ಪೊಲೀಸ್ ವಾಹನದ ಮೇಲೆ ಡ್ರಗ್ ಗ್ಯಾಂಗ್ ಗುಂಡಿನ ದಾಳಿ : 13 ಅಧಿಕಾರಿಗಳ ಹತ್ಯೆ..!
ಮೆಕ್ಸಿಕೋ: ಪೊಲೀಸ್ ಬೆಂಗಾವಲು ವಾಹನದ ಮೇಲೆ ಡ್ರಗ್ ಗ್ಯಾಂಗ್ ಗುಂಡಿನ ದಾಳಿ ನಡೆಸಿದೆ. ದಾಳಿ ವೇಳೆ 8 ಪೊಲೀಸರು ಹಾಗೂ 3 ಪ್ರಾಸಿಕ್ಯೂಶನ್ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಘಟನೆ ಬಳಿಕ ಮೆಕ್ಸಿಕೊದ ನೈರುತ್ಯ ಪ್ರದೇಶಗಳು ಹಾಗೂ ಮಾದಕ ವ್ಯಸನಿಗಳು ಹೆಚ್ಚಿರುವ ಪ್ರದೇಶಗಳನ್ನ ಪತ್ತೆಮಾಡಿ ಶೋಧ ಕಾರ್ಯಾಚರಣೆ ನಡೆಸಲಾಗ್ತಿದೆ.
ಸೈನಿಕರು, ನೌಕಾಪಡೆಯವರು ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳು ಈ ಪ್ರದೇಶದಲ್ಲಿ ಭೂ ಮತ್ತು ವಿಮಾನಗಳ ಮೂಲಕ ಕೊಲೆಗಾರರಾಗಿ ಶೋಧ ನಡೆಸುತ್ತಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಸುರಕ್ಷತಾ ವಿಭಾಗದ ಮುಖ್ಯಸ್ಥ ರೊಡ್ರಿಗೋ ಮಾರ್ಟಿನೆಜ್ ಸೆಲಿಸ್ ಹೇಳಿದ್ದಾರೆ.
ಇನ್ನೂ 2019ರಲ್ಲೂ ಇಂತಹದ್ದೇ ಭೀಕರ ಘಟನೆ ಜರುಗಿತ್ತು. ನೆರೆಯ ಮೈಕೋವಕಾನ್ ನಲ್ಲಿ ಬಂದೂಕುಧಾರಿಗಳು ಹೊಂಚು ಹಾಕಿ 14 ಪೊಲೀಸರನ್ನು ಕೊಂದಿದ್ದರು.








