ಟಾಲಿವುಡ್ ನಲ್ಲಿ ರಾಬರ್ಟ್ ಸಿನಿಮಾಗೆ ಅಡ್ಡಿ : ಸುದೀಪ್ ಹೇಳಿದ್ದೇನು..?
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಗೆ ಟಾಲಿವುಡ್ ನಲ್ಲಿ ಅಡ್ಡಿ ವಿಚಾರ ಸದ್ಯ ಹಾಟ್ ಟಾಪಿಕ್ ಆಗಿದೆ.
ಟಾಲಿವುಡ್ ನ ಈ ನಡೆಯಿಂದ ದರ್ಶನ್ ಬೇಸರಗೊಂಡಿದ್ದು, ಫಿಲಂ ಛೇಂಬರ್ ಗೆ ದೂರು ಸಹ ಕೊಟ್ಟಿದ್ದಾರೆ.
ಇದೀಗ ಈ ಬಗ್ಗೆ ಅಭಿನಯ ಚಕ್ರವರ್ತಿ, ದರ್ಶನ್ ರ ಒಂದು ಕಾಲದ ಗೆಳೆಯ ಕಿಚ್ಚ ಸುದೀಪ್” ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿವಾಹಿನಿ ಜೊತೆ ಈ ಸಂಬಂಧ ಮಾತನಾಡಿರುವ ಕಿಚ್ಚ, ನಾನು ನನ್ನ ಸಿನಿಮಾವನ್ನು ಕಾಪಾಡಿಕೊಂಡಿದ್ದೇನೆ. ಇನ್ನೊಬ್ಬರ ಸಿನಿಮಾವನ್ನ ನಿಭಾಯಿಸುವಷ್ಟು ದೊಡ್ಡ ಕಲಾವಿದನಲ್ಲ.
ಸಲಹೆ ನೀಡುವಂತ ವ್ಯಕ್ತಿ ಕೂಡ ಅಲ್ಲ. ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ. ಹಾಗಾಗಿ ನಾವು ಆ ಸಿನಿಮಾದ ಬಗ್ಗೆ ಮಾತನಾಡುವುದು ತಪ್ಪಾಗಬಹುದು ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel