ಮಹಮ್ಮದ್ ಸೀರಾಜ್ ಸ್ವಭಾವಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಚಿನ್ ತೆಂಡುಲ್ಕರ್
ಮಹಮ್ಮದ್ ಸೀರಾಜ್… ಮೈದಾನದಲ್ಲಿ ಅವರ ವರ್ತನೆಯನ್ನು ನೋಡಿದಾಗ ಸ್ವಲ್ಪ ಅತಿರೇಕವಾಗಿ ಅಡ್ತರೆ ಅಂತ ಅನ್ನಿಸುತ್ತೆ. ಆದ್ರೆ ಹಾಗಿಲ್ಲ.
ಅದು ಮಹಮ್ಮದ್ ಸೀರಾಜ್ ಅವರ ಸ್ವಭಾವ ಅಷ್ಟೇ. ಸೀರಾಜ್ ಒಬ್ಬ ಆಟಗಾರ ಮಾತ್ರವಲ್ಲ. ಮಾನವೀಯತೆ ಇರುವಂತಹ ವ್ಯಕ್ತಿತ್ವ. ಅದಕ್ಕಿಂತ ಮುಖ್ಯವಾಗಿ ಒಬ್ಬ ಅತ್ಯಬ್ಧುತ ಟೀಮ್ ಮ್ಯಾನ್.
ತಂಡದ ಹಿತಕ್ಕಾಗಿ ಎಂಥ ಸವಾಲುಗಳನ್ನು ಸ್ವೀಕರಿಸಲು ಸಿದ್ಧವಾಗಿರುತ್ತಾರೆ. ಹಾಗೇ ತಂಡದ ಗೆಲುವು ಹಾಗೂ ಸಹ ಆಟಗಾರರ ಯಶಸ್ಸನ್ನು ಸಂಭ್ರಮಿಸುವ ಗುಣವನ್ನು ಹೊಂದಿದ್ದಾರೆ.
ಚೆನ್ನೈ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಶತಕ ದಾಖಲಿಸಿದ್ದರು. ಆದ್ರೆ ಮಹಮ್ಮದ್ ಸೀರಾಜ್ ಅವರ ಸಂಭ್ರಮವನ್ನು ನೋಡಿದಾಗ ಅಶ್ವಿನ್ ಶತಕ ಸಿಡಿಸಿದ್ದೋ ಅಥವಾ ಸೀರಾಜ್ ಶತಕ ಸಿಡಿಸಿದ್ದೋ ಅನ್ನೋ ಅನುಮಾನ ಕೂಡ ಮೂಡಿತ್ತು.
ಯಾಕಂದ್ರೆ ಸೀರಾಜ್ ಅವರ ಸಂಭ್ರಮ ಆ ಮಟ್ಟದಲ್ಲಿತ್ತು. ಸಹ ಆಟಗಾರ ಶತಕ ಸಿಡಿಸಿದ್ದ ಸಂಭ್ರಮವನ್ನು ತಾನೇ ಶತಕ ಸಿಡಿಸಿದ ಹಾಗೇ ಸಂಭ್ರಮಿಸಿರುವ ಪರಿಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಚಿನ್ ಕೂಡ ಸೀರಾಜ್ ಅವರ ವರ್ತನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸೀರಾಜ್ ಅವರ ಸ್ವಭಾವದ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ. ಸಹ ಆಟಗಾರನ ಯಶಸ್ಸನ್ನು ಸಂಭ್ರಮಿಸಿರುವುದನ್ನು ನಾನು ನೋಡಿ ಎಂಜಾಯ್ ಮಾಡಿದ್ದೆ. ಇದು ನಿಜವಾದ ಕ್ರೀಡಾ ಸ್ಪೂರ್ತಿ ಎಂದು ಸಚಿನ್ ತೆಂಡುಲ್ಕರ್ ಅವರು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಮಹಮ್ಮದ್ ಸೀರಾಜ್ ಅವರು ಆಸ್ಟ್ರೇಲಿಯಾ ಪ್ರವಾಸದ ವೇಳೆಯಲ್ಲೂ ಇದೇ ರೀತಿ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅಭ್ಯಾಸ ಪಂದ್ಯದ ವೇಳೆ ಜಸ್ಪ್ರಿತ್ ಬೂಮ್ರಾ ಹೊಡೆದ ಚೆಂಡು ಬೌಲರ್ ತಲೆಗೆ ಹೊಡೆದಿತ್ತು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ಮಹಮ್ಮದ್ ಸೀರಾಜ್ ರನ್ ಓಡುವ ಬದಲು ಬ್ಯಾಟ್ ನೆಲಕ್ಕೆ ಎಸೆದು ಎದುರಾಳಿ ಬೌಲರ್ ನ ಸಹಾಯಕ್ಕೆ ಬಂದಿದ್ದರು.
ಅದೇ ರೀತಿ ಆಸ್ಟ್ರೇಲಿಯಾ ಸರಣಿಯ ವೇಳೆ ತನ್ನ ತಂದೆಯನ್ನು ಕಳೆದುಕೊಂಡಾಗ ತವರಿಗೆ ಬಂದಿರಲಿಲ್ಲ. ಬಿಸಿಸಿಐ ಅನುಮತಿ ನೀಡಿದ್ರೂ ಮಹಮ್ಮದ್ ಸೀರಾಜ್ ಸರಣಿಯನ್ನು ಅರ್ಧದಲ್ಲೇ ಬಿಟ್ಟು ಬರಲಿಲ್ಲ.
ಹೀಗೆ ಮಹಮ್ಮದ್ ಸೀರಾಜ್ ತನ್ನ ವರ್ತನೆ ಮತ್ತು ಸ್ವಭಾವದ ಮೂಲಕವೂ ಗಮನ ಸೆಳೆದಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಮಹಮ್ಮದ್ ಸೀರಾಜ್ ಗೆ ಕಷ್ಟಗಳು ಹೇಗಿರುತ್ತವೆ ಎಂಬುದು ಚೆನ್ನಾಗಿ ಗೊತ್ತು. ಕೇವಲ ಒಬ್ಬ ಆಟಗಾರನಲ್ಲದೇ ತನ್ನ ಮಾನವೀಯ ಗುಣಗಳ ಮೂಲಕವೂ ಮಹಮ್ಮದ್ ಸೀರಾಜ್ ಎಲ್ಲರಿಗೂ ಇಷ್ವವಾಗುತ್ತಾರೆ.








