ಬೆಂಗಳೂರು: ಕೊರೊನಾ ನಡುವೆಯೂ ರಾಜ್ಯದಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ ಜ್ಯೋತಿ ದರ್ಶನವಾಯಿತು. ಆದರೆ, ರಾಜಧಾನಿ ಬೆಂಗಳೂರು ನಗರದ ಗವಿಗಂಗಾಧರೇಶ್ವರಿಗೆ ಸೂರ್ಯ ರಶ್ನಿಯ ಸ್ಪರ್ಷವಾಗಲೇ ಇಲ್ಲ.

ಸುಮಾರು 53 ವರ್ಷಗಳ ಬಳಿಕ ಗವಿಗಂಗಾಧರನಿಗೆ ಗುರುವಾರ ಸೂರ್ಯರಶ್ಮಿಯ ಸ್ನಾನವಾಗಲೇ ಇಲ್ಲ. ಗವಿಗಂಗಾಧರನಿಗೆ ಗುರುವಾರ ಸಂಜೆ 5.25ರಿಂದ 5.27ರ ನಡುವೆ ಸೂರ್ಯರಶ್ಮಿ ಸ್ಪರ್ಷವಾಗಬೇಕಿತ್ತು. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ ಸೂರ್ಯ ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಬೇಕಿತ್ತು. ಆದರೆ, ಮೋಡ ಅಡ್ಡ ಬಂದ ಕಾರಣ ಅಗೋಚರವಾಗಿಯೇ ಗಂಗಾಧರನನ್ನು ಸ್ಪರ್ಶ ಮಾಡದೇ ಭಾಸ್ಕರನು ಮುಂದೆ ಹೋಗಿದ್ದಾನೆ. ಪ್ರಕೃತಿಯ ವಿಸ್ಮಯ ಕಣ್ತುಂಬಿಕೊಳ್ಳಲಾಗದೇ ಭಕ್ತರು ನಿರಾಸೆಯಲ್ಲೇ ಸ್ವಾಮಿಯ ದರ್ಶನ ಮಾಡಿದ್ದಾರೆ.
ಅಪಾಯದ ಮುನ್ಸೂಚನೆಯಾ..!
ಮಕರ ಸಂಕ್ರಮಣದ ದಿನ ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಷ ಆಗದೇ ಇರುವುದು 2021ಕ್ಕೂ ಅಪಾಯದ ಮುನ್ಸೂಚನೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

ಜಗತ್ತು ಕೊರೊನಾ ಹೊಡೆತದಿಂದ ಈಗೀಗ ಚೇತರಿಸಿಕೊಳ್ಳುತ್ತಿದೆ. ಈ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದೆ. ಸಾವಿನ ಮಹಾಯಜ್ಞ ನಡೆಯಲೂಬಹುದು. ಇದಕ್ಕೆ ಪರಿಹಾರ ರುದ್ರಪ್ರಯಾಗ ಹೋಮ ಎಂದು ತಿಳಿಸಿದ್ದಾರೆ.

ಕಳೆದ 53 ವರ್ಷದ ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ. ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೂರ್ಯದೇವ ಅಗೋಚರ ಪೂಜೆ ಸಲ್ಲಿಸಿರುವುದು ಸೃಷ್ಟಿಗೆ ಕಾರಣವಾಗಿದೆ. ಪ್ರಕೃತಿಯಲ್ಲಾದ ಸಣ್ಣ ಬದಲಾವಣೆ ಸೂರ್ಯನ ಕಿರಣ ಈಶ್ವರನ ಮೇಲೆ ಬೀಳದಂತೆ ಮಾಡಿದೆ. ಹೀಗಾಗಿ ಈ ಘಟನೆಯಿಂದ ಈ ವರ್ಷವೂ ಮತ್ತಿನ್ನೇನಾದರೂ ಅನಾಹುತಗಳು ಆಗಿ ಬಿಡುತ್ತಾ ಎಂಬ ಭಯ ಎಲ್ಲರನ್ನು ಕಾಡತೊಡಗಿದೆ ಎಂದಿದ್ದಾರೆ.
ರುದ್ರಪ್ರಯಾಗ ಹೋಮವೇ ಪರಿಹಾರ
ಗರ್ಭಗುಡಿಯ ಹೊಸ್ತಿಲವರೆಗೂ ಸೂರ್ಯ ಪ್ರವೇಶವಾಗಿದೆ. ಆದರೆ ಭಾಸ್ಕರ ಸ್ಪರ್ಶ ಗೋಚರವಾಗಿಲ್ಲ, ಅಗೋಚರವಾಗಿ ಆಗಿದೆ. ಮುಂದಿನ ದಿನಗಳು ಕೊಂಚ ಸಂಕಷ್ಟಮಯ ಆಗಬಹುದು. ಯುದ್ಧ ನಡೆಯುವ ಸಾಧ್ಯತೆ ಇದೆ. ಸಾವಿನ ಮಹಾಯಜ್ಞ ನಡೆಯಲೂಬಹುದು. ಇದಕ್ಕೆ ಪರಿಹಾರ ರುದ್ರಪ್ರಯಾಗ ಹೋಮ ಎಂದು ಸೋಮಸುಂದರ ದೀಕ್ಷಿತ್ ಆತಂಕ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








