ಚಕ್ಕಾ ಜಾಮ್ | ರಸ್ತೆಗಿಳಿದ ರೈತರು, ರಾಜ್ಯದಲ್ಲಿ ಎಲ್ಲೆಲ್ಲಿ ರಸ್ತೆ ಬಂದ್
ಬೆಂಗಳೂರು : ಕೇಂದ್ರ ಸರ್ಕಾರೆದ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ರೈತರು ಚಕ್ಕಾ ಜಾಮ್ ಚಳುವಳಿ ಹಮ್ಮಿಕೊಂಡಿದ್ದು, ಅನ್ನದಾತರು ರಸ್ತೆಗೆ ಲಗ್ಗೆ ಇಟ್ಟಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತಿದೆ.
ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನ ಕೂಗುತ್ತಿದ್ದಾರೆ.
ರಾಜ್ಯದಲ್ಲಿ ಎಲ್ಲೆಲ್ಲಿ ರಸ್ತೆ ಬಂದ್
ರಾಷ್ಟ್ರೀಯ ಹೆದ್ದಾರಿಗಳ ತಡೆ ಹಿನ್ನೆಲೆ ಎಲ್ಲಾ ಕಡೆ ಸಂಚಾರ ದಟ್ಟಣೆ ಉಂಟಾಗಿದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ 2 ಕಡೆ ರಸ್ತೆ ಬಂದ್. ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಪುಣೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಮಾಗಡಿ ರೋಡ್, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುತ್ತಿದೆ.
ಶಿವಮೊಗ್ಗ-ಚಿತ್ರದುರ್ಗ, ವಿಜಯಪುರ-ಕಲಬುರಗಿ ಹೆದ್ದಾರಿಗಳು ಸಂಪೂರ್ಣವಾಗಿ ಬಂದ್ ಆಗಿವೆ.
ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 48, ರಂಗವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50, ಹೊಳಲ್ಕೆರೆಯ ಮುಖ್ಯ ವೃತ್ತ, ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 48, ನಾಯಕನಹಟ್ಟಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 150ಎ ಬಂದ್ ಮಾಡಲಾಗಿದೆ.
ರಾಯಚೂರು ನಗರದ ಹೊರ ವಲಯದ ಅಸ್ಕಿಹಾಳ ಬಳಿ ಹೆದ್ದಾರಿ, ಲಿಂಗಸಗೂರ, ಸಿಂಧನೂರ, ಮಾನ್ವಿ, ದೇವದುರ್ಗ ಹೆದ್ದಾರಿ ಬಂದ್ ಆಗಿವೆ.
ಗದಗ ಜಿಲ್ಲೆಯ ಟಿಪ್ಪು ಸುಲ್ತಾನ್ ಸರ್ಕಲ್, ಧಾರವಾಡದ ರಮ್ಯ ರೆಸಿಡಿನ್ಸಿ ರಸ್ತೆ, ಬಾಗಲಕೋಟೆ, ಹುಬ್ಬಳಿ-ಧಾರವಾಡ , ಬಳ್ಳಾರಿಯಲ್ಲಿ 3 ಕಡೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಇನ್ನು ಚಿಕ್ಕಬಳ್ಳಾಪುರ, ಮೈಸೂರು-ಊಟಿ ಹೆದ್ದಾರಿ, ಮಂಡ್ಯ, ಶ್ರೀರಂಗಪಟ್ಟಣ-ಹಾಸನ ರಸ್ತೆ, ಮಳವಳ್ಳಿ-ಕೆಎಂ ದೊಡ್ಡಿ ನಡುವಿನ ರಾಜ್ಯ ಹೆದ್ದಾರಿ, ನಾಗಮಂಗಲ ಬೆಳ್ಳೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ,
ಹುಣಸೂರು-ಪಿರಿಯಾಪಟ್ಟಣ ರಾಷ್ಟ್ರೀಯ ಹೆದ್ದಾರಿ, ರಾಮನಗರ ಸರ್ಕಲ್, ಗುಬ್ಬಿ ಗೇಟ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ, ತುಮಕೂರು, ಬೆಳಗಾವಿ ರಾಷ್ಟ್ರೀಯ ಹೆದ್ದಾರಿ, ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ,
ಹಾಸನ, ವಡಗೂರು ಹೆದ್ದಾರಿ ಮತ್ತು ನರಸಾಪುರ ಹೆದ್ದಾರಿ (ಟೊಮ್ಯಾಟೊ ಮಾರ್ಕೆಟ್) ಕೋಲಾರ, ಕೊಡಗು – ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಕಡೆ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










