ದೀಪಾವಳಿಗೆ 5.51 ಲಕ್ಷ ದೀಪಗಳಿಂದ ಬೆಳಗಲಿದೆ ಅಯೋಧ್ಯೆ
ಲಕ್ನೋ : ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬ ಸಂದರ್ಭದಲ್ಲಿ ಸರಯು ನದಿ ದಡದ 28 ಘಾಟ್ ಗಳಲ್ಲಿ ನಡೆಯುವ ದೀಪೋತ್ಸವಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಬಾರಿ 5.51 ಲಕ್ಷ ಹಣತೆಗಳನ್ನು ಹಚ್ಚಲಾಗುತ್ತಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮಜನ್ಮಭೂಮಿಯಲ್ಲಿನ ರಾಮಲಲ್ಲಾಗೆ ನಮಸ್ಕರಿಸಿ, ರಾಮ್ ಕಿ ಪೈಡಿಯಲ್ಲಿ ದೀಪಗಳನ್ನು ಬೆಳಗಿಸಲಿದ್ದಾರೆ.
ಅಯೋಧ್ಯೆಯಲ್ಲಿ ನವೆಂಬರ್ 13 ರಂದು ಸರಯುವಿನ 28 ಘಾಟ್ ಗಳಲ್ಲಿ ಬರೋಬ್ಬರಿ 5.51 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಆ ಮೂಲಕ ಅಯೋಧ್ಯೆ ಆಡಳಿತ ಮಂಡಳಿ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದೆ.
ಇನ್ನು ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅಲ್ಲಿನ ಅಧಿಕಾರಿ, ದೀಪೋತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಕಾರ್ಯನಿರ್ವಾಹಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಹೊರಗಿನಿಂದ ಬರುವವರಿಗೆ ಈ ದೀಪೋತ್ಸವಕ್ಕೆ ಅನುಮತಿ ಇಲ್ಲ. ಜನರು ತಮ್ಮ ಮನೆಗಳಿಂದ ದೀಪಗಳನ್ನು ತಂದು ರಾಮ್ ಕಿ ಪೈಡಿಯಲ್ಲಿ ಬೆಳಗಿಸಲು ತಿಳಿಸಲಾಗಿದೆ ಎಂದರು.
ಇನ್ನು ಅಯೋಧ್ಯೆ ಆಡಳಿತ ಮಂಡಳಿ ಕಳೆದ ಬಾರಿಯ ದೀಪಾವಳಿ ಸಂದರ್ಭದಲ್ಲಿ 4.10 ಲಕ್ಷ ದೀಪವನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿತ್ತು.
ತನ್ನ ಏಳನೇ ವಯಸ್ಸಿನಲ್ಲಿ ಪುಸ್ತಕ ಪ್ರಕಟಿಸಿದ ವಿಶ್ವದ ಅತ್ಯಂತ ಕಿರಿಯ ಲೇಖಕಿ
ದೀಪೋತ್ಸವ ಹಿನ್ನೆಲೆ ನವೆಂಬರ್ 11ರಿಂದಲೇ ಅಯೋಧ್ಯೆಯ ಗಡಿ ಸೀಲ್ ಆಗಲಿದೆ. ಈ ವಿಶೇಷ ಆಚರಣೆಗಳಲ್ಲಿ ಸ್ಥಳೀಯರು ಮಾತ್ರ ಭಾಗವಹಿಸಲಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುವ ಐದು ದಿನಗಳ ದೀಪೋತ್ಸವ ನವೆಂಬರ್ 12ಕ್ಕೆ ಆರಂಭವಾಗುತ್ತದೆ. ನವೆಂಬರ್ 13ರಂದು ಪ್ರಮುಖ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ನವೆಂಬರ್ 30ರ ವರೆಗೆ ಇತರ ಕಾರ್ಯಕ್ರಮಗಳು ನಡೆಯಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









