‘ಸಲಾರ್’ ನಲ್ಲಿ ಪ್ರಭಾಸ್ ಜೊತೆಗೆ ಸ್ಟೆಪ್ ಹಾಕಲಿದ್ದಾರಾ KGF ಸುಂದರಿ..!
ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್ ಸಿನಿಮಾ ಸಲಾರ್ ಇದೀಗ ಮತ್ತೆ ಸುದ್ದಿಯಲ್ಲಿದೆ. KGF ಖ್ಯಾತಿಯ ನಾಯಕಿ ಶ್ರೀನಿಧಿ ಶೆಟ್ಟಿ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಸ್ಟೆಪ್ ಹಾಕಲಿದ್ದಾರೆ ಎನ್ನಲಾಗಿದೆ.
ವಿಶೇಷ ಹಾಡೊಂದರಲ್ಲಿ ಡ್ಯಾನ್ಸ್ ಮಾಡಲು ಶ್ರೀನಿಧಿ ಶೆಟ್ಟಿಗೆ ಸಿನಿಮಾ ತಂಡ ಆಫರ್ ನೀಡಿರೋದಾಗಿ ಗಾಸಿಫ್ ಹರಿದಾಡ್ತಿದೆ. ಅಲ್ಲದೇ ಇದಕ್ಕೆ ಶ್ರೀನಿಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದೂ ಸಹ ಹೇಳಲಾಗಿದೆ.







