ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಂತೋಷ ತುಂಬಿದ ಹೊಸತನ್ನು 2021ರ ಹೊಸವರ್ಷ ಹೊತ್ತು ತರಲಿ..

Shwetha by Shwetha
January 1, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
New year 2021
Share on FacebookShare on TwitterShare on WhatsappShare on Telegram

ಸಂತೋಷ ತುಂಬಿದ ಹೊಸತನ್ನು 2021ರ ಹೊಸವರ್ಷ ಹೊತ್ತು ತರಲಿ..‌  New year 2021

ಮಂಗಳೂರು, ಜನವರಿ01: ಕಾಲಚಕ್ರದಲ್ಲಿ ಉರುಳುವ ಪ್ರತಿವರ್ಷದತ್ತ ಒಮ್ಮೆ ಕಣ್ಣು ಹೊರಳಿಸಿ ನೋಡಿದಾಗ, ಆದ ಸಂಕಟಗಳ ಬಗ್ಗೆ ಎದೆಯ ಮೂಲೆಯಲ್ಲಿ ವೇದನೆ, ಆಗಿರುವ ಒಳಿತುಗಳ ಬಗ್ಗೆ ಎದೆಯ ತುಂಬಾ ಸಂತೋಷದ ಭಾವನೆ… New year 2021

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

2020ನೇ ಇಸ್ವಿ ಈಗಾಗಲೇ ಕಾಲಗರ್ಭ ಸೇರಿದೆ. ಅದು ಮತ್ತೆಂದೂ ನಮಗೆ ಸಿಗಲಾರದು.
ಆದರೆ ಇತಿಹಾಸ ಪುಟ ಸೇರಿರುವ 2020 ಎಂಬ ವರ್ಷ ನಮ್ಮ ಮನಸ್ಸಿನಿಂದ ಅಷ್ಟು ಸುಲಭಕ್ಕೆ ಮರೆಯಾಗಲು ಸಾಧ್ಯವಿಲ್ಲ. ಏಕೆಂದರೆ ಇದು ಸಂಕಷ್ಟ, ಸವಾಲುಗಳನ್ನು ಎದುರಿಸಿದ ವರ್ಷ. ಕೊರೋನಾ ವೈರಸ್ ಎಂಬ ಸೋಂಕಿನಿಂದ ನಮ್ಮ ಬದುಕು ಬದಲಾವಣೆಗೆ ಒಗ್ಗಿಕೊಂಡ ವರ್ಷ.. 2020 ಜನವರಿಯಿಂದ ಏನೆಲ್ಲಾ ನಡೆದಿದೆ ಎಂದು ಕಣ್ಣು ಹಾಯಿಸಿದರೆ ಅಲ್ಲಿ ಬರೀ ಕಹಿ ಘಟನೆಗಳೇ , ಕಲಿತ ಪಾಠಗಳೇ‌ ಕಾಣಿಸುತ್ತದೆ.
New year 2021

ಕೊರೋನಾ ವೈರಸ್ ಎಂಬ ವೈರಸ್ ತನ್ನ ರುದ್ರನರ್ತನದಿಂದ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿ, ಜನ ಸಮೂಹ ತಮ್ಮ ಹೆಚ್ಚಿನ ದಿನಗಳನ್ನು ಮನೆಯಲ್ಲೇ ಕಳೆಯುವಂತೆ ಮಾಡಿ ಸಹಜ ಜೀವನಕ್ಕೆ ಪರಿತಪಿಸುವಂತೆ ಮಾಡಿತು.
ಆಧುನಿಕ ಮಾನವನಿಗೆ ತಾನು ಸಾಗುತ್ತಿದ್ದ ವೇಗದ ಬದುಕಿಗೆ ಕಡಿವಾಣ ಹಾಕಿ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಂಡು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿ ಎಂಬ ಪಾಠವನ್ನು ಕಲಿಸಿತು. ನಾನು, ನನ್ನದು ಎನ್ನುವವರಿಗೆ ಜೀವನ ಇಷ್ಟೇ ಎಂಬ ಸತ್ಯವನ್ನು ಅರ್ಥ ಮಾಡಿಸಿತು.

