ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್ ಗಳು : ವಿಶ್ವನಾಥ್
ಬೆಂಗಳೂರು : ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್ ಗಳು ಎಂದು ಹೆಚ್. ವಿಶ್ವನಾಥ್ ಟೀಕಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಕರ್ನಾಟಕದ ಬಫೂನ್ ಗಳು.
ಅವರು ಯಾಕೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ ಗೊತ್ತಿಲ್ಲ. ಜನ ಅವರನ್ನ ಬಫೂನ್ ಗಳ ಹಾಗೆ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮತ್ತೆ ಸಿಎಂ : ಹುಲಿಯಾ ಪರ ಆರ್.ಶಂಕರ್ ಬ್ಯಾಟ್
ನಾನು ಮಾಜಿ ಸಿಎಂ ಸಿದ್ದರಾಮಯ್ಯಗೆ ಪಾಠ ಮಾಡಲು ರೆಡಿ ಇದ್ದೀನಿ. ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ..? ದೇವೇಗೌಡರು ಜೆಡಿಎಸ್ ನಿಂದ ಹೊರ ಹಾಕಿದ್ದರು.
ನಂತರ ಕಾಂಗ್ರೆಸ್ ಗೆ ಬಂದರು. ಆಗ ನಾವು ಅವರನ್ನು ಸಿಎಂ ಮಾಡಿದ್ವಿ. ಅವರು ಅಹಿಂದ ಕಟ್ಟಿದ್ರಾ..? ಎಂದು ಪ್ರಶ್ನಿಸಿದರು.
ಅಹಿಂದ ಸಂಘಟನೆಯನ್ನ ಮುಕುಡಪ್ಪ, ರೇವಣ್ಣ ಸಂಘಟನೆ ಮಾಡಿದ್ರು. ಸಿದ್ದರಾಮಯ್ಯ ಬಂದು ಬರಿ ಭಾಷಣ ಮಾಡಿದ್ರು ಅಷ್ಟೆ.
ನೀವು ಮುಖ್ಯಮಂತ್ರಿಯಾದ ಮೇಲೆ ಅಹಿಂದ ಏನಾಯ್ತು..? ಸಿದ್ದರಾಮಯ್ಯನವರೇ ಸಿಎಂ ಆದ ಮೇಲೆ ಅಹಿಂದವನ್ನ ಮರೆತರು.
ನಾವೆಲ್ಲ ಕಾಂಗ್ರೆಸ್ ನಲ್ಲಿದ್ದರೂ ಸಹ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಬೆಂಬಲ ಕೊಟ್ಟಿದ್ದೇವು.
ನಾವೆಲ್ಲ ಬೆಂಬಲ ಕೊಟ್ಟಿದ್ದರಿಂದ ಅಂದು ಅಹಿಂದ ಸಂಘಟನೆ ಯಶಸಿಯಾಯ್ತು ಅಂತ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









