2025ರ ವೇಳೆಗೆ ಸಿಂಪಾಪುರಕ್ಕೆ 12 ಲಕ್ಷ ಕೌಶಲಯುಕ್ತ ಡಿಜಿಟಲ್ ನೌಕರರು ಬೇಕಾಗಿದ್ದಾರೆ..!
ಸಿಂಗಾಪುರ್ : ಸಿಂಗಾಪುರ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗಾಗಿ 2025ರ ವೇಳೆಗೆ 12 ಲಕ್ಷ ಕೌಶಲಯುಕ್ತ ಡಿಜಿಟಲ್ ನೌಕರರ ಅಗತ್ಯವಿದೆ ಎಂಬ ಅಂಶ ಅಮೆಜಾನ್ ವೆಬ್ ಸರ್ವೀಸಸ್ ನವರು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ವರದಿಯಲ್ಲಿ ಈಗ ಇಂತಹ ನೌಕರರು 22 ಲಕ್ಷ ಇದ್ದು ಮುಂದೆ ಈ ಪ್ರಮಾಣ ಶೇ 55ರಷ್ಟು ಹೆಚ್ಚಾಗಲಿದೆ ಎಂಬುದನ್ನೂ ತಿಳಿಸಲಾಗಿದೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ : ಮಾರ್ಚ್ ನಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಂದ್..!
ಭವಿಷ್ಯದ ಡಿಜಿಟಲ್ ಕೌಶಲ್ಯದ ಸವಾಲುಗಳು ನೌಕರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವೆಬ್ ಸರ್ವೀಸಸ್ ಆಸ್ಟ್ರೇಲಿಯಾ, ಭಾರತ, ಇಂಡೊನೇಷ್ಯಾ, ಜಪಾನ್, ಸಿಂಗಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ಸಮೀಕ್ಷೆ ನಡೆಸಿದ್ದು ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.
ಇದು ಟ್ರೇಲರ್ ಅಷ್ಟೇ, ಪಿಚ್ಚರ್ ಅಭಿ ಬಿ ಬಾಕಿ ಹೆ..! ಮುಖೇಶ್ ಅಂಬಾನಿಗೆ ಎಚ್ಚರಿಕೆ..!
ಸಮೀಕ್ಷೆ ನಡೆಸಿದ 6 ರಾಷ್ಟ್ರಗಳ, 3 ಸಾವಿರ ವ್ಯಕ್ತಿಗಳ ಪೈಕಿ ಸಿಂಗಾಪುರದಲ್ಲಿ 543 ಮಂದಿಯನ್ನು ಸಂದರ್ಶಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಪ್ರಸ್ತುತ ಸಿಂಗಪುರದ 10 ನೌಕರರಲ್ಲಿ ಆರು ಮಂದಿ ಈಗಾಗಲೇ ಡಿಜಿಟಲ್ ಕೌಶಲವಿರುವ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಈ ಪ್ರಕಾರ, 6 ರಾಷ್ಟ್ರಗಳ ಆರ್ಥಿಕ ಸ್ಥಿತಿಯಲ್ಲಿ 64 % ಮೂಲಕ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ 2ನೇ ಸ್ಥಾನದಲ್ಲಿದೆ.