ಈಗ ನಾವು ಹೊಸ ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ. ಹೊಸ ವರ್ಷ ಬಂದಾಗ ಹೊಸ ನಿರೀಕ್ಷೆಗಳಿರುತ್ತದೆ. ಆದರೆ ಈ ಬಾರಿ ಪ್ರತಿ ಮನಸ್ಸು ಕೊರೋನಾ ಸಂಕಷ್ಟದಿಂದ ಹೊರಬಂದು ಸಹಜ ಸ್ಥಿತಿಗೆ ಜೀವನ ಮರಳಬಹುದು ಎಂಬ ನಿರೀಕ್ಷೆಯ ಆಶಾಕಿರಣವನ್ನು ಹೊತ್ತಿದೆ.

ಅದೃಷ್ಟ ಡ್ರಾದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ ಎಂಬ ಕರೆ ಬಂದಿದೆಯೇ?

2021 ರಲ್ಲಿ ಬದುಕನ್ನು ಸರಳವಾಗಿ ಮುನ್ನಡೆಸಲು ಸಂಕಲ್ಪ ನಮ್ಮದಾಗಬೇಕಾಗಿದೆ. ಇದು ನಮಗೆ ಕೊರೋನಾ ವೈರಸ್ ಕಲಿಸಿದ ಪಾಠ. ಬದುಕಿನ ನಶ್ವರತೆಯ ಅರಿವನ್ನು ನಮಗೆ ಈ ವೈರಸ್ ಮೂಡಿಸಿದೆ. ಹಾಗಾಗಿ ಅತಿಯಾದ ನಿರೀಕ್ಷೆಗಳ ಬೆನ್ನು ಹತ್ತದೆ, ವಾಸ್ತವತೆಯನ್ನು ಅರಿತುಕೊಂಡು ಬದುಕನ್ನು ಸವಾಲಾಗಿ ಎದುರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.

ಹಾಗೆಯೇ ಹಸಿರೇ ಉಸಿರು..ಪ್ರಕೃತಿ ಇದ್ದರೆ ನಾವೆಲ್ಲಾ.. ಪ್ರಕೃತಿ ಮಾತೆ ಮುನಿಸಿಕೊಂಡರೆ ಅದು ವಿನಾಶದ ಸೂಚನೆ. ಈಗಾಗಲೇ ಆಕೆ ತನ್ನ ಕೋಪವನ್ನು ತೋರ್ಪಡಿಸಿದ್ದಾಳೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಪರಿಸರವನ್ನು ರಕ್ಷಿಸೋಣ.. ‌ಗಿಡಮರ ಬೆಳೆಸೋಣ..‌ ಮನುಕುಲವನ್ನು ಉಳಿಸೋಣ.
New year 2021

ಪ್ರತಿವರ್ಷವೂ ಬರುವಾಗ ಹತ್ತಾರು ರೀತಿಯ ಹೊಸತ್ತನ್ನು ಹೊತ್ತು ಬಂದರೂ, ಅದು ಎಲ್ಲಾ ವರ್ಷಗಳು‌ ಹಳತಾಗುವುದು ಒಂದೇ ರೀತಿ.
ಆದರೂ ಬರಲಿರುವ ಹೊಸವರ್ಷದಲ್ಲಿ ಹೊಸತಿರಲಿ, ಅದರಲ್ಲಿ ಒಳಿತಿರಲಿ ಎಂದು ಆಶಿಸುವುದೇ ಒಂದು ಸಂಭ್ರಮ..
ಹಳೆಯದಕ್ಕೆ ವಿದಾಯ ಹೇಳಿ, ಹೊಸದನ್ನು ಪೂರ್ಣ ಭರವಸೆಯೊಂದಿಗೆ ಸ್ವೀಕರಿಸೋಣ.. ಕನಸು, ಮಹತ್ವಾಕಾಂಕ್ಷೆ ಹಾಗೂ ಸಂತೋಷ ತುಂಬಿದ ಹೊಸ ವರ್ಷ ನಮ್ಮ ನಿಮ್ಮೆಲ್ಲರದಾಗಿರಲಿ
ಸಾಕ್ಷಾಟಿವಿ ಓದುಗರಿಗೆಲ್ಲಾ 2021 ಹೊಸ ವರ್ಷದ ಶುಭಾಶಯಗಳು

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1344696988034498560?s=19

https://twitter.com/SaakshaTv/status/1344697354536927232?s=19

Tags: new yearNew year 2021ಹೊಸ ವರ್ಷ
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram