ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಪ್ರಯಾಣಿಕನನ್ನ ಕಾಪಾಡಿದ ಭದ್ರತಾ ಸಿಬ್ಬಂದಿ : VIDEO VIRAL

1 min read

ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಪ್ರಯಾಣಿಕನನ್ನ ಕಾಪಾಡಿದ ಭದ್ರತಾ ಸಿಬ್ಬಂದಿ : VIDEO VIRAL

ಗೋವಾ: ರೈಲ್ವೇ ಇಲಾಖೆ ಸಿಬ್ಬಂದಿ ಎಷ್ಟೋ ಜನ ಪ್ರಯಾಣಿಕರನ್ನ ಸಾವಿನ ದವಡೆಯಿಂದ ಬಚಾವ್ ಮಾಡಿರುವ ವಿಡಿಯೋಗಳು ಆಗಾಗ ವೈರಲ್ ಆಗ್ತಲೇ ಇರುತ್ವೆ. ಆದ್ರೂ ಎಷ್ಟೋ ಜನರು ಆತ್ರಕ್ಕೆ ಬಿದ್ದು ತಮ್ಮ ಜೀವಗಳನ್ನ ಕಳೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಇಂತಹದ್ದೇ ಘಟನೆಯಲ್ಲಿ ರೈಲು ಕೆಳಗೆ ಸಿಲುಕಿ ಸಾವನಪ್ಪಬೇಕಿದ್ದ ವ್ಯಕ್ತಿ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಗೋವಾದ ವಾಸ್ಕೋ ಡ ಗಾಮ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನ ರೈಲ್ವೇ ಸಚಿವಾಲಯವು ಹರಿಬಿಟ್ಟಿದೆ.

ವಿಜಯ ಹಜಾರೆ ಟ್ರೋಫಿ- ಪೃಥ್ವಿ ಶಾ ರನ್ ಮಳೆ ಹಿಂದಿದೆ ಕ್ರಿಕೆಟ್ ದೇವ್ರ ಮಿಂಚು…!

ವಿಡಿಯೋದಲ್ಲಿ ಚಲಿಸುತ್ತಿದ್ದ 02741 ವಾಸ್ಕೋ- ಪಟ್ನಾ ಎಕ್ಸ್ ಪ್ರೆಸ್  ಗೆ ಹತ್ತಲು ಹೋದ ವ್ಯಕ್ತಿಯು ಕಾಲು ಜಾರಿ ಟ್ರೈನ್ ಹಾಗೂ ಫ್ಲಾಟ್ ಫಾರ್ಮ್ ನಡುವಿನ  ಚಿಕ್ಕ ಗ್ಯಾಪ್ ನಲ್ಲಿ ಜಾರಿ ಬೀಳ್ತಾರೆ. ಇದನ್ನ ಗಮನಿಸಿದ RPF ಸಿಬ್ಬಂದಿ ಓಡಿ ಬಂದು ಆ ವ್ಯಕ್ತಿಯನ್ನ ತಕ್ಷಣವೇ ಫ್ಲಾಟ್ ಫಾರ್ಮ್ ನಿಂದ ಮೇಲಕ್ಕೆ ಎಳೆದು ಬಿಡುತ್ತಾರೆ. ಇದರಿಂದ  ಆ ವ್ಯಕ್ತಿ ಸಾವಿನ ದವಡೆಯಿಂದ ಬಚಾವಾಗಿದ್ದಾನೆ. ರಕ್ಷಣೆ ಮಾಡಿರುವವರು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಕೆಎಂ ಪಾಟೀಲ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

ಸಖತ್ ಸದ್ದು ಮಾಡ್ತಿದೆ ‘ಅಮ್ಮ’ ಕಿರುಚಿತ್ರದ ಡೈಲಾಗ್..!

‘ಫೀಲ್ ದ ಪವರ್’ ಅಲ್ಲಿ ಅಪ್ಪು ಪವರ್ ಸೂಪರ್..! ಮಸ್ತಾಗಿದೆ ಯುವರತ್ನ ಲಿರಿಕಲ್ ಸಾಂಗ್

ರಾಗಿಣಿ ಹೊಸ ಸಾಧನೆ : ಶಿವರಾತ್ರಿ ದಿನ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೇನು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd