ಟ್ರ್ಯಾಕ್ಟರ್ ರ್ಯಾಲಿ ಗಲಭೆ : ಇಂದು ದೆಹಲಿ, ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ..!
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ 64 ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಗಣರಾಜ್ಯೋತ್ಸವ ದಿನ ಟ್ರ್ಯಾಕ್ಟರ್ ರ್ಯಾಲಿ ವೇಳೆ ಈ ಪ್ರತಿಭಟನೆ ಉಗ್ರ ಸ್ವರೂಪವನ್ನೇ ಪಡೆದುಕೊಂಡಿತ್ತು. ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ರ್ಯಾಲಿ ರಣರಂಗವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತೆ ಅಹಿತಕರ ಘಟನೆಗಳು ಪುನರಾವರ್ತಿಸದಂತೆ ತಡೆಯಲು ದೆಹಲಿ-ಹರ್ಯಾಣ ಗಡಿಭಾಗದ ಸಿಂಘು ಗಡಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
‘ಗಾರ್ಬೇಜ್ ಸಿಟಿ’ ‘ಗಾರ್ಡನ್ ಸಿಟಿ’ ಮಾಡಲು ಹೊರಟಿರುವ LBTC..! ಯುವಕರಿಗೆ ಸ್ಪೂರ್ತಿ..!
ಇಲ್ಲಿಯೇ ಕಳೆದ ಎರಡು ತಿಂಗಳಿನಿಂದ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ನಿನ್ನೆ ಘರ್ಷಣೆ ತೀವ್ರಗೊಂಡ ಹಿನ್ನೆಲೆ ಇಂದು ಕೆಂಪು ಕೋಟೆಯ ಸುತ್ತಮುತ್ತ ಸಕಲ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇನ್ನೂ ನಿನ್ನೆಯ ಹಿಂಸಾಚಾರದಲ್ಲಿ ಒಟ್ಟು 300 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದುವರೆಗೆ 22 ಮಂದಿ ವಿರುದ್ಧ ಈ ಸಂಬಂಧ FIR ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








