ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ನ ಮಸ್ತ್ ಮಜಾ ಮಾಡ್ತಿರುವ ಅನಿರುದ್ಧ..!
ಜೊತೆಜೊತೆಯಲಿ ಧಾರವಾಹಿಯ ನಟ ಅನಿರುದ್ಧ ಸದ್ಯ ಕೆಲಸದಿಂದ ಬ್ರೇಕ್ ಪಡೆದು ಫ್ಯಾಮಿಲಿ ಜೊತೆಗೆ ಮಾಲ್ಡೀವ್ಸ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಪತ್ನಿ ಮತ್ತು ತಮ್ಮ ಇಬ್ಬರು ಮಕ್ಕಳು ಹಾಗೂ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಜೊತೆಗೆ ಮಾಲ್ಡೀವ್ ಪ್ರವಾಸಕ್ಕೆ ತೆರಳಿರುವ ಅನಿರುದ್ಧ ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡ್ತಿದ್ದಾರೆ.
ಪುರಿ ಜಗನ್ನಾಥ ಸ್ವಾಮಿ ದೇಗುಲ ಮತ್ತೆ ಭಕ್ತರ ದರ್ಶನಕ್ಕೆ ಮುಕ್ತ..!
ಸುಮಾರು ಒಂದು ವಾರದಿಂದ ಮಾಲ್ಡೀವ್ಸ್ ನೆಲದಲ್ಲೇ ಬೀಡುಬಿಟ್ಟಿರುವ ಅನಿರುದ್ಧ್ ಫ್ಯಾಮಿಲಿಯ ಕ್ಯೂಟ್ ಅಂಡ್ ಸ್ವೀಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸ್ಕೂಬಾ ಡೈವಿಂಗ್ ಸೇರಿದಂತೆ ಪತ್ನಿ ಮಕ್ಕಳ ಜೊತೆ ಅನೇಕ ಗೇಮ್ ಗಳಲ್ಲಿ ಭಾಗಿಯಾಗಿ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅನಿರುದ್ಧ ಶೇರ್ ಮಾಡಿಕೊಳ್ತಾಯಿದ್ದಾರೆ. ಅವರ ಪೋಸ್ಟ್ ಗಳಿಗೆ ನೆಟ್ಟಿಗರಿಂದ ಲೈಕ್ಸ್ ಕಮೆಂಟ್ ಗಳು ಹರಿಬರುತ್ತಿವೆ.
ಕೊರೊನಾ ನಿಯಮಾಗಳು ‘ಸಿನಿಮಾ ತಾರೆಯರಿಗೆ’ ಅನ್ವಯಿಸಲ್ವಾ..?
ಅಂದಹಾಗೆ ಇತ್ತೀಚಿಗೆ ಸಾಕಷ್ಟು ಬಾಲಿವುಡ್ , ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಕಡೆ ಪಯಣ ಬೆಳೆಸುತ್ತಲೇ ಇದ್ದಾರೆ. ಕಾಜಲ್ ಅಗರ್ವಾಲ್, ಸಮಂತಾ, ಶರ್ಮಿಳಾ ಮಾಂಡ್ರೆ, ಪ್ರಣಿತಾ, ರಕುಲ್ ಪ್ರೀತ್, ಶಾನ್ವಿ ಶ್ರೀವಾತ್ಸವ್, ದಿಶಾ ಪಟಾನಿ, ತಾಪ್ಸಿ, ಹೀಗೆ ಹಲವರು ಮಾಲ್ಡೀವ್ಸ್ ಗೆ ತೆರಳಿ ಎಂಜಾಯ್ ಮಾಡ್ತಿದ್ದು, ಹಾಟ್ ಅಂಡ್ ಗ್ಲಾಮರಸ್ ಫೋಟೋಗಳನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಹಲ್ ಚಲ್ ಎಬ್ಬಿಸಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel