ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡಿ ದೇಶವೇ ಸ್ತಬ್ಧವಾಗಿದೆ. ಮನೆಯಿಂದ ಯಾರು ಸಹ ಹೊರಬರುವಂತಿಲ್ಲ. ಹಿರಿಯರು, ಕಿರಿಯರು ವಾಕಿಂಗ್ ಗೆ ಹೋಗುವಂತಿಲ್ಲ. ಇದರಿಂದಾಗಿ ಲಾಲ್ ಬಾಗ್,ಕಬ್ಬನ್ ಪಾರ್ಕ್, ರೆಸ್ ಕೋರ್ಸ್ ರಸ್ತೆ ಯಲ್ಲಿರುವ ಪಕ್ಷಿಗಳಿಗೆ ಆಹಾರದ ತೊಂದರೆ ಆಗಿದೆ. ಲಾಕ್ ಡೌನ್ ಗೂ ಮುನ್ನ ವಾಕಿಂಗ್ ಗೆ ಬಂದ ಜನ ಪಕ್ಷಿಗಳಿಗೆ ತಿನ್ನಲು ಧವಸ- ಧಾನ್ಯಗಳು ಹಾಕುತ್ತಿದ್ದರು. ಆದರೆ ಲಾಕ್ ಡೌನ್ ಆದ ಮೇಲೆ ಪಕ್ಷಿಗಳಿಗೆ ಆಹಾರದ ಕೊರತೆ ಉಂಟಾಗಿದೆ. ಇದನ್ನ ಅರಿತ ಪಕ್ಷಿ ಪ್ರಿಯರು ಪಕ್ಷಿಗಳಿಗೆ ಆಹಾರ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಕಂದಾಯ ಸಚಿವ ಆರ್.ಅಶೋಕ್ ಪಕ್ಷಿಗಳಿಗೆ ಧವಸ - ಧಾನ್ಯ- ಕಾಳು 21 ಚೀಲಗಳನ್ನು ನೀಡಿದ್ದಾರೆ. ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಮತ್ತು ಉದ್ಯಾನವನಗಳ ಭದ್ರತಾ ಸಿಬ್ಬಂದಿಗಳ ಕೈಯಲ್ಲಿ ಆಹಾರ ನೀಡಲಾಗಿದೆ. ಆಹಾರ ನೀಡುವ ಸಮಯ ಸಚಿವ ಆರ್ ಅಶೋಕ್ ಮತ್ತು ಸಚಿವ ಎಸ್.ಟಿ.ಸೋಮಶೇಖರ್ ಪಕ್ಷಿಗಳಿಗೆ ಆಹಾರ ಹಾಕಿದರು.
80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...








