ಜ. 21 ಕ್ಕೆ ಕಿಚ್ಚನ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್..! ಏನಿರಬಹುದು
ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೇ ಸೌತ್ ಇಂಡಸ್ಟ್ರಿಯಲ್ಲೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿರುವ ಬಹುನಿರೀಕ್ಷೆಯ ಸಿನಿಮಾ ಕಿಚ್ಚ ಸುದೀಪ್ ಅಭಿನಯದ ಚಿತ್ರ ಪ್ಯಾಂಟಮ್. ಈ ಸಿನಿಮಾ ಆಗಾಗ ದೊಡ್ಡ ದೊಡ್ಡ ವಿಚಾರಗಳಿಗೆ ಸುದ್ದಿಯಲ್ಲೇ ಇರುತ್ತೆ. ಇದೀ ಸಿನಿಮಾ ತಂಡ ಕಿಚ್ಚನ ಫ್ಯಾನ್ಸ್ ಭರ್ಜರಿ ಗುಡ್ ನ್ಯೂಸ್ ನೀಡಲು ಹೊರಟಿದೆ. ಇದೇ ಜನವರಿ 21ಕ್ಕೆ ಚಿತ್ರತಂಡದಿಂದ ದೊಡ್ಡ ಘೋಷಣೆಯೊಂದು ಹೊರಬೀಳಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರೇ ಖುದ್ದು ತಮ್ಮ ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿದ್ಧಾರೆ.
ನೈಸರ್ಗಿಕ ರೀತಿಯಲ್ಲಿ ಚರ್ಮದ ಆರೈಕೆಗೆ ನೈಸರ್ಗಿಕ ಪದಾರ್ಥಗಳಿವು..!
ಹೌದು ಹೆಗಲ ಮೇಲೆ ಗನ್ ಹಿಡಿದು , ಬೆರಳಲ್ಲಿ ಟಿಗರ್ ಹಿಡಿದು ಮಾಸ್ಕ್ ಹಾಕಿಕೊಂಡಿರುವ ರೋಣನ ( ಸುದೀಪ್) ಲುಕ್ ಔಟ್ ಆಗಿದೆ. ಹೌದು ಸುದೀಪ್ ನ ಹೊಸ ಲುಕ್ ಅನ್ನ ರಿಲೀಸ್ ಮಾಡಿರೋ ಚಿತ್ರ ತಂಡ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಕಾದಿದೆ ಅಂತ ಘೋಷಣೆ ಮಾಡಿದೆ. ಇನ್ನೂ ಅಭಿಮಾನಿಗಳ ಕುತೂಹಲ ಹೆಚ್ಚಾಗಿರೋದು ಒಂದ್ ಕಡೆಯಾದ್ರೆ, ಕಿಚ್ಚನ ಲುಕ್ ಗೆ ಫಿದಾ ಆಗಿದ್ದಾರೆ. ಇತ್ತ ಆ ಸಸ್ಪೆನ್ಸ್ ಏನಿರಬಹುದು ಎಂಬ ನಾನಾ ಚರ್ಚೆಗಳು ಆರಂಭವಾಗಿದ್ದು, ಪ್ಯಾಂಟಮ್ ಟೀಸರ್ ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
https://twitter.com/KicchaSudeep/status/1351048406555369472/photo/1
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








