ಅಂತಿಮ ಟಿ-20 ಪಂದ್ಯದಲ್ಲಿ ಆಸೀಸ್ ವಿರುದ್ಧ ಟೀಮ್ ಇಂಡಿಯಾಗೆ ಸೋಲು
ಟಿ-ಟ್ವೆಂಟಿ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 12 ರನ್ ಗಳಿಂದ ಗೆದ್ದುಕೊಂಡಿದೆ.
ಈ ಮೂಲಕ ಭಾರತದ ಸರಣಿ ಕ್ಲೀನ್ ಸ್ವೀಪ್ ಮಾಡುವ ಆಸೆ ಭಗ್ನಗೊಂಡಿದೆ. ಅದೇ ರೀತಿ ತವರಿನಲ್ಲಿ ಆಸ್ಟ್ರೇಲಿಯಾ ಮರ್ಯಾದೆ ಉಳಿಸಿಕೊಂಡಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನ ನೀಡಿತ್ತು.
ಆರಂಭದಲ್ಲೇ ನಾಯಕ ಆರೋನ್ ಫಿಂಚ್ ಶೂನ್ಯಕ್ಕೆ ಔಟಾದ್ರು. ಇನ್ನೊಂದೆಡೆ ಮ್ಯಾಥ್ಯೂ ವಾಡೆ ಅವರು ಟೀಮ್ ಇಂಡಿಯಾ ಬೌಲರ್ ಗಳನ್ನು ಬೆವರಿಳಿಸಿದ್ರು. ಮ್ಯಾಥ್ಯೂ ವಾಡೆ ಅವರು 63 ಎಸೆತಗಳಲ್ಲಿ ಆಕರ್ಷಕ 80 ರನ್ ಸಿಡಿಸಿದ್ರು.
ಈ ನಡುವೆ ಸ್ಟೀವ್ ಸ್ಮಿತ್ 24 ರನ್ ಗಳಿಸಿದ್ರೆ, ಗ್ಲೇನ್ ಮ್ಯಾಕ್ಸ್ ವೆಲ್ ಮಿಂಚಿನ 54 ರನ್ ದಾಖಲಿಸಿದ್ರು.
ಪರಿಣಾಮ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಕೂಡ ಆರಂಭದಲ್ಲೆ ಆಘಾತ ಅನುಭವಿಸಿತ್ತು.
ಕೆ.ಎಲ್. ರಾಹುಲ್ ಶೂನ್ಯಕ್ಕೆ ಔಟಾದ್ರು. ಇನ್ನೊಂದೆಡೆ ಶಿಖರ್ ಧವನ್ 28 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಬಳಿಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದ್ರು. ಸಂಜು ಸಾಮ್ಸನ್ 10 ರನ್ ಗೆ ಸೀಮಿತವಾದ್ರೆ, ಶ್ರೇಯಸ್ ಅಯ್ಯರ್ ಡಕೌಟಾದ್ರು.
ಹಾಗೆ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 20 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಏತನ್ಮಧ್ಯೆ, ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ ಅಮೋಘ 85 ರನ್ ಗಳಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಕೊನೆಯ ಹಂತದಲ್ಲಿ ದೀಪಕ್ ಚಾಹರ್ ಏಳು ಎಸೆತಗಳಲ್ಲಿ 17 ರನ್ ದಾಖಲಿಸಿದ್ರು.
ಅಂತಿಮವಾಗಿ ಟೀಮ್ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ 12 ರನ್ ಗಳಿಂದ ಸೋಲು ಅನುಭವಿಸಿತ್ತು.
ಇದ್ರೊಂದಿಗೆ ಟೀಮ್ ಇಂಡಿಯಾ ಟಿ-ಟ್ವೆಂಟಿ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಹಾಗೆ ಆಸ್ಟ್ರೇಲಿಯಾ ಏಕದಿನ 2-1ರಿಂದ ಗೆದ್ದುಕೊಂಡಿತ್ತು.
ಇನ್ನು ಡಿಸೆಂಬರ್ 17ರಿಂದ ಆರಂಭವಾಗಲಿರು ಟೆಸ್ಟ್ ಸರಣಿಯ ಮೇಲೆ ಉಭಯ ತಂಡಗಳ ಚಿತ್ತವನ್ನಿಟ್ಟಿವೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಎರಡೂ ತಂಡಗಳಿಗೆ ಅಗ್ನಿಪರೀಕ್ಷೆಯಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










