ಕರೋನಾಸುರನ ಅಬ್ಬರದ ನಡುವೆ ಬಾಹುಬಲಿ ಬ್ರಹ್ಮ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇಡೀ ಭಾರತೀಯ ಚಿತ್ರರಂಗವೇ ಜಾತಕ ಪಕ್ಷಿಯ ರೀತಿ ಕಾಯುವಂತೆ ಮಾಡಿದ್ದ ಜಕ್ಕಣ್ಣ ಕೊನೆಗೂ ತಮ್ಮ ಆರ್ ಆರ್ ಆರ್ ಚಿತ್ರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಆ ಮೂಲಕ ಮೆಗಾ, ನಂದಮೂರಿ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್ ನೀಡಿದ್ದಾರೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ರಾಮ್ ಚರಣ್ ಹಾಗೂ ಜ್ಯೂ. ಎನ್ ಟಿಆರ್ ಅವರ ಲುಕ್ ರಿವೀಲ್ ಮಾಡಿದ್ದಾರೆ. ಇದಲ್ಲದೆ ಆರ್ ಆರ್ ಆರ್ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ. ಆರ್‌ಆರ್‌ಆರ್ ಅಂದ್ರೆ ರೌದ್ರ, ರಣ ಹಾಗೂ ರುಧಿರ..!!!
ಇನ್ನು ಈ ಬಿಗ್ ಸಿನಿಮಾದಲ್ಲಿ ರಾಮ್‌ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಜೊತೆ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ನಟಿಸ್ತಿದ್ದು ಚಿತ್ರ ಈಗಾಗ್ಲೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.







