ಡಾನ್ಸ್ ಮಾಡಲು ಬಿಡುತ್ತಿರಲಿಲ್ವಂತೆ ಪಾಲಕರು : ಅಷ್ಟಕ್ಕೆ ಆಕೆ ಏನ್ ಮಾಡಿದ್ದಾಳೆ ನೋಡಿ..!
ಈಗಿನ ವಿದ್ಯಾರ್ಥಿಗಳು ಅದ್ರಲ್ಲೂ 15- 18 ವಯಸ್ಸಿನಲ್ಲಿರುವವರು ತಾವು ಏನ್ ಮಾಡ್ತಾಯಿದ್ದೀವಿ ಅನ್ನೋ ಪರಿಜ್ಞಾನವಿಲ್ಲದೇ ದುಡುಕಿ ತಪ್ಪು ನಿರ್ಧಾರಗಳನ್ನ ತೆಗೆದುಕೊಳ್ತಾಯಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಆತ್ಮಹತ್ಯೆ ಇಲ್ಲ ಮನೆಯಿಂದ ಓಡಿಹೋಗುವಂತಹ ಕೆಟ್ಟ ಆಲೋಚನೆಗಳನ್ನೇ ಮಾಡುತ್ತಿದ್ದಾರೆ. ಸದ್ಯ ಇಂತಹದೇ ಒಂದು ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಧೌಲ್ಪುರ್ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾಳೆ. ಹೌದು ಪಾಲಕರು ಡಾನ್ಸ್ ಕಲಿಯಲು ಬಿಟ್ಟಿಲ್ಲ ಎಂಬ ಚಿಕ್ಕ ಕಾರಣಕ್ಕೆ ಆಕೆ ಮನೆ ಬಿಟ್ಟು ಹೋಗಿರೋದು ನಿಜಕ್ಕೂ ಶಾಕಿಂಗ್ ವಿಚಾರ.. ಮನೆಯಲ್ಲಿ ಆಕೆ ಡಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದಳು ಎನ್ನಲಾಗಿದೆ. ಆದ್ರೆ ಪಾಲಕರಿಗೆ ಇದು ಇಷ್ಟವಿರಲಿಲ್ಲ. ಮಗಳು ಡ್ಯಾನ್ಸ್ ಕಲಿಯುತ್ತಿದ್ದರೆ ಬಯ್ಯುತ್ತಿದ್ದರರು ಎನ್ನಲಾಗಿದೆ. ಇದ್ರಿಂದ ಮನನೊಂದ ವಿದ್ಯಾರ್ಥಿನಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ.
ಸ್ವಯಂ ಕ್ಷಮಾದಾನ ಘೋಷಣೆಗೆ ಮುಂದಾದ ಟ್ರಂಪ್
ಮಾವನ ಮನೆಗೆ ಹೋಗಿದ್ದ ವಿದ್ಯಾರ್ಥಿನಿ ಡಾನ್ಸ್ ಅಕಾಡಮಿಯಲ್ಲಿ ಅಡ್ಮಿಷನ್ ಮಾಡುವಂತೆ ಕೇಳಿದ್ದಾಳೆ. ಇತ್ತ ಪಾಲಕರು ಮಗಳನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿನಿ ಸತ್ಯ ಒಪ್ಪಿಕೊಂಡಿದ್ದಾಳೆ. ಪಾಲಕರು ಅಭ್ಯಾಸ ಮಾಡುವಂತೆ ಒತ್ತಡ ಹೇರುತ್ತಿದ್ದು, ಅನವಶ್ಯಕ ಹೊಡೆಯುತ್ತಾರೆ. ನನಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಲ್ಲ. ಡಾನ್ಸ್ ಕಲಿಯಬೇಕೆಂದು ಹೇಳಿದ್ದಾಳೆ. ಆಕೆಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಡಾನ್ಸ್ ಕಲಿಸುವ ಭರವಸೆ ನೀಡಿ ಮನವೊಲಿಸಿ ಮನೆಗೆ ವಾಪಸ್ ಕಳುಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








