ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗಿನ ಜನರ ಬಹುದಿನದ ಕನಸು ಈಡೇರಿದೆ. ಘೋಷಣೆಯಾದ ಎರಡು ವರ್ಷಗಳ ಬಳಿಕ `ಪೊನ್ನಂಪೇಟೆ’ ತಾಲೂಕು ತನ್ನ ಕಾರ್ಯಾರಂಭ ಮಾಡಿದೆ. ಇದರೊಂದಿಗೆ ಕೊಡಗು ಜಿಲ್ಲೆಯ ನಾಲ್ಕನೇ ತಾಲೂಕು ಅಸಿತ್ವಕ್ಕೆ ಬಂದಂತಾಗಿದೆ.
ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪೊನ್ನಂಪೇಟೆ ತಾಲೂಕು ಘೋಷಣೆ ಮಾಡಲಾಗಿತ್ತು. ಆಡಳಿತಾತ್ಮಕ ಪ್ರಕ್ರಿಯೆಗಲು ಪೂರ್ಣಗೊಳ್ಳಲು ಸರ್ಕಾರ ಎರಡು ವರ್ಷಗಳ ಕಾಲ ತೆಗೆದುಕೊಂಡಿದೆ.

ವಿರಾಜಪೇಟೆಯಿಂದ ವಿಂಗಡಿಸಿ ಪೊನ್ನಂಪೇಟೆ ತಾಲೂಕು ರಚನೆ ಮಾಡಲಾಗಿದೆ. ಪೊನ್ನಂಪೇಟೆ ಭೌಗೋಳಿಕವಾಗಿ 120 ಚದರ ಕಿ.ಮೀ ಇದೆ. 21 ಗ್ರಾ.ಪಂಗಳನ್ನು ಸೇರಿಸಿ ಪೊನ್ನಂಪೇಟೆ ತಾಲ್ಲೂಕು ಮಾಡಲಾಗಿದೆ. ಹೊಸ ತಾಲೂಕಿಗೆ 12 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ಪೊನ್ನಂಪೇಟೆ ಭಾಗದ ಜನರು ವಿರಾಜಪೇಟೆ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿಗೆ ಹೋಗಲು 2ರಿಂದ 3 ಗಂಟೆ ಕಾಲಾವಕಾಶ ಬೇಕಿತ್ತು. ಇದರಿಂದ ಪ್ರಯಾಣದ ವೆಚ್ಚ ಹಾಗೂ ಸಮಯ ವ್ಯರ್ಥವಾಗುವ ಸಂದರ್ಭ ಎದುರಾಗಿತ್ತು. ನೂತನ ತಾಲ್ಲೂಕು ಘೋಷಣೆಯಿಂದ ಜನರಿಗೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ.

ಕಂದಾಯ ಸಚಿವ ಆರ್.ಅಶೋಕ್ ನೂತನ ಪೊನ್ನಂಪೇಟೆ ತಾಲೂಕಿಗೆ ಅಧಿಕೃತ ಚಾಲನೆ ನೀಡಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸಿ, ಸರ್ಕಾರದ ಸವಲತ್ತುಗಳು ಸುಲಭವಾಗಿ ಸಿಗುವಂತೆ ಮಾಡಲು ಪೆÇನ್ನಂಪೇಟೆಯನ್ನು ಹೊಸ ತಾಲ್ಲೂಕು ಆಗಿ ವಿರಾಜಪೇಟೆಯಿಂದ ವಿಂಗಡಿಸಲಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ಗ್ರೇಡ್ 1 ತಹಶೀಲ್ದಾರ್ ಹುದ್ದೆ ಹಾಗೂ ಆಡಳಿತಾತ್ಮಕವಾಗಿ ಸಹಕಾರಿಯಾಗಲು 12 ಕೆಳಹಂತದ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ನೂತನ ತಾಲ್ಲೂಕು ರಚನೆಯಲ್ಲಿ ಪೊನ್ನಂಪೇಟೆಯ ನಾಗರಿಕ ವೇದಿಕೆ ನಿರಂತರವಾಗಿ ಹೋರಾಟ ನಡೆಸಿ ಯಶಸ್ಸು ಕಂಡಿದೆ. ವೇದಿಕೆಯ ಹಿರಿಯರ ಪ್ರಯತ್ನದಿಂದ ದಶಕಗಳ ಹೋರಾಟಕ್ಕೆ ಜಯ ಸಿಕ್ಕೆದೆ. ನೂತನ ತಾಲ್ಲೂಕು ರಚನೆಯನ್ನು ಕಣ್ತುಂಬಿಕೊಳ್ಳುವುದು ಪೊನ್ನಂಪೇಟೆ ಭಾಗದ ಅನೇಕ ಹಿರಿಯರ ಬಯಕೆಯಾಗಿತ್ತು. ಇದೀಗ ಹೋರಾಟಗಾರರಿಗೆ ಸಂತೋಷವಾಗಿದೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








