ಬೆಂಗಳೂರಿನಲ್ಲಿ ಮತ್ತೊಂದು ದೋಖಾ ಕಂಪನಿ : 100 ಕೋಟಿ ಗುಳುಂ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದೋಖಾ ಕಂಪನಿಯ ಬಣ್ಣ ಬಯಲಾಗಿದೆ.
ಹೆಚ್ಚು ಬಡ್ಡಿ ನೀಡುವುದಾಗಿ ಆಸೆ ತೋರಿಸಿ, ನಂಬಿ ಹಣ ಹೂಡಿಕೆ ಮಾಡಿದವರಿಗೆ ಕಂಪನಿ ನಾಮ ಹಾಕಿದೆ.
ಲಕ್ಷ ಲಕ್ಷ ಹಣ ಕಟ್ಟಿದವರು ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಗರದಲ್ಲಿ ಈ ಹಿಂದೆ ಐಎಂಎ, ಅಜ್ಮಿತಾ ಹಾಗೂ ಆಂಬಿಡೆಂಟ್ ದೋಖಾ ಕಂಪನಿಗಳು ಜನರಿಗೆ ಮೋಸಾ ಮಾಡಿದ್ದವು.
ಇದೀಗ ಆ ಸಾಲಿಗೆ ವಿಶ್ವಪ್ರಿಯ ಫೈನಾನ್ಸ್ ಕಂಪನಿ ಸೇರಿಕೊಂಡಿದೆ. ತಮಿಳುನಾಡು ಮೂಲದ ಸುಬ್ರಮಣ್ಯಂ ರಾಮಸ್ವಮಿ ಎಂಬೋರ ಒಡೆತನದ ವಿಶ್ವಪ್ರಿಯ ಫೈನಾನ್ಸಿಯಲ್ ಆಂಡ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಸದ್ಯ ಜನರಿಗೆ ನಾಮ ಹಾಕಿರುವ ಕಂಪನಿಯಾಗಿದೆ. ಈ ಕಂಪನಿ ತಮಿಳುನಾಡು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.
ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ನಿಯಂತ್ರಕ ತಜ್ಞರ ಸಮಿತಿ ಅನುಮೋದನೆ
2012ರಲ್ಲಿ ಬೆಂಗಳೂರಿನಲ್ಲಿ ತನ್ನ ಬ್ರ್ಯಾಂಚ್ ಓಪನ್ ಮಾಡಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ನಿವೃತ್ತ ನೌಕರರನ್ನು ಹಾಗೂ ವೃದ್ಧ ಮಹಿಳೆಯರನ್ನ ಗುರಿಯಾಗಿಸಿಕೊಂಡು ಶೇ 10.47 ರಷ್ಟು ಬಡ್ಡಿ ಕೊಡುವ ಆಸೆ ತೋರಿಸಿ, ಲಕ್ಷ ಲಕ್ಷ ಇನ್ವೆಸ್ಟ್ ಮಾಡಿಸಿಕೊಂಡಿತ್ತು. ಇದನ್ನ ನಂಬಿ ಹಣ ಹೂಡಿಕೆ ಮಾಡಿದವರಿಗೆ ಸದ್ಯ ಕಂಪನಿ ಮೋಸ ಮಾಡಿದ್ದು, ಜನರು ಕೋರ್ಟ್ ಮೂಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









