ತಮಿಳು ವಿಜೆ ಚಿತ್ರಾ ಆತ್ಮಹತ್ಯೆ : ನಿರೂಪಕಿಯಾಗಿ , ನಟಿಯಾಗಿ , ಡ್ಯಾನ್ಸರ್ ಆಗಿ ಮನೆಮಾತಾಗಿದ್ದ ಚಿತು ಲೈಫ್ ಜರ್ನಿ..!
ತಮಿಳಿನ ಖ್ಯಾತ ವಿಜೆ ( ನಿರೂಪಕಿ) ಹಾಗೂ ಕಿರುತೆರೆ ನಟಿಯಾಗಿದ್ದ ಚಿತ್ರಾ ಇಂದು ನಸುಕಿನ ಜಾವದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವರ್ಷದ ನಟಿ ಚಿತ್ರಾ ಚಿತು ಅಂತಲೇ ಪ್ರಖ್ಯಾತಿ ಪಡೆದಿದ್ದರು. ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದ ಚಿತು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದರು. ಆಗಾಗ ಫೋಟೋಗಳನ್ನ ಶೇರ್ ಮಾಡಿ ಅಭಿಮಾನಿಗಳನ್ನ ರಂಜಿಸುತ್ತಿದ್ದರು. ಆದರೆ ಅವರ ಹತಾಠ್ ನಿಧನದ ಸುದ್ದಿಯಿಂದಾಗಿ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.
ಚೆನ್ನೈನ 5 ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ನಟಿ ಶೂಟಿಂಗ್ ಮುಗಿಸಿ ರೂಮಿಗೆ ವಾಪಸ್ಸಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಈ ಬಗ್ಗೆ ಅವರ ಭಾವಿ ಪತಿ ಉದ್ಯಮಿ ಹೇಮಂತ್ ಅವರು ವಿವರಣೆ ನಿಡಿದ್ದಾರೆ. ಶೂಟಿಂಗ್ ಮುಗಿಸಿ 2.30 ನಸುಕಿನ ಜಾವಕ್ಕೆ ವಾಪಸ್ಸಾದ ಚಿತ್ರ ರೂಮಿಗೆ ಹೋಇ ಎಷ್ಟೊತ್ತಾದರೂ ಬಂದಿಲ್ಲ. ಹೀಗಾಗಿ ಗಾಬರಿಗೊಂಡು ಹೋಟೆಲ್ ಸಿಬ್ಬಮದಿ ಸಹಾಯದಿಂದ ರೂಂ ತೆಗೆಸಿದಾಗ ಚಿತ್ರಾ ನೇಣಿಗೆ ಶರಣಾಗಿದ್ದ ಬಗ್ಗೆ ತಿಳಿಯಿತು ಎಂದಿದ್ದಾರೆ.
ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಚಿತ್ರಾ ಖಿನ್ನತೆಯಿಂದ ಬಳಳುತ್ತಿದ್ದರು. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಮಡಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ ತಮಿಳು ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿದ್ದ ಚಿತ್ರಾ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಾರ್ಯಕ್ರಮಗಳ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿಭಾನ್ವಿತ ಚಿತ್ರಾ ಉತ್ತಮ ಡ್ಯಾನ್ಸರ್ ಕೂಡ ಹೌದು.
ಜನೋಪಕಾರ ಮಾಡಲು ತಮ್ಮ ಫ್ಲ್ಯಾಟ್ಸ್ ಗಳನ್ನು ಅಡವು ಇಟ್ಟ ನಟ ಸೋನು ಸೂದ್
ನಿರೂಪಣೆ
1992ರಂದು ಚೆನ್ನೈನಲ್ಲಿ ಜನಿಸಿದ್ದ ಚಿತ್ರಾ ಅವರು ಮೊದಲಿಗೆ ನಿರೂಪಕಿಯಾಗಿ ಕೆಲಸ ಮಾಡಿದರು. 2012ರಲ್ಲಿ ವಿಲಯಾಡು ವಾಗೈ ಸೂಡು, 2013ರಲ್ಲಿ ಸತ್ತಮ್ ಸೋಲವತ್ತು ಎನ್ನಾ,
2014: ನೋಡಿಕು ನೋಡಿ ಅತಿರಾಡಿ, ಊರ್ ಸುತ್ತಲಾಮ್ ವಾಂಗಾ, ಈ ಸಮಯಲ್ ಆರಿಯಿಲ್, ಕಾಮಿಡಿ ಶೋ ಓಸ್ತಿ ಕಾಮಿಡಿ ಕುಸ್ತಿ.
