ಮಂಗಳೂರು : ಬೆಂಗಳೂರಿನ ಎರಡು ವಾರ್ಡ್ ಗಳು ಸೀಲ್ ಡೌನ್ ಆಗುತ್ತಿದ್ದಂತೆ ರಾಜ್ಯದಾದ್ಯಂತ ಕೆಲವು ಜಿಲ್ಲೆಗಳನ್ನು ಸೀಲ್ ಡೌನ್ ಮಾಡಲಾಗುತ್ತದೆ ಎಂಬ ಚರ್ಚೆಗಳು ಶುರುವಾಗಿದ್ದವು. ಅದರಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೀಲ್ಡ್ ಡೌನ್ ಆಗಲಿದೆ ಎನ್ನುವ ಸುದ್ದಿಯಿಂದ ಅಲ್ಲಿನ ಜನರು ಆತಂಕಗೊಂಡಿದ್ದರು. ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, “ಇದೊಂದು ಸುಳ್ಳು ಸುದ್ದಿ” ಎಂದು ಹೇಳಿದೆ.
“ಈಗಾಗಲೇ ಲಾಕ್ ಡೌನ್ ಇರುವುದರಿಂದ, ಜಿಲ್ಲೆಯನ್ನು ಸಂಪೂರ್ಣವಾಗಿ ಸೀಲ್ಡ್ ಡೌನ್ ಮಾಡುವ ಯಾವ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ರಾಜ್ಯ ಸರಕಾರದಿಂದ ಯಾವ ಸುತ್ತೋಲೆಗಳೂ ಬಂದಿಲ್ಲ” .”ಮುಂದಿನ ಕೆಲವು ದಿನ ಲಾಕ್ ಡೌನ್ ಮುಂದುವರಿಯಲಿದೆ. ಇದನ್ನೇ ನಾವು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದೇವೆಯೇ ಹೊರತು, ಸೀಲ್ಡ್ ಡೌನ್ ಇಲ್ಲ. ಜನರು ವದಂತಿಯನ್ನು ನಂಬಬೇಡಿ” ಎಂದು ಜಿಲ್ಲಾಡಳಿತ, ಸಾರ್ವಜನಿಕರಲ್ಲಿ ಮನವಿ ಮಾಡಿದೆ.








