ಕಿಡ್ನಾಪ್ ಮತ್ತು ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ : ಆತ್ಮಹತ್ಯೆಗೆ ಶರಣು..!
ಹೈದ್ರಾಬಾದ್: ತೆಲಂಗಾಣದ ಹೈದ್ರಾಬಾದ್ ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ ತಿರುವು ಸಿಕ್ಕಿದೆ. ಹೌದು ಈ ಪ್ರಕರಣದಲ್ಲಿ ಯುವತಿಯ ಅಪಹರಣ ಆಗಿಲ್ಲ. ಅತ್ಯಾಚಾರಕ್ಕೆ ಪ್ರಯತ್ನವೂ ನಡೆದಿಲ್ಲ ಬದಲಾಗಿ ವಿದ್ಯಾರ್ಥಿನಿಯ ಕಟ್ಟಿರಿವ ಕಟ್ಟು ಕಥೆ ಎಂಬುದು ಸಾಬೀತಾಗಿದೆ.
ಆದರೆ ವಿದ್ಯಾರ್ಥಿನಿ ಸುಳ್ಳು ಹೇಳಿದ್ದ ವಿಚಾರ ಪೊಲೀಸರಿಗೆ ಗೊತ್ತಾಗ್ತಿದ್ದಂತೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದ್ರಾಬಾದ್ ಘಾಟ್ಕೇಸರ್ ಸಮೀಪದ ನಾಗಾರಾಮ್ ಗ್ರಾಮದಲ್ಲಿ 19 ವರ್ಷದ ಫಾರ್ಮಸಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಯತ್ನ ಮಾಡಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಈ ಸಂಬಂಧ ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ : ಮರ ಬಿದ್ದು ಐದು ವರ್ಷದ ಬಾಲಕಿ ಸಾವು
ಆದ್ರೆ ಘಟನೆ ನಡೆದ ಎರಡು ವಾರದ ನಂತರ ಪೊಲೀಸರು ಮೊಬೈಲ್ ಸಿಗ್ನಲ್ ಆಧರಿಸಿ ತನಿಖೆ ನಡೆಸಿದಾಗ ಯುವತಿ ಹೇಳಿದ್ದು ಕಟ್ಟು ಕಥೆ ಎಂದು ಬಯಲಾಗಿದೆ. ಆದ್ರೆ ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಯುವತಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದ್ರೆ ಈ ಯುವತಿ ಯಾಕೆ ಈ ರೀತಿ ಮಾಡಿದಳು ಎನ್ನುವುದಕ್ಕೆ ನಿಖರ ಕಾರಣ ತಿಳಿದುಬರಬೇಕಾಗಿದೆ.