ಸ್ವಂತ ಮಗಳ ಮೇಲೆ ತಂದೆಯ ಮೃಗೀಯ ವರ್ತನೆ: ಮಗಳ ಡೈರಿಯಲ್ಲಿತ್ತು ನೋವಿನ ಕಥೆ..!
ಬೆಂಗಳೂರು: ಮಕ್ಕಳ ಪಾಲಿಗೆ ಕೆಲವೊಮ್ಮೆ ಪೋಷಕರೇ ವಿಲನ್ ಆಗ್ತಾರೆ. ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಆದ್ರೆ ಈತ ತನ್ನ ಸ್ವಂತ ಮಗಳಿಗೆ ಎಷ್ಟೆಲ್ಲಾ ಟಾರ್ಚರ್ ಕೊಟ್ಟಿದ್ದಾನೆ ಅಂತ ಹೇಳಿದ್ರೆನೇ ಕಣ್ಣು ಕೆಂಪಾಗುತ್ತೆ. ರಾಹುಲ್ ಎಂಬಾತ ತನ್ನ ಸ್ವಂತ ಮಗಳ ಮೇಲೆ ಪೈಶಾಚಿಕ ವರ್ತನೆ ತೋರಿದ್ದಾನೆ. ಆಕೆಗೆ ಸತತವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ. ಇನ್ನೂ ತಂದೆ ಕೊಟ್ಟ ಟಾರ್ಚರ್ ನ ಇಂಚಿಂಚೂ ಮಾಹಿತಿಯನ್ನ ಆತನ ಪುತ್ರಿ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾಳೆ. ಈತ ತನ್ನ 10 ವರ್ಷದ ಮಗಳಿಗೆ ಕೊಟ್ಟಿರೋ ಟಾರ್ಚರ್ ಅಷ್ಟಿಷ್ಟಲ್ಲ. ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ.
ಮಗಳ ಡೈರಿಯಲ್ಲಿ ಏನಿದೆ..
ಬಾಲಕಿಯ ಡೈರಿಯಲ್ಲಿ ಅನೇಕ ನೋವಿನ ಸಂಗತಿಗಳನ್ನ ಹಂಚಿಕೊಂಡಿದ್ದಾಳೆ. ಅಪ್ಪ ಕೊಟ್ಟ ಹಿಂಸೆಯ ಬಗ್ಗೆ ವಿವರಿಸಿದ್ದಾಲೆ. ಆ ಡೈರಿಯಲ್ಲಿರೋ ಪ್ರಕಾರ ಆಕೆ ಸ್ನಾನ ಮಾಡುವಾಗ ಬಾಗಿಲು ಹಾಕಿ ಕೊಳ್ಳದಂತೆ ತಂದೆ ಹಿಂಸೆ ನೀಡುತ್ತಿದ್ದ. ಜೊತೆಗೆ ನೀನು ದಪ್ಪ ಆಗಿದೀಯ ಎಂದು ಕಾರಣ ನೀಡಿ ವಾರದಲ್ಲಿ ಎರಡು ದಿನ ಊಟ ನೀಡದೇ ಹಿಂಸೆ ಕೊಟ್ಟಿದ್ದಾನೆ ಎಂದು ಬರೆದುಕೊಂಡಿದ್ದಾಳೆ.
ಅಂದ್ಹಾಗೆ ರಾಹುಲ್ ಹಾಗೂ ಆತನ ಪತ್ನಿ ಅಂಜಲಿ ಇಬ್ಬರು 3 ವರ್ಷಗಳ ಹಿಂದೆಯೇ ಡೈವೋರ್ಸ್ ಪಡೆದು ಬೇರೆಯಾಗಿದ್ದರು. ಮಕ್ಕಳನ್ನು ಇಬ್ಬರು ಪಾಲನೆ ಪೋಷಣೆ ಮಾಡಬಹುದೆಂದು ಕೌಟಂಬಿಕ ನ್ಯಾಯಾಲಯ ಸೂಚನೆ ನೀಡಿತ್ತು. ಆದ್ರೆ ರಾಹುಲ್ ಮಗಳನ್ನು ನೋಡಿಕೊಳ್ಳುತ್ತಿದ್ದ. ಮೂರು ವರ್ಷಗಳಿಂದ ಅಂಜಲಿಗೆ ಮಗಳನ್ನು ನೋಡಲು ಅವಕಾಶ ನಿರಾಕರಿಸುತ್ತಲೇ ಬಂದಿದ್ದ.
ಮದಗಜ ಟೀಮ್ ನಿಂದ ಅಭಿಮಾನಿಗಳಿಗೆ ಬಿಗ್ ಗಿಫ್ಟ್ : ತೆಲುಗಿನಲ್ಲಿ ಟೀಸರ್ ರಿಲೀಸ್ ಡೇಟ್ ಅನೌನ್ಸ್..!
ಇನ್ನೂ ಅಂಜಲಿ ಅದೆಷ್ಟೇ ಬಾರಿ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ರು ಸಾಧ್ಯವಾಗಿರಲಿಲ್ಲ. ಇತ್ತ ತಂದೆಯ ನಡೆಯಿಂದ ತೀರ ಮನನೊಂದು ಹೋಗಿದ್ದ ಬಾಲಕಿ ಹೇಗೋ ಮಾಡಿ ತಾಯಿಗೆ ಕರೆ ಮಾಡಿ ಅಪ್ಪನ ಪೈಶಾಚಿಕ ಕೃತ್ಯದ ಬಗ್ಗೆ ವಿವರಿಸಿದ್ದಾಳೆ. ನಂತರ ಅಂಜಲಿ ಸಹಾಯಕ್ಕಾಗಿ ಸೀದಾ ಪೊಲೀಸರ ಮೊರೆ ಹೋಗಿದ್ದಾಳೆ. ಇದೀಗ ದೂರು ದಾಖಲಿಸಿಕೊಂಡಿರುವ ಪೊಲೀಸರು ರಾಹುಲ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಬಾಲಕಿಯನ್ನ ತಾಯಿ ಅಂಜಲಿ ತನ್ನೊಂದಿಗೆ ಕರೆದೊಯ್ದಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








