ಉತ್ತರಕಾಂಡ್ ನಲ್ಲಿ ಹಿಮಕುಸಿತ : ಬೇಸರ ವ್ಯಕ್ತಪಡಿಸಿದ ಅಮೆರಿಕಾ..!
ಅಮೆರಿಕಾ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮನದಿ ಸ್ಫೋಟದಲ್ಲಿ ಈವರೆಗೂ ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 200 ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ಅಮೆರಿಕ ತೀವ್ರ ಆಘಾತ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯೊಂದ್ರಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಅವರು ಈ ಸವಾಲಿನ ಸಂಕಷ್ಟ ಸಮಯದಲ್ಲಿ ನಮ್ಮ ಚಿಂತನೆಗಳು ಭಾರತೀಯ ಸ್ನೇಹಿತರು ಮತ್ತು ಪಾಲುದಾರರೊಂದಿಗೆ ಇರುತ್ತವೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪ ಸಲ್ಲಿಸುವುದಾಗಿ, ಆಶಿಸುವುದಾಗಿ ತಿಳಿಸಿದ್ದಾರೆ. ಹಿಮನದಿ ಸ್ಪೋಟದಿಂದಾಗಿ ಈವರೆಗೂ 176ಕ್ಕೂ ಅಧಿಕ ಮಂದಿ ಜನರು ನಾಪತ್ತೆಯಾಗಿದ್ದಾರೆ. ಇದರಲ್ಲಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೂ ಸೇರಿದ್ದಾರೆ. ಸದ್ಯ ರಕ್ಷಣಾ ಪಡೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು ರಕ್ಷಾಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಉತ್ತರರಾಂಡ್ ನಲ್ಲಿ ಹಿಮಕುಸಿತ : ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಿಬ್ಬಂದಿಗಳಿಂದ ಹರಸಾಹಸ..!
ಉತ್ತರಕಾಂಡ್ ನಲ್ಲಿ ಹಿಮಕುಸಿತ: 32 ಮೃತದೇಹ ಪತ್ತೆ, 206 ಮಂದಿ ನಾಪತ್ತೆ..!
ಎಲ್ಪಿಜಿ ಸಿಲಿಂಡರ್ ಗೊಡೌನ್ನಲ್ಲಿ ಸ್ಪೋಟ – 4 ಮಂದಿಗೆ ಗಾಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel