ಟೆಕ್ನಾಲಜಿ ಸಂಬಂಧಿತ ಸುದ್ದಿಗಳು..!
ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ಇನ್ಸ್ಟಾಗ್ರಾಂ ನಿಂದ ಹೊಸ ಫೀಚರ್ ಲಾಂಚ್ : 4 ಲೈವ್ ರೂಮ್ ಫೀಚರ್ ನ ವಿಶೇಷತೆಗಳೇನು..!
ಇನ್ಸ್ಟಾಗ್ರಾಂ ನಿಂದ ಹೊಸ ಫೀಚರ್ ಲಾಂಚ್ : 4 ಲೈವ್ ರೂಮ್ ಫೀಚರ್ ನ ವಿಶೇಷತೆಗಳೇನು..!
ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಇನ್ಸ್ಟಾಗ್ರಾಂ ಇತ್ತೀಚೆಗೆ ಗ್ರಾಹಕರ ಅಭಿರುಚಿಕಗಳನ್ನ ಅರಿತು ಹೊಸ ಹೊಸ ಅಪ್ ಡೇಟ್ ಗಳನ್ನ ನೀಡುತ್ತಾ ಬಳಕೆದಾರರಿಗೆ ಅನುಕೂಲಗಳನ್ನ ಮಾಡಿ ಕೊಡುತ್ತಿದೆ. ಅದ್ರಂತೆ ಇದೀಗ ಸೂಪರ್ ಎಕ್ಸೈಟೆಡ್ ಆಗುವಂತಹ ಮತ್ತೊಂದು ಫೀಚರ್ ಲಾಂಚ್ ಮಾಡಿದೆ.
ಹೌದು ಜಾಗತಿಕವಾಗಿ ಇತ್ತೀಚೆಗೆ ಹೊಸದಾಗಿ 4 ಲೈವ್ ರೂಮ್ ಫೀಚರ್ ಲಾಂಚ್ ಮಾಡಿದೆ. ಈ ಫೀಚರ್ ನಿಂದಾಗಿ ಒಟ್ಟಿಗೆ 4 ಮಂದಿ ಲೈವ್ ಚಾಟ್ ನಡೆಸಬಹುದಾಗಿದೆ. ಈ ಹಿಂದೆ ಕೇವಲ ಇಬ್ಬರು ಮಾತ್ರವೇ ಲೈವ್ ಚಾಟ್ ಮಾಡಬಹುದಾಗಿತ್ತು. ಈಗ 4 ಕ್ಕೆ ವಿಸ್ತರಣೆ ಮಾಡಲಾಗಿದೆ.
ಈ ಲೈವ್ ರೂಮ್ ಎಲ್ಲ ಫಾಲೋವರ್ಸ್ ಗೆ ಕಾಣಿಸುತ್ತೆ. ಲೈವ್ ರೂಮ್ ಗೆ ಯಾರು ಬೇಕಾದರೂ ಸೇರಲು ರಿಕ್ವೆಸ್ಟ್ ಕಳುಹಿಸಬಹುದು.ಬ್ಲಾಕ್ ಮಾಡಿದವರನ್ನ ಬಿಟ್ಟು ಉಳಿದವರಿಗೆ ಲೈವ್ ಚಾಟ್ ಸಿಗುತ್ತದೆ. ಇನ್ನೂ ಇದರಿಂದಾಗಿ ಬಳಕೆದಾರರು ಅಫಿಶಿಯಲ್ ಆಗಿ ಮೀಟಿಂಗ್ ಇರಬಹುದು, ಸ್ನೇಹಿತರು ಕುಟುಂಬದರ ಜೊತೆಗೆ ಚಾಟಿಂಗ್ ಇರಬಹುದು , ಬೇರೆ ಕ್ರಿಯೇಟರ್ಸ್ ಗಳ ಜೊತೆಗೆ ಚಾಟಿಂಗ್ ಬೇಕಾದ್ರೂ ಮಾಡಬಹುದು.
2023ರ ವೇಳೆಗೆ ಲಾಂಚ್ ಆಗಲಿದೆ ಫೋಲ್ಡೇಬಲ್ ಐಫೋನ್..!
2023ರ ವೇಳೆಗೆ ಲಾಂಚ್ ಆಗಲಿದೆ ಫೋಲ್ಡೇಬಲ್ ಐಫೋನ್..!
ಇತ್ತೀಚೆಗೆ ಫೋಲ್ಡಿಂಗ್ ಸ್ಮಾರ್ಟ್ ಫೋನ್ಸ್ ಗಳು ಸಾಕಷ್ಟು ಸುದ್ದಿಯಲ್ಲಿವೆ. ಸ್ಯಾಮ್ ಸಂಗ್, ಹವಾಯಿ, ಮೋಟೋರೋಲಾ ಕಂಪನಿಗಳು ಈಗಾಗಲೇ ಫೋಲ್ಡೇಬಲ್ ( ಮಡಿಚಬಲ್ಲ) ಫೋನ್ ಗಳನ್ನ ಮಾರ್ಕೆಟ್ ನಲ್ಲಿ ಲಾಂಚ್ ಮಾಡಿ ಸ್ಮಾರ್ಟ್ ಫೋನ್ ಪ್ರಿಯರಿಗೆ ಗಿಫ್ಟ್ ನೀಡಿವೆ. ಆದ್ರೆ ಈ ಮೊಬೈಲ್ ಗಳು ಸಿಕ್ಕಾಪಟ್ಟೆ ದುಬಾರಿಯೂ ಹೌದು. ಅದರಂತೆಯೇ ಇದೀಗ ಐಫೋನ್ ನಲ್ಲೂ ಫೋಲ್ಡೇಬಲ್ ಮಾಡೆಲ್ ಲಾಂಚ್ ಗಾಗಿ ಬೇಡಿಕೆಯಿದೆ.
ಹೌದು ಫೋಲ್ಡೇಬಲ್ ಐಫೋನ್ ( Foldable Iphone) ಲಾಂಚಿಂಗ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ಐಫೋನ್ ಪ್ರಿಯರು ಹೊಸ ವಿನ್ಯಾಸದ ಮಾಡೆಲ್ ಲಾಂಚ್ ಆಗುವುದನ್ನ ಕಾಯುತ್ತಿದ್ದಾರೆ. ಟಾಪ್ ಆಪಲ್ ಅನಾಲಿಸ್ಟ್ ಮಿಂಗ್ ಚಿ ಕುವಾ ಅವರು ಹೊಸ ಮಾಡೆಲ್ ಲಾಂಚ್ ಬಗ್ಗೆ ಮಾಹಿತಿ ನೀಡಿದ್ದಾರೆ. 2023ರ ವೇಳೆಗೆ ಈ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಪ್ಲಾನ್ ಮಾಡಿಕೊಂಡಿರೋದಾಗಿ ತಿಳಿಸಿದ್ದಾರೆ.
ಟೆಲಿಗ್ರಾಮ್ ನಿಂದ ಹೊಸ ಫೀಚರ್ ಅಪ್ ಡೇಟ್ : ಏನಿದರ ವಿಷೇಶತೆಗಳು..!
ಟೆಲಿಗ್ರಾಮ್ ನಿಂದ ಹೊಸ ಫೀಚರ್ ಅಪ್ ಡೇಟ್ : ಏನಿದರ ವಿಷೇಶತೆಗಳು..!
ಪ್ರಸಿದ್ಧ ಸಾಮಾಜಿಕ ಜಾಲತಾಣ ಮಾಧ್ಯಮವಾಗಿರುವ ಇನ್ಸ್ ಸ್ಟೆಂಟ್ ಮೆಸೇಜಿಂಗ್ ಆಪ್ ಟೆಲಿಗ್ರಾಮ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನ ಅಪ್ ಡೇಟ್ ಮಾಡಲು ಹೊರಟಿದೆ. ಇದೊಂದು ಆಟೋ ಡಿಲೀಟ್ ಫೀಚರ್ ಆಗಿದ್ದು, ಬಳಕೆದಾರರ ಎಲ್ಲಾ ಮೆಸೇಜ್ ಗಳು ಆಟೋ ಡಿಲೀಟ್ ಆಗುವ ಆಪ್ಶನ್ ಹೊಂದಿದೆ. ತನ್ನ ಅಧಿಕೃತ ಖಾತೆ ಮುಖಾಂತರ ಟೆಲಿಗ್ರಾಮ ಅಪ್ ಡೇಟ್ ಫೀಚರ್ ಬಗ್ಗೆ ಮಾಹಿತಿ ತಿಳಿಸಿದೆ.
ತ್ತೀಚೆಗೆ ವಾಟ್ಸಾಪ್ ತನ್ನ ಪ್ರೈವೆಸಿ ನೀತಿಯನ್ನ ಘೋಷಣೆ ಮಾಡಿದ ಬಳಿಕ ಲಕ್ಷಾಂತರ ಜನರು ವಾಟ್ಸಾಪ್ ಗೆ ವಿದಾಯ ಹೇಳಿ ಟೆಲಿಗ್ರಾಮ್ ನತ್ತ ಮುಖ ಮಾಡಿದ್ದಾರೆ. ಹೀಗಾಗಿ ಬಳಕೆದಾರರ ಅನುಕೂಲಕ್ಕಾಗಿ ಟೆಲಿಗ್ರಾಮ್ ಹೊಸ ಹೊಸ ಅಪ್ ಡೇಟ್ ಗಳನ್ನ ನೀಡಲು ಮುಂದಾಗುತ್ತಿದೆ. ಅಂದ್ಹಾಗೆ ಟೆಲಿಗ್ರಾಮ್ ನ ಖಾಸಗಿ ಚಾಟ್ ಗಳ ಆಟೋ ಡಿಲೀಟಿಂಗ್ ಆಯ್ಕೆ ಮುಂಚಿನಿಂದಲೇ ಟೆಲಿಗ್ರಾಂನಲ್ಲಿ ಇದೆ. ಆದ್ರೆ ಇದನ್ನ ಇನ್ನಷ್ಟು ಉತ್ತಮಗೊಳಿಸುವ ಜೊತೆಗೆ ಬಳಕೆದಾರರ ಸುರಕ್ಷತೆ ಗೌಪ್ಯತೆ ಕಾಪಾಡುವ ಮತ್ತಷ್ಟು ಉತ್ತಮ ಫೀಚರ್ ಗಳನ್ನ ಅಪ್ ಡೇಟ್ ಮಾಡಲು ಟೆಲಿಗ್ರಾಮ್ ಮುಂದಾಗಿದೆ. ಇನ್ನೂ ಈ ಹೊಸ ಫೀಚರ್ ನ ಮೂಲಕ 24 ಗಂಟೆಗಳ ಒಳಗಿನ ಮೆಸೇಜ್ ಗಳ ಡಿಲೀಟ್ ಗೂ ಟೈಮ್ ಸೆಟ್ ಮಾಡಿಡುವ ಆಪ್ಶನ್ ಸಹ ಸಿಗಲಿದೆ.
2025ರ ವೇಳೆಗೆ ಸಿಂಪಾಪುರಕ್ಕೆ 12 ಲಕ್ಷ ಕೌಶಲಯುಕ್ತ ಡಿಜಿಟಲ್ ನೌಕರರು ಬೇಕಾಗಿದ್ದಾರೆ..!
2025ರ ವೇಳೆಗೆ ಸಿಂಪಾಪುರಕ್ಕೆ 12 ಲಕ್ಷ ಕೌಶಲಯುಕ್ತ ಡಿಜಿಟಲ್ ನೌಕರರು ಬೇಕಾಗಿದ್ದಾರೆ..!
ಸಿಂಗಾಪುರ್ : ಸಿಂಗಾಪುರ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗಾಗಿ 2025ರ ವೇಳೆಗೆ 12 ಲಕ್ಷ ಕೌಶಲಯುಕ್ತ ಡಿಜಿಟಲ್ ನೌಕರರ ಅಗತ್ಯವಿದೆ ಎಂಬ ಅಂಶ ಅಮೆಜಾನ್ ವೆಬ್ ಸರ್ವೀಸಸ್ ನವರು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ವರದಿಯಲ್ಲಿ ಈಗ ಇಂತಹ ನೌಕರರು 22 ಲಕ್ಷ ಇದ್ದು ಮುಂದೆ ಈ ಪ್ರಮಾಣ ಶೇ 55ರಷ್ಟು ಹೆಚ್ಚಾಗಲಿದೆ ಎಂಬುದನ್ನೂ ತಿಳಿಸಲಾಗಿದೆ. ಭವಿಷ್ಯದ ಡಿಜಿಟಲ್ ಕೌಶಲ್ಯದ ಸವಾಲುಗಳು ನೌಕರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವೆಬ್ ಸರ್ವೀಸಸ್ ಆಸ್ಟ್ರೇಲಿಯಾ, ಭಾರತ, ಇಂಡೊನೇಷ್ಯಾ, ಜಪಾನ್, ಸಿಂಗಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ಸಮೀಕ್ಷೆ ನಡೆಸಿದ್ದು ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.
ಸಮೀಕ್ಷೆ ನಡೆಸಿದ 6 ರಾಷ್ಟ್ರಗಳ, 3 ಸಾವಿರ ವ್ಯಕ್ತಿಗಳ ಪೈಕಿ ಸಿಂಗಾಪುರದಲ್ಲಿ 543 ಮಂದಿಯನ್ನು ಸಂದರ್ಶಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಪ್ರಸ್ತುತ ಸಿಂಗಪುರದ 10 ನೌಕರರಲ್ಲಿ ಆರು ಮಂದಿ ಈಗಾಗಲೇ ಡಿಜಿಟಲ್ ಕೌಶಲವಿರುವ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಈ ಪ್ರಕಾರ, 6 ರಾಷ್ಟ್ರಗಳ ಆರ್ಥಿಕ ಸ್ಥಿತಿಯಲ್ಲಿ 64 % ಮೂಲಕ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ 2ನೇ ಸ್ಥಾನದಲ್ಲಿದೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ ನಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಂದ್..!
ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ ನಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಂದ್..!
ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಗಳು 11 ದಿನಗಳ ಕಾಲ ಬಂದ್ ಆಗಲಿವೆ. ಅಂದರೆ ಬ್ಯಾಂಕ್ ಗಳಲ್ಲಿ ಒಟ್ಟು 11 ದಿನಗಳ ರಜೆ ಇರಲಿದೆ.
ಮಾರ್ಚ್ 5 : ಮಿಜೋರಾಂನ ಬ್ಯಾಂಕ್ಗಳಿಗೆ ರಜೆ
ಮಾರ್ಚ್ 7: ಭಾನುವಾರ
ಮಾರ್ಚ್ 11: ಮಹಾಶಿವರಾತ್ರಿ
ಮಾರ್ಚ್ 13: ಎರಡನೇ ಶನಿವಾರ
ಮಾರ್ಚ್ 14: ಭಾನುವಾರ
ಮಾರ್ಚ್ 21: ಭಾನುವಾರ
ಮಾರ್ಚ್ 22: ಬಿಹಾರ ದಿನ
ಮಾರ್ಚ್ 27: ನಾಲ್ಕನೇ ಶನಿವಾರ
ಮಾರ್ಚ್ 28: ಭಾನುವಾರ
ಮಾರ್ಚ್ 29: ಧುಲೇತಿ
ಮಾರ್ಚ್ 30: ಹೋಳಿ








