ರೈತನೆಂದರೆ ದೇಶ, ದೇಶಕ್ಕಾಗಿ ಧ್ವನಿಯೆತ್ತೋಣ : ಸಿದ್ದರಾಮಯ್ಯ ಕರೆ
ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಂತೆ ರಾಜ್ಯದಲ್ಲೂ ಅನ್ನದಾತರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದು, ಇವರಿಗೆ ಬೆಂಬಲ ವ್ಯಕ್ತಪಡಿಸಿ ನಾಳೆ ರಾಜ್ಯ ಕಾಂಗ್ರೆಸ್ ರಾಜಭವನ ಚಲೋ ಹಮ್ಮಿಕೊಂಡಿದೆ.
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ರೈತನೆಂದೆ ದೇಶ, ದೇಶಕ್ಕಾಗಿ ಧ್ವನಿಯೆತ್ತೋಣ ಎಂದು ಕರೆಕೊಟ್ಟಿದ್ದಾರೆ.
ಅಲ್ಲದೆ ತಮ್ಮ ಪೋಸ್ಟ್ ನಲ್ಲಿ ಹೊಸ ಕಾಯ್ದೆಯಲ್ಲಿ ಖಾಸಗಿ ಕಂಪೆನಿಗಳಿಗೆ ಲಗಾಮು ರಹಿತ ಓಟಕ್ಕೆ ಅವಕಾಶ ನೀಡಲಾಗಿದೆ. ಅವರು ಯಾವ ಮಾರುಕಟ್ಟೆ ಶುಲ್ಕವನ್ನು ಎಂ ಪಿಎಂಸಿ ಗಳಿಗೆ ಪಾವತಿಸಬೇಕಾಗಿಲ್ಲ. ಅವರ ವ್ಯಾಪಾರ ವಹಿವಾಟಿನ ಮೇಲೆ ಎಪಿಎಂಸಿ ಸರ್ಕಾರಕ್ಕೆ ನಿಯಂತ್ರಣವಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಬಿಜೆಪಿಯವರು ತನ್ನ ಕೆಲವೇ ಪರಮಾಪ್ತ ಬಂಡವಾಳಿಗರಿಗಾಗಿ ಇಡೀ ದೇಶವನ್ನು ನಾಶ ಮಾಡುತ್ತಿದ್ದಾರೆ. ದೆಹಲಿಯ ರೈತರ ಪ್ರತಿಭಟನೆಯಲ್ಲಿ 101 ರೈತರು ಸತ್ತರೂ ಕೇಂದ್ರ ಸರ್ಕಾರ ಅವರ ಕೂಗು ಕೇಳಿಸಿಕೊಳ್ಳದೆ ಕಿವುಡನಂತೆ ಕೂತಿರುವುದಕ್ಕೆ ಅರ್ಥವೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