2015ರಲ್ಲಿ ಸಾ ಬೋ ತ್ರಿ ಸೀಸನ್ 2, ಜಿಲ್ ಜಂಗ್ ಜುಕ್,
2016-2018 : ಆಹಾ ಮಾಮಿಯಾರ್ ,
2019: ಕಡೆಯದಾಗಿ ನಿರೂಪಣೆ ಮಾಡಿದ ಶೋ , ವಸೂಲ್ ವೆಟ್ಟೈ
ತಮಿಳು ಕಿರುತೆರೆಯ ಖ್ಯಾತ ನಟಿ ಚಿತ್ರಾ ಆತ್ಮಹತ್ಯೆಗೆ ಶರಣು
ನಟನೆ
2014ರಲ್ಲಿ ಮೂಡಿಬಂದ ಮನ್ನನ್ ಮಗಳ್ ಧಾರಾವಹಿಯಲ್ಲಿ ಚಿತ್ರಾ ವೈಶಾಲಿ ಪಾತ್ರದಲ್ಲಿ ನಟಿಸಿದ್ದಾರೆ. 2014-18 ರವರೆಗೂ ತೆರೆಕಂಡ ಶೋ ಚಿನ್ನ ಪಾಪ ಪೆರಿಯ ಪಾಪದಲ್ಲಿ ಪೆರಿಯ ಪಾಪಳಾಗಿ ನಟಿಸಿ ಅಭಿಮಾನಿಗಳನ್ನ ರಂಜಿಸಿದ್ದಾರೆ. 2016ರಲ್ಲಿ ಸರವಣ್ ಮೀನಾಚಿಯಲ್ಲಿ ಕಲೈ ಅರಸಿ, 2017ರಲ್ಲಿ ಡಾರ್ಲಿಂಗ್ ಡಾರ್ಲಿಂಗ್ ನಲ್ಲಿ ಅನಿತಾ ಆಗಿ, 2018ರಲ್ಲಿ ವೇಲುಂಚಿ ಶೋನಲ್ಲಿ ವೇಲುಂಚಿಯಾಗಿ, 2018 ರಿಂದ ಪ್ರಾರಂಭವಾಗಿ ಈಗಲೂ ನಡೆಯುತ್ತಿರುವ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಳ್ಳೈ ಆಗಿ ಇದೇ ಪಾತ್ರಕ್ಕೆ ಅತ್ಯಂತ ಖ್ಯಾತಿ ಗಳಿಸಿದ್ದರು. ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದರು.
ರಿಯಾಲಿಟಿ ಶೋಗಳು
ಕೇವಲ ನಟನೆ ನಿರೂಪಣೆ ಅಷ್ಟೇ ಅಲ್ಲದೆ ಹಲವಾರು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ ಚಿತು. 2014ರಲ್ಲಿ ರಿಂಗ್ ಓ ರಿಂಗ್ ನಲ್ಲಿ, 2016- 2017ರವರೆಗೂ ಮೂಡಿಬಂದ ಡ್ಯಾನ್ಸ್ ಜೋಡಿ ಡ್ಯಾನ್ಸ್ ನಲ್ಲಿ ಸ್ಪರ್ಧಿಸಿದ್ದಾರೆ. 2017ರವರೆಗೂ ಬಂದ ನಾನ್ ಬೆಂಡಾ, 2018ರವರೆಗೂ ಝೀ ಡ್ಯಾನ್ಸ್ ಲೀಗ್ ನಲ್ಲೂ ಸ್ಪರ್ಧೆ ಮಾಡಿದ್ದಾರೆ. 2018-2019ರವರೆಗೂ ಮೂಡಿಬಂದ ಜೋಡಿ ಫನ್ ಅನ್ ಲಿಮಿಟೆಡ್ ನಲ್ಲೂ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel