AIRTEL ME and My ಫ್ಯಾಮಿಲಿ : ಹೊಸ ಪೋಸ್ಟ್ ಪೇಯ್ಡ್ ಆಫರ್ ಕೊಟ್ಟ ಕಂಪನಿ..!
ನವದೆಹಲಿ : ಟೆಲಿಕಾಮ್ ನೆಟ್ ವರ್ಕ್ ಗಳ ದೈತ್ಯ ಕಂಪನಿಯಾಗಿ ಗುರುತಿಸಿಕೊಂಡಿರುವ ಏರ್ ಟೆಲ್ ಗ್ರಾಹಕರಿಗೆ ಹೊಸ ಹೊಸ ಸೌಲಭ್ಯಗಳನ್ನ ನೀಡಲು ಮುಂದಾಗಿದೆ. ಅದರಂತೆ ನೂತನ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಜಾರಿಗೆ ತಂದಿದೆ.
ಹೌದು ಏರ್ ಟೆಲ್ ನ ಪೋಸ್ಟ್‌ಪೇಯ್ಡ್ ಯೋಜನೆ ರೂ. 399 ರಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 500 ಜಿಬಿ ತನಕ ಡಾಟಾ ಸೌಲಭ್ಯ, ಜೊತೆಗೆ ಒಟಿಟಿ ಸೇವೆಗಳು ಸೇರಿದಂತೆ ಇತರೇ ಆಕರ್ಷಕ ಸೌಲಭ್ಯಗಳು ಸೇರಿವೆ. ಇದೊಂದು ಪಕ್ಕಾ ಫ್ಯಾಮಿಲಿ ಪ್ಲ್ಯಾನ್ ಪ್ಯಾಕೇಜ್ ಆಗಿದ್ದು, ಇನ್ನಷ್ಟು ಗ್ರಾಹಕರನ್ನೂ ಸೆಳೆಯಲಿದೆ.
ಇನ್ನೂ ಏರ್ ಟೆಲ್ ನ ಫ್ಯಾಮಿಲಿ ಪ್ಲ್ಯಾನ್ ಬೆಲೆ 749, 999 ಮತ್ತು 1,599 ರೂ. ನಲ್ಲಿ ಲಭ್ಯವಿದೆ. ಪ್ರತ್ಯೇಕ ನಿಯಮಿತ ಆಡ್-ಆನ್ ಸಂಪರ್ಕಕ್ಕೆ ತಿಂಗಳಿಗೆ 249 ರೂ., ಡೇಟಾ ಆಡ್-ಆನ್ ತಿಂಗಳಿಗೆ 99 ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ, ಏರ್‌ಟೆಲ್ ಈ ಆಡ್-ಆನ್‌ಗಳನ್ನು ಉಚಿತವಾಗಿ ಸಿಗಲಿದೆ.
ME and My ಫ್ಯಾಮಿಲಿ ಏರ್‌ಟೆಲ್ ಪೋಸ್ಟ್ ಪೇಯ್ಡ್ ಯೋಜನೆಗಳು ಮೂರು ಬೆಲೆಗಳಲ್ಲಿ ಲಭ್ಯವಿದೆ- 749, 999 ರೂ ಮತ್ತು 1,599 ರೂ. ಮೇಲೆ ತಿಳಿಸಲಾದ ಎಲ್ಲಾ ಮೂರು ಯೋಜನೆಗಳಿಗೆ ಏರ್‌ಟೆಲ್ ಥ್ಯಾಂಕ್ ಬಹುಮಾನಗಳಾದ ಅಮೆಜಾನ್ ಪ್ರೈಮ್ ಸದಸ್ಯತ್ವ, ಒಂದು ವರ್ಷದ ಹ್ಯಾಂಡ್‌ಸೆಟ್ ಪ್ರೊಟೆಕ್ಷನ್, ಶಾ ಅಕಾಡೆಮಿ ಲೈಫ್‌ಟೈಮ್ ಆಕ್ಸೆಸ್, ಜಗ್ಗರ್‌ನಾಟ್ ಬುಕ್ಸ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಪ್ರೀಮಿಯಂ ಮತ್ತು ವಿಂಕ್ ಪ್ರೀಮಿಯಂ ಸಿಗುತ್ತದೆ.
ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮಾಯ: ಪ್ರಜಾಪ್ರಭುತ್ವಕ್ಕೆ ಪ್ರಾಣ ಬಿಡುತ್ತಿರುವ ಜನರು – 138 ಜನರನ್ನ ಕೊಂದ ಮಿಲಿಟರಿ ಆಡಳಿತ – ಚೀನಾ ಕೈವಾಡ..!
3ನೇ ಟಿ20 ಪಂದ್ಯ : ಗೆಲುವೊಂದೇ ಮಂತ್ರ.. ರಾಹುಲ್ ಗೆ ಕೋಕ್ ಸಾಧ್ಯತೆ
ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!
ಒಳುಡುಪುಗಳನ್ನ ಕದಿಯುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್..!
VIDEO VIRAl : ಚಲಿಸುತ್ತಿದ್ದ ಕಾರ್ ಮೇಲೆ ಪುಶ್ ಅಪ್ಸ್ : ಸೀದಾ ಜೈಲು ಸೇರಿದ ಯುವಕ..!








