OLX ನಲ್ಲಿ ಮಾರಾಟದ ಜಾಹೀರಾತು ಹಾಕೋ ಮುನ್ನ ಎಚ್ಚರ….. ಇಂಥ ಖದೀಮರ ಕೈಗೆ ಸಿಕ್ರೆ ನಿಮ್ಮ ಕಥೆ ಗೋವಿಂದಾ….!
OLX ನಲ್ಲಿ ಮೊಬೈಲ್ ಮಾರಾಟ ಮಾಡಲು ಹೋದ ಯುವಕ ಸಂಕಷ್ಟಕ್ಕೆ ಸಿಲುಕಿದ ಘಟನೆ ಬೆಂಗಲೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಈತ ಮೊಬೈಲ್ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಆದ್ರೆ ಈತನನ್ನ ಕಳ್ಳರ ಗ್ಯಾಂಗ್ ಒಂದು ಐನಾತಿ ಪ್ಲಾನ್ ಮಾಡಿ ದರೋಡೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ಅಷ್ಟಕ್ಕೂ ಆಗಿದ್ದೇನು…
ಈತನ ಜಾಹೀರಾತನ್ನ ನೋಡಿದ್ದ ಖದೀಮರ ಗ್ಯಾಂಗ್ ಒಂದು ಈತನನ್ನ ವಂಣಚಿಸೋಕೆ ದರೋಡೆ ಮಾಡೋಕೆ ಮಾಸ್ಟರ್ ಪ್ಲಾನ್ ಒಂದನ್ನ ಮಾಡಿದ್ದಾರೆ. ಅದ್ರಂತೆ ಮೊಬೈಲ್ ಖರೀದಿ ಮಾಡೋ ನೆಪ ಹೇಳಿ ವ್ಯಕ್ತಿಯನ್ನು ಕರೆಸಿಕೊಂಡು ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತನಿಗೆ ಹೊಡೆದು ಬೆದರಿಸಿ ಆತನ ಬಳಿಯಿದ್ದ 20 ಸಾವಿರ ರೂಪಾಯಿ ಹಣ ದೋಚಿ ಮೊಬೈಲ್ ಫೋನ್ ಸಹ ಕಿತ್ತುಕೊಂಡಿದ್ದಾರೆ.
ಪ್ರಕರಣ ಸಂಬAಧ ಸಂತ್ರಸ್ತನಿದ ದೂರು ದಾಖಲಿಸಿರುವ ಕಲಾಸಿಪಾಳ್ಯ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಹುಸೇನ್ ಷರೀಫ್, ಅಪ್ರೀದ್ಖಾನ್, ಅಡ್ನಾನ್ ಪಾಷ ಬಂಧಿತ ಆರೋಪಿಗಳು. ಆರೋಪಿಗಳಿಂದ 10 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಔಐಘಿನಲ್ಲಿ ಮೊಬೈಲ್ ಫೋನ್ ಮಾರಾಟ ಮಾಡುವು ದಾಗಿ ವ್ಯಕ್ತಿಯೊಬ್ಬರು ಜಾಹೀರಾತು ಹಾಕಿದ್ದರು. ಜಾಹೀರಾತು ಹಾಕಿದ್ದ ವ್ಯಕ್ತಿಯನ್ನು ಇಬ್ಬರು ವ್ಯಕ್ತಿಗಳು ಸಂರ‍್ಕಿಸಿ ಮೊಬೈಲ್ ಕೊಳ್ಳುವುದಾಗಿ ಹೇಳಿ ಚಿಕ್ಕಪೇಟೆ ಮೆಟ್ರೊ ಸ್ಟೇಷನ್ ಬಳಿ ಕರೆಸಿಕೊಂಡಿದ್ದಾರೆ.
ಹಲವು ಕಷ್ಟಗಳ ನಿವಾರಣೆಗೆ ಈ ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವಂತೆ..!
ಆ ವ್ಯಕ್ತಿಗಳಿಬ್ಬರು ಮೊಬೈಲ್ ಹಣವನ್ನು ಕೊಡುವುದಾಗಿ ಹೇಳಿ ಮಾರಾಟಗಾರನನ್ನು ಮನೆಗೆ ಕರೆದೊಯ್ದಿದ್ದಾರೆ. ನಂತರ ಮನೆಯಲ್ಲಿದ್ದ ನಾಲ್ಕು ಜನ ಸಹಚರರೊಂದಿಗೆ ಸೇರಿ ವ್ಯಕ್ತಿಗೆ ಹೊಡೆದು ಮಚ್ಚನ್ನು ತೋರಿಸಿ ಬೆದರಿಸಿ ಮೊಬೈಲ್ ಫೋನ್ ಹಾಗೂ 20 ಸಾವಿರ ರೂ. ದೋಚಿದ್ದಾರೆ. ನಂತರ ಮೊಬೈಲ್ ಮಾರಾಟ ಮಾಡಲು ಬಂದಿದ್ದ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದು ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದರು.
ಕಲಾಸಿಪಾಳ್ಯ ಠಾಣೆ ಪೊಲೀಸರು ಡಕಾಯಿತಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು. ಕಲಾಸಿಪಾಳ್ಯ ಠಾಣೆಯ ಇನ್ಸ್ಪೆಸಕ್ಟರ್ ಚಂದ್ರಕಾಂತ್ ಎಲ್.ಟಿ. ಹಾಗೂ ಸಿಬ್ಬಂದಿ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ 10ಸಾವಿರ ರೂ. ಹಣ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು ಉಳಿದ ಮೂವರು ಆರೋಪಿಗಳ ಪತ್ತೆಗೆ ಶೋಧ ಕರ‍್ಯ ಮುಂದುವರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








