ಸ್ಪೈಡರ್ ಮ್ಯಾನ್ ಸ್ಪೀಡ್ ಅಲ್ಲಿ ಬೈಕ್ ರೈಡ್ ಮಾಡಿ ಅರೆಸ್ಟ್ ಆದ ಮಹಿಳೆ..! : Video Viral
ಲೇಡಿ ಬೈಕ್ ರೈಡರ್ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಗುಜರಾತ್ ನ ಸೂರತ್ ನ ಮಹಿಳೆಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಇತ್ತೀಚೆಗೆ ಈ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬೈಕ್ ರೈಡಿಂಗ್ ನ ವಿಡಿಯೋವೊಂದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಆರೋಪದಡಿ ಈಕೆಯನ್ನ ಬಂಧಿಸಲಾಗಿದೆ.
ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಪ್ರಯಾಣಿಕನನ್ನ ಕಾಪಾಡಿದ ಭದ್ರತಾ ಸಿಬ್ಬಂದಿ : VIDEO VIRAL
ಈಕೆ KTM ಬೈಕ್ ಅನ್ನ ಅತಿ ವೇಗದಲ್ಲಿ ಓಡಿಸಿರುವುದು, ಅಲ್ಲಲ್ಲಿ ಕೈ ಬಿಟ್ಟು ವಾಹನ ಚಲಾಯಿಸಿರುವುದು, ಹೈವೇಯಲ್ಲಿ ಸ್ಪೀಡ್ ಆಗಿ ಗಾಡಿ ಓಡಿಸಿದ್ದೂ ಅಲ್ದೇ ವಿಡಿಯೋ ಶೂಟ್ ಮಾಡಿಸಿರುವುದ, ಹೆಲ್ಮೆಟ್ , ಮಾಸ್ಕ್ ಇಲ್ಲದೇ ಇರುವುದು ಇವುಗಳೆಲ್ಲವನ್ನೂ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಎಂದು ಪರಿಗಣಿಸಿರುವ ಪೊಲೀಸರು ಈ ನಡೆ ಗಂಭೀರ ಅಪಘಾತಗಳಿಗೂ ಕಾರಣವಾಗಬಹುದಾಗಿತ್ತು. ಮುಂದೆ ಇದನ್ನೇ ಇತರರು ಅನುಸರಿಸಬಹುದು. ಅವುಗಳಿಂದ ಅಪಘಾತಗಳು ಸಂಭವಿಸಬಹುದೆಂಬ ಕಾರಣದಿಂದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.








