ಕೇಂದ್ರ ಬಜೆಟ್ 2021 | ಕರ್ನಾಟಕದ ಬೇಡಿಕೆಗಳು ಇದ್ದಿದ್ದೇನು..ಬಜೆಟ್ ನಲ್ಲಿ ಸಿಕ್ಕಿದ್ದೇನು’..?
ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದೆ, ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದಿಂದಲೇ ಆಯ್ಕೆ ಮಾಡಿ ಕಳುಹಿಸಿಕೊಡಲಾಗಿದೆ. ಇದಲ್ಲದೆ ಕೊರೊನಾ, ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಈಬಾರಿಯ ಕೇಂದ್ರದ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಬೂಸ್ಟ್ ನೀಡುವಂತಹ ಯೋಜನೆಗಳನ್ನ ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಒಂದಿಷ್ಟು ಬೇಡಿಕೆಗಳನ್ನು ಸಹ ಕೇಂದ್ರ ಮುಂದೆ ಇಡಲಾಗಿತ್ತು. ಆದ್ರೆ ಇಂದು ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅಂತ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ.
ಇಂದಿನ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು, ಈ ಬಾರಿಯ ಬಜೆಟ್‍ನಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 2ಎ ಮತ್ತು 2ಬಿ ವಿಸ್ತರಣೆಗೆ 58.19 ಕಿ.ಮೀ ಗೆ ರೂ. 14,788 ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿದೆ.
ಇದಲ್ಲದೆ ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಘೋಷಣೆ ಮಾಡಲಾಗಿದೆ. 278 ಕಿ. ಮೀ. ಮಾರ್ಗದ ಯೋಜನೆ ಹಿಂದೆಯೇ ಘೋಷಣೆಯಾಗಿತ್ತು. ಈ ವರ್ಷ ಕಾಮಗಾರಿ ಆರಂಭವಾಗಲಿದೆ. ವಿಚಿತ್ರವೆಂದರೇ ಈ ಎರಡು ಯೋಜನೆಗಳನ್ನು ಬಿಟ್ಟರೇ ಬೇರೆ ಯಾವ ಹೇಳಿಕೊಳ್ಳುವಂತ ಯೋಜನೆ ಕರ್ನಾಟಕಕ್ಕೆ ಸಿಕ್ಕಿಲ್ಲ.
ಅಂದಹಾಗೆ ಕರ್ನಾಟಕಕ್ಕೆ ಈ ಹಿಂದೆ ಘೋಷಣೆಯಾಗಿರುವ ಹಲವು ರೈಲು ಯೋಜನೆಗಳು ಆಮೆಗತಿಯಲ್ಲಿ ಸಾಗಿವೆ. ಈ ಯೋಜನೆಗಳಿಗೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಯಾವುದೇ ಹೊಸ ರೈಲು ಯೋಜನೆ ಘೋಷಣೆ ಮಾಡಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ.

ಕರ್ನಾಟಕದ ಬೇಡಿಕೆಗಳೇನು..?
ಪ್ರಸಕ್ತ ವರ್ಷ ರಾಜ್ಯದ ಹಂಚಿಕೆಯನ್ನು ಪರಿಷ್ಕರಿಸದೇ ಕೇಂದ್ರ ಹಣಕಾಸು ಪ್ರಾಯೋಜಿತ ಯೋಜನೆಗಳಿಗೆ ಅನುದಾನವನ್ನು ಗಣನೀಯವಾಗಿ ಹೆಚ್ಚಿಸುವಂತೆ ಮನವಿ
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಘೋಷಿಸಿರುವ 5,495 ಕೋಟಿ ರೂ. ವಿಶೇಷ ಅನುದಾನ ಸೇರಿದಂತೆ ಎಲ್ಲಾ ಬಾಕಿಗಳನ್ನು ತೆರವುಗೊಳಿಸಲು ಮನವಿ.
ಒರವಾಹ ಪರಿಹಾರ, ಜಿಎಸ್ ಟಿ ಪರಿಹಾರ ನೀಡಬೇಕೆಂದು ಆಗ್ರಹ
ಕೇಂದ್ರದ ಬಳಿ ಇರುವ ರಾಜ್ಯದ 885 ಕೋಟಿ ರೂ ಕನಿಷ್ಠ ಬೆಂಬಲ ಬೆಲೆ ಬಾಕಿ ಹಣ ಬಿಡುಗಡೆಗೊಳಿಸಬೇಕು.
ಕಡಲ ತೀರದ ಬಂದರು ಅಭಿವೃದ್ಧಿಯನ್ನ ಕೇಂದ್ರದ ಅನುದಾನದಲ್ಲೇ ಕೈಗೊಳ್ಳಬೇಕು
ಹೊಸ ಸಿಎಸ್ ಎಸ್ ಯೋಜನೆ ಪರಿಚಯಿಸುವಾಗ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಪರಿಗಣಿಸಬೇಕು.
ಘನತ್ಯಾಜ್ಯ ನಿರ್ವಹಣೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಸಂಬಂಸಿದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು.
ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಎತ್ತಿನಹೊಳೆಯಂತಹ ದೊಡ್ಡ ನೀರಾವರಿ ಯೋಜನೆಗೂ ಅನುದಾನ.
ರೈಲ್ವೆಗೆ ಸಂಬಂಧಿಸಿದಂತೆ ಹೆಚ್ಚಿನ ನೆರವು ನೀಡಬೇಕು
ಆದ್ರೆ ಇಂದು ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಕರ್ನಾಟಕಕ್ಕೆ ಹೇಳಿಕೊಳ್ಳುವ ರೀತಿಯಲ್ಲಿ ಯಾವುದೇ ಯೋಜನೆ ಘೋಷಿಸಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








