ನುವುದು ನನ್ನ ಅಭಿಪ್ರಯ. ಇರಲಿ, ನಾನೇನಂದೆ ಅಂದರೆ ಈ ಹಾಲಿವುಡ್ ಚಿತ್ರರಂಗ ಕೂಡ ಇಲ್ಲಿ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು.
ಒಮ್ಮೆ ನಾನು ವಸ್ತು ಸಂಗ್ರಹಾಲಯವೊಂದರಲ್ಲಿ ಲಾಸ್ ಎಂಜಿಲಿಸ್ ನಗರದ ಕುಡಿಯುವ ನೀರಿನ ಪೂರೈಕೆ ಬಗ್ಗೆ ಓದಿದ್ದೆ. ನೂರಾರು ಮೈಲಿ ದೂರದ ಉತ್ತರ ಕ್ಯಾಲಿಫೋರ್ನಿಯಾದಿಂದ ಕೂಡ ದೊಡ್ಡ ಪ್ರಮಾಣದ ನೀರಿನ ಪೂರೈಕೆಯಾಗುತ್ತದೆ. ಅಂದರೆ ಯೋಚಿಸಿ ಯಾವ ಮಟ್ಟಿನ ಖರ್ಚು ಮಾಡುವ ಸಾಮರ್ಥ್ಯ ಅವರಲ್ಲಿದೆ ಎಂದು.
ಈ ರಾಜ್ಯ ಅತೀ ಹೆಚ್ಚು ತೆರಿಗೆ ಹಾಕುವ ರಾಜ್ಯಗಳಲ್ಲಿ ಲಾಸ್ ಏಂಜಲೀಸ್ ಕೂಡಾ ಒಂದು. ಇಲ್ಲಿನ ನಿವಾಸಿಗಳು ಪಾವತಿಸುವ ತೆರಿಗೆ ಮೊತ್ತ ತಲೆತಿರುಗಿಸುತ್ತದೆ. ಆದರೆ ಅದಕ್ಕೆ ತಕ್ಕ ವ್ಯವಸ್ಥೆಗಳಿರುವುದರಿಂದ ಅಷ್ಟೇನೂ ಬೇಜಾರಾಗುವುದಿಲ್ಲ. ಏನೇ ಇರಲಿ, ಈ ದೇಶದಲ್ಲಿ ಹರಿಯುವ ಸಂಪತ್ತನ್ನು ನೋಡಿದರೆ ಇವರ ಕೊಳ್ಳುಬಾಕತನ ಅತಿ ಆಯಿತು ಅಂತ ಕೆಲವೊಮ್ಮೆ ಅನ್ನಿಸುತ್ತದೆ.
ಹಣಕಾಸಿನ ವಿಚಾರ ಬಿಟ್ಟು ಸ್ವಲ್ಪ ಶಿಕ್ಷಣದೆಡೆಗೆ ಹೊರಳಿದರೆ ಸ್ಟಾನ್‌ಫರ್ಡ್, ಯುಸಿಎಲ್‌ಎ ಮೊದಲಾದ ಜಗದ್ವಿಖ್ಯಾತ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಹಾಗೆ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಕೂಡಾ ಇದೆ. ಈ ದೇಶದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮುಂದೆ ಯಾವಾಗಲಾದರೂ ಅವಕಾಶವಾದರೆ ವಿವರವಾಗಿ ಹೇಳ್ತೀನಿ.
ಟೆಕ್ಸಸ್ಸಿನಂತೆ ಕ್ಯಾಲಿಫೋರ್ನಿಯಾ ಕೂಡ ತೆರಿಗೆಯನ್ನು ಪಡೆದುಕೊಳ್ಳುವುದಕ್ಕಿಂತ ಕೊಡುವುದೇ ಜಾಸ್ತಿ. ಯಾವುದೇ ದೇಶದಲ್ಲಾಗಲೀ ಕೆಲ ಪ್ರದೇಶಗಳು ಹಿಂದುಳಿಯುವುದು, ಇನ್ನೂ ಕೆಲ ಪ್ರದೇಶಗಳು ಏಳಿಗೆ ಹೊಂದುವುದು ಸ್ವಾಭಾವಿಕ. ಬಡ ಪ್ರದೇಶಗಳಿಗೆ ಸಂಪತ್ತಿನ ಜಾಸ್ತಿ ಪಾಲು ಕಾಯ್ದಿರಿಸುವುದು ಕೂಡಾ ನ್ಯಾಯಯುತ. ಆದರೆ ಇದರಿಂದ ಏಳಿಗೆ ಹೊಂದಿದ ನಾಡುಗಳಿಗೆ ಮೋಸವಾಗದಂತೆ ನೋಡಿಕೊಳ್ಳುವುದು ಅತೀ ಅವಶ್ಯಕ. ಕನಿಷ್ಟ ರಾಜ್ಯಗಳಿಗೆ ಏಳಿಗೆ ಹೊಂದಲು ಬೇಕಾದ ಸ್ವಾಯತ್ತತೆ ಇದ್ದರೆ ಚಂದ.
ಮುಂದಿನ ಭಾಗದಲ್ಲಿ ಇಲ್ಲಿನ ಪ್ರವಾಸಿತಾಣಗಳ ಬಗ್ಗೆ ಹೇಳಿ ಮುಗಿಸ್ತೀನಿ.
ವಿ.ಸೂ:- ಪಟವನ್ನು ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ತೆಗೆದಿದ್ದು.
-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