ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಎಳೆ ಎಳೆಯಾಗಿ ವಿವರಿಸಿದ ಡಾ. ಮಂಜುನಾಥ್
ಬೆಂಗಳೂರು, ಫೆಬ್ರವರಿ07: ಜಯದೇವ ಮೆಡಿಕಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ.ಮಂಜುನಾಥ್ ಅವರು ಬೆಂಗಳೂರು ನಗರದ ಕೃಷಿ ವಿವಿ ಜಿಕೆವಿಕೆಯಲ್ಲಿ ಆಯೋಜಿಸಿದ್ದ 107 ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಜೀವನ ಪದ್ಧತಿ ಮತ್ತು ಕಾಯಿಲೆಗಳು ವಿಷಯವಾಗಿ ಉಪನ್ಯಾಸ ಮಂಡಿಸಿದರು.
ಡಾ.ಮಂಜುನಾಥ್ ತಮ್ಮ ಉಪನ್ಯಾಸದಲ್ಲಿ ಸಾಮಾಜಿಕ ವ್ಯವಸ್ಥೆ, ತಂತ್ರಜ್ಞಾನದ ಬದಲಾವಣೆ, ಹವಾಮಾನ ಇನ್ನಿತರ ವಿಷಯಗಳು ಹೇಗೆ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು.

ಮೂರು ದಶಕಗಳ ಹಿಂದೆ ನಲವತ್ತು ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರೆ, ಇಂದು ಪೋಷಕರು ತಮ್ಮ ಯುವಕ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಹುತೇಕ ಭಾರತೀಯರು ತಮ್ಮ ಜೀವನ ಶೈಲಿಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಒಂದು ಗಂಟೆ ಟಿವಿ ಮುಂದೆ ಕೂತಿರುವುದಕ್ಕೂ ಒಂದು ಸಿಗರೇಟು ಸೇದುವುದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ನಾಲ್ಕು ಗಂಟೆ ಕೂತಲ್ಲಿಯೇ ಕೂತರೆ ಜೀವನದ 20 ನಿಮಿಷದ ಆಯುಷ್ಯ ಕಡಿಮೆಯಾದಂತೆ ಎಂದು ಡಾ.ಮಂಜುನಾಥ್ ಹೇಳಿದರು.
ಮೊಬೈಲ್, ಟಿವಿ, ಕಂಪ್ಯೂಟರ್ ಗೀಳು ಮಾನವನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ ಎಂದು ಹೇಳಿದ ಡಾ.ಮಂಜುನಾಥ್, ಸ್ಕ್ರೀನ್ ಅಡಿಕ್ಷನ್ ಒಂದು ಖಾಯಿಲೆ ಎಂದು ಪಾಶ್ಚಿಮಾತ್ಯದ ಕೆಲವು ದೇಶಗಳು ಇತ್ತೀಚೆಗೆ ಘೋಷಿಸಿದೆ. ಆದರೆ ನಮ್ಮ ದೇಶದಲ್ಲಿ ಇದು ದೊಡ್ಡ ಸಂಖ್ಯೆಯಲ್ಲಿದ್ದು, ವೇಗವಾಗಿ ವ್ಯಾಪಿಸುತ್ತಿದೆ ಎಂದು ಹೇಳಿದರು.
ಮೊದಲು ಐವತ್ತು ದಾಟಿದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತ ಈಗ ಹದಿನಾರರ ಎಳೆಯ ಮಕ್ಕಳಿಗೆ ಬರುತ್ತಿದೆ. ಹಾರ್ಮೋನ್ ಗಳ ಕಾರಣದಿಂದ ಮಹಿಳೆಯರಿಗೆ ಮೊದಲು ಹೃದಯಾಘಾತ ಆಗುತ್ತಿರಲಿಲ್ಲ. ಆದರೆ ಈಗ ಮಹಿಳೆಯರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
ಈ ಮೊದಲು ನಗರ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಧುಮೇಹ, ಹೃದಯಾಘಾತದಂತಹಾ ಖಾಯಿಲೆಗಳು ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ವ್ಯಾಪಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಕೂಡ ಅತಿದೊಡ್ಡ ಆರೋಗ್ಯ ಸಮಸ್ಯೆಯ ಮೂಲವಾಗಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ ಡಾ.ಮಂಜುನಾಥ್ ವಾಯು ಮಾಲಿನ್ಯದಿಂದಾಗಿ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಆಲಸ್ಯ ಬಿಟ್ಟು, ಸಮತೋಲಿತ ಆಹಾರ ಸೇವನೆ ಮಾಡಿದರೆ ಹಲವು ಖಾಯಿಲೆಗಳಿಂದ ದೂರ ಉಳಿಯಬಹುದು ಎಂದ ಅವರು ನೆರೆ-ಹೊರೆಯವರನ್ನು ಪ್ರೀತಿಸಿ, ಜನರೊಂದಿಗೆ ಸಂತೋಷದಿಂದ ಬೆರೆಯಿರಿ. ಸಂತಸದಿಂದ ದಾನ ಮಾಡಿ, ಕೂಡಿ ಬಾಳಿ. ಎಲ್ಲರನ್ನೂ ಪ್ರೀತಿಸಿರಿ, ಸಂತೋಷವಾಗಿರುವ ವ್ಯಕ್ತಿಯ ಹತ್ತಿರ ಯಾವ ಕಾಯಿಲೆಯೂ ಬರಲಾರದು. ಮಿತ ಸಿರಿವಂತಿಕೆಯ ಜೀವನ ನಡೆಸಿ ಒತ್ತಡ ರಹಿತವಾದ ಜೀವನ ಮಾಡಿ ಎಂದು ಅವರು ಮಾಹಿತಿ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಹಾ ಪ್ರಿಯರು ತಿಳಿದುಕೊಂಡಿರಬೇಕಾದ ಅತಿ ಮುಖ್ಯ ಮಾಹಿತಿಗಳು https://t.co/qRjNOVqDe4
— Saaksha TV (@SaakshaTv) February 3, 2021
ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ – ಇಲ್ಲಿದೆ ಮಾಹಿತಿ https://t.co/emIFsqWiAo
— Saaksha TV (@SaakshaTv) February 4, 2021







