ಕೊರೊನಾ ಅಪ್ ಡೇಟ್ : ರಾಜ್ಯದಲ್ಲಿಂದು 1185 ಮಂದಿಗೆ ಸೋಂಕು, 10 ಸಾವು
ಬೆಂಗಳೂರು : ರಾಜ್ಯದಲ್ಲಿ ಇಂದು 1185 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 10 ಮಂದಿ ಹೆಮ್ಮಾರಿ ವೈರಸ್ ಗೆ ಕೊನೆಯುಸಿರೆಳೆದಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ರಾಜ್ಯಾದ್ಯಂತ 1,185 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 9,03,425ಕ್ಕೆ ಏರಿಕೆಯಾಗಿದೆ. ಅತೀ ಹೆಚ್ಚು ಬೆಂಗಳೂರು ನಗರದಲ್ಲಿ 673 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇದನ್ನೂ ಓದಿ : ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಬೆಂಗಳೂರು ನಗರದಲ್ಲಿ 3 ಜನರು ಸೇರಿದಂತೆ ರಾಜ್ಯದಲ್ಲಿ ಕೊರೊನಾದಿಂದಾಗಿ 11 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಕೊರೊನಾ ವೈರಸ್ ಗೆ ಸಂಖ್ಯೆ 11,965ಕ್ಕೆ ಏರಿಕೆಯಾಗಿದೆ.
ಇನ್ನು ಒಟ್ಟು 9,03,425 ಕೊರೊನಾ ಸೋಂಕಿತರ ಪೈಕಿ ಈವರೆಗೂ 8,75,796 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿನ್ನು 15,645 ಸಕ್ರೀಯ ಪ್ರಕರಣಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









