ತಾಯಿ ಶವವನ್ನು 10 ವರ್ಷ ಫ್ರೀಜರ್ನಲ್ಲಿಟ್ಟ ಮಹಿಳೆ …!
ಜಪಾನ್: ಸಾಮಾನ್ಯವಾಗಿ ಯಾರಾದ್ರು ಮೃತಪಟ್ಟರೆ ಅಬ್ಬಬ್ಬಾ ಅಂದ್ರೆ 3 ದಿನಗಳ ಕಾಲ ಮೃತದೇಹವನ್ನ ಅಂತ್ಯ ಸಂಸ್ಕಾರ ಮಾಡದೇ ಹಾಗೆ ಇರಿಸಿರಬಹುದು. ಅದನ್ನ ಮೀರಿ ಮೃತದೇಹದ ದಹನ ಅಥವ ಮಣ್ಣು ಮಾಡಲೇಬೇಕಾಗುತ್ತೆ. ಆದ್ರೆ ವರ್ಷಾನುಗಟ್ಟಲೇ ಯಾರಾದ್ರು ಮೃತದೇಹವನ್ನ ಸಂಸ್ಕಾರ ಮಾದೇ ಹಾಗೇ ಬಿಡ್ತಾರಾ. ಮೃತಪಟ್ಟವರು ಎಷ್ಟೇ ಆಪ್ತರಿದ್ದರೂ ಅವರ ಅಂತ್ಯ ಸಂಸ್ಕಾರ ಮಾಡಲೇಬೇಕಾಗುತ್ತೆ. ಆಗಲೇ ಅವರ ಆತ್ಮಕ್ಕೆ ಸಾಂತಿ ಸಿಗುತ್ತೆ ಅಂತ ಹೇಳಲಾಗುತ್ತೆ. ಆದ್ರೆ ಜಪಾನ್ ನಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಆಗಾತ ಮೂಡಿಸಿದೆ.
ಮಗುವಿಗೆ ಹಾಲು ಖರೀದಿಸಲು ಹಣ ಕೇಳಿದ್ದಕ್ಕೆ ಪತ್ನಿಗೆ ಫೋನ್ ನಲ್ಲೇ ತಲಾಖ್ ಕೊಟ್ಟ ನೀಚ..!
ಹೌದು ಮಹಿಳೆಯೊಬ್ಬಳು ತನ್ನ ತಾಯಿಯ ಶವವನ್ನು ಸುಮಾರು ಹತ್ತು ವರ್ಷಗಳ ಕಾಲ ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದ ಭಯಾನಕ ಸಂಗತಿ ತಿಳಿದುಬಂದಿದೆ. ಈಗಾಗಲೇ ಆಕೆ ಮಾಡಿದ ಕೃತ್ಯಕ್ಕೆ ಪೊಲೀಸರು ಆಕೆಯನ್ನ ಅರೆಸ್ಟ್ ಮಾಡಲಾಗಿದೆ. ಆದ್ರೆ ಆಕೆ ಈ ರೀತಿ ಮಾಡಿದ್ದಾದ್ರೂ ಯಾಕೆ ಅನ್ನೋದನ್ನ ಕೇಳುದ್ರೆ ಶಾಕ್ ಆಗುತ್ತೆ. ಹೌದು ಟೋಕಿಯೋದ ಯೂಮಿ ಯೋಶಿನೋ ಎಂಬ 48 ವರ್ಷದ ಮಹಿಳೆಯು ತನ್ನ ತಾಯಿಯ ಮೃತದೇಹವನ್ನ ಪ್ರೀಜರ್ ನಲ್ಲಿ ಅಡಗಿಸಿಟ್ಟಿದ್ದಳು. ಒಂದಲ್ಲ ಎರೆಡಲ್ಲ ಬರೋಬ್ಬರಿ 10 ವರ್ಷಗಳ ಕಾಲ ಮೃತದೇಹವನ್ನ ಫ್ರೀಜರ್ ನಲ್ಲಿ ಇಟ್ಟಿದ್ದಳು.
ಹುಲಿ ಹಾಗೂ ಮರಿಯ ಪ್ರೀತಿಗೆ ನೀವೇನಂತೀರಾ… ವಿಡಿಯೋ ನೋಡಿ..!
ಟೋಕಿಯೋದ ಮುನಿಸಿಪಾಲ್ ಹೌಸಿಂಗ್ ಕಾಂಪ್ಲೆಕ್ಸ್ ನ ಅಪಾರ್ಟ್ ಮೆಂಟ್ ನಲ್ಲಿ ತಾಯಿ, ಮಗಳು ವಾಸವಿದ್ದರು. ಇದೇ ಜನವರಿ ತಿಂಗಳಲ್ಲಿ ಬಾಡಿಗೆ ಕಟ್ಟುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಅಪಾರ್ಟ್ ಮೆಂಟ್ ನಿಂದ ಒತ್ತಾಯವಾಗಿ ಕಳುಹಿಸಲಾಗಿತ್ತು. ಆನಂತರ ಮನೆ ಕ್ಲೀನ್ ಮಾಡಲು ಬಂದ ವ್ಯಕ್ತಿಗೆ ಬಚ್ಚಲ ಮನೆಯಲ್ಲಿಟ್ಟಿದ್ದ ಫ್ರೀಜರ್ ನಲ್ಲಿ ಶವ ಕಂಡುಬಂದಿತ್ತು. ಪೊಲೀಸರು ತನಿಖೆ ಕೈಗೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ಬಳಿಕ ಆಕೆಯನ್ನ ವಿಚಾರಣೆ ನಡೆಸಿದಾಗ , ಆಕೆ ಕಾರಣ ಕೊಟ್ಟಿದ್ದಾಳೆ. ತನ್ನ ತಾಯಿ ಸತ್ತ ಸಂಗತಿ ಬೇರೆಯವರಿಗೆ ತಿಳಿದರೆ ತಾನು ಸಹ ಆ ಮನೆಯಿಂದ ಹೊರ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಮನೆಯಲ್ಲಿಯೇ ತಾಯಿಯ ಶವವನ್ನು ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದಾಗಿ ಮಹಿಳೆ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ.
ಟಾಲಿವುಡ್ ನಲ್ಲಿ ರಾಬರ್ಟ್ ಸಿನಿಮಾಗೆ ಅಡ್ಡಿ : ಸುದೀಪ್ ಹೇಳಿದ್ದೇನು..?
ಅಲ್ಲದೇ ತನ್ನ ತಾಯಿಯೊಂದಿಗೆ ನೆನಪು ಹಂಚಿಕೊಂಡ ಈ ಮನೆಯಿಂದ ಹೊರ ಹೋಗಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ತಾಯಿ ಸತ್ತ ನಂತರವೂ ಆಕೆಯ ಶವವನ್ನು 10 ವರ್ಷಗಳಿಂದ ನಾನೇ ಫ್ರೀಜರ್ ನಲ್ಲಿಟ್ಟು ಕಾಪಾಡಿಕೊಂಡೆ. ಅವರು ಸಾಯುವಾಗ ಸುಮಾರು 60 ವರ್ಷ ವಯಸ್ಸಾಗಿತ್ತು ಎಂದು ಮಹಿಳೆ ತಿಳಿಸಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel