superstisious
ನಂಬಿಕೆಯೋ ಮೂಢನಂಬಿಕೆಯೋ, ಆಚರಣೆಯೋ.. ವೈಜ್ಞಾನಿಕ ಕಾರಣವೋ..! ಭಾರತದಲ್ಲಿ ಮಾತ್ರವಿದೆಯಾ ಮೌಢ್ಯಾಚರಣೆ..!
ಮೂಡನಂಬಿಕೆ… ಈ ಪದ ಕೇಳ್ತಿದ್ದಂತೆ ಮೊದಲಿಗೆ ಭಾರತ ನೆನಪಾಗುತ್ತೆ. ಯಾಕಂದ್ರೆ ಅನೇಕ ಧಾರ್ಮಿಕ, ಸಂಪ್ರದಾಯ ಆಚರಣೆಗಳು ತಲಾತಲಾಂತರದಿಂದಲೂ ನಮ್ಮಲ್ಲಿ ಬೆಳೆಸಿಕೊಂಡು ಬಂದಿದ್ದು, ಈಗಲೂ ನಂಬಿದ್ದೇವೆ. ಆಚರಿಸುತ್ತೇವೆ. ಆದ್ರೆ ಕೇವಲ ಭಾರತದಲ್ಲಿ ಮಾತ್ರ ಮೂಡನಂಬಿಕೆಗಳು ಇದ್ದಾವೆ ಅನ್ನೋದು ತಪ್ಪು. ಯಾಕಂದ್ರೆ ಪಾಶ್ಚಿಮಾತ್ಯ ದೇಶಗಳಲ್ಲೂ ಅನೇಕ ಮೂಡ ಸಂಪ್ರದಾಯಗಳು ಈಗಲೂ ಆಚರಣೆಯಲ್ಲಿವೆ. ಹಾಗೆ ನೋಡೋದಾದ್ರೆ ಮೂಡನಂಬಿಕೆಗಳ ಆಚರಣೆಯಲ್ಲಿ.
ವಿಶ್ವದ ಮೂಲೆ ಮೂಲೆಗಳಲ್ಲಿ ಈ ಮೂಡನಂಬಿಕೆ ಆಚರಣೆ ಅನ್ನೋದು ಇದೆ. ಇಂತಹ ಮೂಡ ಪದ್ದತಿಗಳ ಆಚರಣೆಯಲ್ಲಿ ಇಡೀ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿ ಇದೆ. 2ನೇ ಸ್ಥಾನದಲ್ಲಿ ಚೈನಾ, ನಂತರ ಗ್ರೀಸ್, USA, ಫಿಲಿಫೈನ್ಸ್, ನ್ಯೂ ಝಿಲ್ಯಾಂಡ್, ಜಪಾನ್, ಈಜಿಪ್ಟ್, ಫ್ರ್ಯಾನ್ಸ್, ಮೆಕ್ಸಿಕೋ. ಇಷ್ಟೇ ಅಲ್ಲ ಇಡೀ ವಿಶ್ವದ ಮೂಲೆಮೂಲೆಗಳಲ್ಲೂ ಈಗಾಲೂ ಅನೇಕ ಮೌಡ್ಯಗಳು, ಆಚರಣೆಗಳು, ಪದ್ಧತಿ, ಪರಂಪರೆ, ಸಂಪ್ರದಾಯಗಳು ರೂಡಿಯಲ್ಲಿವೆ.
ಕೇವಲ ಭಾರತದಲ್ಲಿ , ಸಂಪ್ರದಾಯ, ಮೌಡ್ಯಾಚರಣೆ ನೋಡೋದಾದ್ರೆ..!
ನಾವು ಭಾರತದ ಯಾವುದೇ ಮೂಲೆಗೆ ಹೋಗಲಿ ಮೂಢನಂಬಿಕೆಗಳು , ಪರಂಪರೆ , ಸಂಪ್ರದಾಯ ಆಚಾರ ವಿಚಾರದ ಹೆಸರದಲ್ಲಿ ರೂಡಿಯಲ್ಲಿರೋದನ್ನ ಕಾಣುತ್ತೇವೆ. ದೆವ್ವ – ಭೂತ, ಆತ್ಮ – ಪುನರ್ ಜನ್ಮ, ದೇವರು ಮೈ ಮೇಲೆ ಬರೋದು, ಆತ್ಮ ಮೈ ಮೇಲೆ ಬರೋದು, ಕೊಂಡ ಹಾಯುವುದು, ಪ್ರಾಣಿ ಬಲಿ ಕೊಡುವುದು ಹೀಗೆ ಇಂತವುಗಳ ಬಗ್ಗೆ ನೋಡಿಯೂ ಇದ್ದೇವೆ. ಕೇಳಿಯೂ ಇರುತ್ತೇವೆ. ಕೆಲವು ನಂಬಿಕೆಗಳು ಯಾವಾಗ ಮನುಷ್ಯನಿಗೆ ಹಾನಿಮಾಡುವುದಿಲ್ಲವೋ ಅಲ್ಲಿಯ ವರೆಗೂ ಅವು ಒಳ್ಳೆಯ ನಂಬಿಕೆಗಳಾಗಿರುತ್ತವೆ. ಮನುಷ್ಯನಿಗೆ ಅಥವಾ ಪ್ರಾಣಿಗಳಿಗೆ ಹಿಂಸೆ ಕೊಡುವುದನ್ನ ಮೌಡ್ಯಾಚರಣೆಗಳನ್ನಾಗಿ ಪರಿಗಣಿಸಲೂ ಬಹುದು. ಇಂತಹವುಗಳು ನಮ್ಮಲ್ಲಿ ಹೆಚ್ಚು. ಇವು ಆಚರಣೆಗಳು ಪದ್ಧತಿಗಳಿರಬಹುದು.
ಕೆಲವೊಂದು ರೂಡಿಸಿಕೊಂಡು ಬಂದಿರುವ ನಂಬಿಕೆಗಳು..!
ನಮ್ಮಲ್ಲಿ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ನಂಬಿಕೆ ಅಂದ್ರೆ ಅದು ಮುಟ್ಟಿನ ಸಮಯದಲ್ಲಿ ದೇವಾಲಯಕ್ಕೆ ಹೋಗಬಾರದು. ಹೌದು ನಮ್ಮಲ್ಲಿ ಹಿಂದಿನಿಂದಲೂ ಕೆಲವೊಂದು ಕಟ್ಟುಪಾಡುಗಳನ್ನ ಪಾಲನೆ ಮಾಡಿಕೊಂಡು ಬರಲಾಗ್ತಿದೆ. ಪೂರ್ವಜರು ಕೆಲ ವೈಜ್ಞಾನಿಕ ಕಾರಣಗಳಿಂದ ರೂಡಿಸಿಕೊಂಡು ಬಂದ ಕಟ್ಟುಪಾಡುಗಳಿಗೆ ಈಗ ಮಡಿ ಮೈಲಿಗೆಯ ರೂಪ ಕೊಡಲಾಗಿದೆ. ಹೌದು ಅದ್ರಲ್ಲಿ ಇದು ಸಹ ಒಂದು. ಮುಟ್ಟಿನ ಸಮಯದಲ್ಲಿ ದೇವಾಲಯಗಳಿಗೆ ಹೋಗಬಾರದು ಎಂಬ ನಿಯಮಗಳನ್ನ ತಂದ ಕಾರಣ ಅಂದ್ರೆ ಈ ಸಮಯದಲ್ಲಿ ಮಹಿಳೆಯರು ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಶಕ್ತಿಹೀನರಾಗಿರುತ್ತಾರೆ. ಹೀಗಾಗಿ ಆ ಸಮಯದಲ್ಲಿ ವಿಶ್ರಮಿಸಲಿ ಎನ್ನುವ ಕಾರಣಕ್ಕೆ ದೇವಸ್ಥಾನಕ್ಕೆ ಹೋಗಬಾರದು, ಪೂಜೆ ಮಾಡಬಾರದು, ಅಡುಗೆ ಮನೆಗೆ ಹೋಗಬಾರದು ಎಂಬೆಲ್ಲಾ ನಿಯಮಗಳನ್ನ ಮಾಡಲಾಗಿತ್ತು. ಅದು ಕ್ರಮೇಣ ರೂಡಿಯಾಗುತ್ತಾ ಹೋದಂತೆ ಮೈಲಿಗೆ ಎಂಬ ಹೆಸರಿಟ್ಟು ಮಹಿಳೆಯರನ್ನ ಆ ಸಮಯದಲ್ಲಿ ದೂರವಿಡುತ್ತಾ ಬಂದರು. ಆದ್ರೆ ಜೆನರೇಶನ್ ಬದಲಾದಂತೆ ಕೆಲ ಕಟ್ಟುಪಾಡುಗಳು ಸಹ ಆಚರಣೆಯಿಂದ ದೂರಾಗುತ್ತಿದ್ರು , ಈಗಲೂ ಕೆಲವೆಡೆ ಇವು ರೂಡಿಯಲ್ಲಿದೆ. 
ಇನ್ನೂ ಸಂಜೆಯಾದ್ರೆ, ಉಗುರು ಕತ್ತರಿಸಬಾರದು, ಸಾವಿನ ಮನೆಗೆ ಹೋಗಿ ಬಂದು ಸ್ನಾನ ಮಾಡಲೇ ಬೇಕು, ಸಂಜೆ ಮೇಲೆ ಗಿಡ ಕೀಳಬಾರದು, ತುಳಸಿ ಗಿಡಕ್ಕೆ ಕೈಹಾಕಬಾರದು, ಯುವತಿಯರು, ಮಹಿಳೆಯರು ಎಕ್ಕಡ ಗಿಡ ಮುಟ್ಟಬಾರದು, ಮನೆ ಬಾಗಿಲಿಗೆ ನಿಂಬೆ ಹಣ್ಣು, ಮೆಣಸಿನಕಾಯಿಯ ತೋರಣ ಕಟ್ಟುವುದು, ರಾತ್ರಿ ಅರಳಿ ಮರದ ಬಳಿ ಹೋಗಬಾರದು, ಬೆಕ್ಕು ಅಡ್ಡ ಹೋದ್ರೆ ಅಶುಭ ಮಂಗಳವಾರ , ಶುಕ್ರವಾರ ಕೂದಲು ಕತ್ತರಿಸಬಾರದು ಹೀಗೆ ಹಲವಾರು ನಂಬಿಕೆಗಳು ಆಚರಣೆಗಳು ನಮ್ಮಲ್ಲಿವೆ. ಆದರೆ ಇವಕ್ಕೆಲ್ಲ ಕೆಲ ವೈಜ್ಞಾನಿಕ ಕಾರಣಗಳೂ ಇವೆ. ಹಿಂದೆಲ್ಲಾ ಪೂರ್ವಜರು ನಾನಾ ಕಾರಣಗಳು ಯೋಜನೆಗಳಿಂದ ಹಾಕಿದ ಕಟ್ಟುಪಾಡುಗಳು ನಿಯಮಗಳು ಇದೀಗ ಧಾರ್ಮಿಕ ರೂಪ ಪಡೆದುಕೊಂಡು ಆಚರಣೆಯಲ್ಲಿವೆ.
ಸತತ 4ನೇ ದಿನ ಚಿನ್ನ – ಬೆಳ್ಳಿ ದರದಲ್ಲಿ ಕುಸಿತ : ಗ್ರಾಹಕರಿಗೆ ಸಂತಸ
ಇಡೀ ವಿಶ್ವದಾದ್ಯಂತ ಅನೇಕ ಕೆಟ್ಟ ಹಾಗೂ ಭಯಾನಕ ಮೌಢ್ಯಾಚರಣೆಗಳು ಇಂದಿಗೂ ಸಹ ಆಚರಣೆಯಲ್ಲಿವೂ. ಭಾರತ, ನೇಪಾಳ, ಜಪಾನ್ ಹೀಗೆ ಅನೇಕ ರಾಷ್ಟ್ರಗಳಲ್ಲಿ ಯಾವುದೇ ಮೂಲೆಗೆ ಹೋದರು ಮೌಢ್ಯಾಚರಣೆಗಳನ್ನ ನಾವು ಗಮನಿಸಬಹುದು. ಶತಮಾನ ಬದಲಾದ್ರೂ, ಟೆಕ್ನಾಲಜಿ ಅಭಿವೃದ್ಧಿಯಾದ್ರು, ಜೆನರೇಶನ್ ಚೇಂಜ್ ಆದ್ರೂ ಕೆಲವೊಂದು ನಂಬಿಕೆಗಳನ್ನ ಮಾತ್ರ ಈಗಲೂ ಆಚರಣೆಯಲ್ಲಿವೆ. 
superstisious
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








